ಕರ್ನಾಟಕ

karnataka

ರಸ್ತೆ ದಾಟುತ್ತಿದ್ದ ವೇಳೆ ಎಎಸ್ಐಗೆ ಖಾಸಗಿ ಬಸ್ ಡಿಕ್ಕಿ: ಗಂಭೀರ ಗಾಯ

By

Published : Jan 3, 2020, 11:16 PM IST

ರಸ್ತೆ ದಾಟುತ್ತಿದ್ದ ವೇಳೆ ಎಎಸ್ಐ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾಲು‌ ಮುರಿದು‌ ಗಂಭೀರವಾಗಿ‌ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ನಗರ ಪೊಲೀಸ್ ಠಾಣೆ ಎದುರು ನಡೆದಿದೆ.

KN_RMN_04_AXIDENT_ASI_INJURED_7204219
ರಸ್ತೆ ದಾಟುತ್ತಿದ್ದ ವೇಳೆ ಎಎಸ್ಐಗೆ ಖಾಸಗಿ ಬಸ್ ಡಿಕ್ಕಿ: ಕಾಲು ಮುರಿದು ಗಂಭೀರ ಗಾಯ

ರಾಮನಗರ: ರಸ್ತೆ ದಾಟುತ್ತಿದ್ದ ವೇಳೆ ಎಎಸ್ಐ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ನಗರ ಪೊಲೀಸ್ ಠಾಣೆ ಎದುರು ನಡೆದಿದೆ.

ಸಹಾಯಕ‌ ಸಬ್ ಇನ್ಸ್ ಪೆಕ್ಟರ್ ಮಲ್ಲೇಶ್ ಅಪಘಾತಕ್ಕೀಡಾದ ಪೊಲೀಸ್ ಅಧಿಕಾರಿ. ಬೆಂಗಳೂರು‌-ಮೈಸೂರು‌ ಹೆದ್ದಾರಿ‌ ಕ್ರಾಸ್ ಮಾಡಲು‌ ಹೋಗುತ್ತಿದ್ದ ವೇಳೆ‌ ದುರ್ಘಟನೆ‌ ಸಂಭವಿಸಿದೆ. ಅವರ ಕಾಲು ಮುರಿದಿದ್ದು ಎಎಸ್ಐ ಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ‌ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ರಾಮನಗರ : ರಸ್ತೆ ದಾಟುತ್ತಿದ್ದ ವೇಳೆ ಎ.ಎಸ್ ಐ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾಲು‌ ಮುರಿದು‌ ಗಂಬೀರವಾಗಿ‌ ಗಾಯಗೊಂಡಿರುವ ಘಟನೆ ನಡೆದಿದೆ. ಸಹಾಯಕ‌ಸಬ್ ಇನ್ಸ್ಪೆಕ್ಟರ್ ಮಲ್ಲೇಶ್ ಅಪಘಾತಕ್ಕೀಡಾಗಿದ್ದಾರೆ.
ಚನ್ನಪಟ್ಟಣದ ನಗರ ಪೊಲೀಸ್ ಠಾಣೆ ಎದುರೆ ಘಟನೆ ನಡದಿದ್ದು ಠಾಣೆ ಎದುರು‌ ಬೆಂಗಳೂರು‌ ಮೈಸೂರು‌ ಹೆದ್ದಾರಿ‌ ಕ್ರಾಸ್ ಮಾಡಲು‌ ಹೋಗುತ್ತಿದ್ದ ವೇಳೆ‌ ದುರ್ಘಟನೆ‌ ಸಂಭವಿಸಿದೆ. ಕಾಲು ಮುರಿತಕ್ಕೆ ಒಳಗಾದ ಎ ಎಸ್ ಐ ಮಲ್ಲೇಶ್ ಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿದ್ದು ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ‌ ಆಸ್ಪತ್ರೆಗೆ ರವಾನಿಸಲಾಗಿದೆ.
ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದಿರುವ ರಭಸಕ್ಕೆ ಮಲ್ಲೇಶ್ ಅವರ ಕಾಲು ಮುರಿದು ಹೋಗಿದೆ, ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು‌ ತನಿಖೆ‌ ಮುಂದುವರಿಸಿದ್ದಾರೆ.Conclusion:

ABOUT THE AUTHOR

...view details