ಕರ್ನಾಟಕ

karnataka

ಅನೈತಿಕ ಸಂಬಂಧ: ಮೈದುನನಿಂದ ವ್ಯಕ್ತಿಯ ಬರ್ಬರ ಹತ್ಯೆ, ವಿಷ ಕುಡಿದ ಅತ್ತಿಗೆ!

By

Published : Nov 19, 2019, 3:49 PM IST

Updated : Nov 19, 2019, 8:11 PM IST

ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯನ್ನು ಮೈದುನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವ್ಯಕ್ತಿಯ ಬರ್ಬರ

ಶಿವಮೊಗ್ಗ: ತನ್ನ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯನ್ನು ಮೈದುನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕು ದೊಡ್ಡಮಟ್ಟಿ ಗ್ರಾಮದ ಮಂಜಪ್ಪ(43) ಕೊಲೆಯಾದವ. ಮಂಜಪ್ಪನನ್ನು ಆಂಜನೇಯ ಎಂಬಾತ ಕೊಲೆ ಮಾಡಿದ್ದಾ‌ನೆ. ಆಂಜನೇಯನ ಅಣ್ಣನ ಹೆಂಡತಿ ಜೊತೆ ಮಂಜಪ್ಪ ಅನೈತಿಕ ಸಂಬಂಧ ಹೊಂದಿದ್ದನಂತೆ. ನಿನ್ನೆ ರಾತ್ರಿ‌ ಆ ಮಹಿಳೆ ತನ್ನ ಗಂಡ ಇಲ್ಲದ ವೇಳೆಯಲ್ಲಿ ಮಂಜಪ್ಪನನ್ನು ಮನೆಗೆ ಕರೆಯಿಸಿಕೊಂಡಿದ್ದಳಂತೆ. ವೆಂಕಟೇಶ ಹಾಗೂ ತನ್ನ ಅತ್ತಿಗೆ ಜೊತೆಗಿರುವುದನ್ನು ಕಂಡ ಆಂಜನೇಯ ಕತ್ತಿಯಿಂದ ವೆಂಟಕೇಶನ ತಲೆಗೆ ಹೊಡೆದಿದ್ದಾ‌ನೆ.

ಪರಿಣಾಮ ಮಂಜಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕೊಲೆ ನಂತರ ಮಹಿಳೆ ಓಡಿ ಹೋಗಿ ವಿಷ ಕುಡಿದ್ದಾಳೆ. ಆಕೆಯನ್ನು ಸದ್ಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆ ಮಾಡಿದ ನಂತ್ರ ಆಂಜನೇಯ ಕುಂಸಿ ಪೊಲೀಸರಿಗೆ ಶರಣಾಗಿದ್ದಾನೆ.

Intro:ಅತ್ತಿಗೆಯೊಂದಿಗೆ ಅನೈತಿಕ ಸಬಂಧ, ಮೈದುನನಿಂದ ಕೊಲೆ.

ಶಿವಮೊಗ್ಗ: ತನ್ನ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಮೈದುನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗ ತಾಲೂಕು ದೊಡ್ಡಮಟ್ಟಿ ಗ್ರಾಮದ ಮಂಜಪ್ಪ(43) ಕೊಲೆಯಾದವ.Body:ಮಂಜಪ್ಪನನ್ನು ಅದೇ ಗ್ರಾಮದ ಆಂಜನೇಯ ಕೊಲೆ ಮಾಡಿದ್ದಾ‌ನೆ. ಆಂಜನೇಯ ಅಣ್ಣನ ಹೆಂಡತಿ ಶಾಂತನ ಜೊತೆ ಮಂಜಪ್ಪ ಅನೈತಿಕ ಸಂಬಂಧ ಹೊಂದಿದ್ದ. ನಿನ್ನೆ ರಾತ್ರಿ‌ ಶಾಂತಮ್ಮ ತನ್ನ ಗಂಡ ವೆಂಕಟೇಶ ಇಲ್ಲದ ವೇಳೆಯಲ್ಲಿ ಮಂಜಪ್ಪನನ್ನು ಮನೆಗೆ ಕರೆಯಿಸಿ ಕೊಂಡಿದ್ದಳು. ವೆಂಕಟೇಶ ಹಾಗೂ ಶಾಂತಮ್ಮ ಒಂದೆ ಕಡೆ ಮಲಗಿದನ್ನು ಕಂಡ ಆಂಜನೇಯ ಕತ್ತಿಯಿಂದ ವೆಂಟಕೇಶನನ್ನು ತಲೆಗೆ ಹೊಡೆದಿದ್ದಾ‌ನೆ.Conclusion:ಮಂಜಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕೊಲೆದ ನಂತ್ರ ಅತ್ತಿಗೆ ಶಾಂತಮ್ಮ ಓಡಿ ಹೋಗಿ ವಿಷ ಕುಡಿದ್ದಾಳೆ.ಶಾಂತಮ್ಮ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೊಲೆ ಮಾಡಿದ ನಂತ್ರ ಆಂಜನೇಯ ಕುಂಸಿ ಪೊಲೀಸರಿಗೆ ಶರಣಾಗಿದ್ದಾನೆ.
Last Updated :Nov 19, 2019, 8:11 PM IST

ABOUT THE AUTHOR

...view details