ಕರ್ನಾಟಕ

karnataka

ಆಶಾ ಕಾರ್ಯಕರ್ತೆಯರಿಗೆ ₹3000 ಸಹಾಯ ಧನ ವಿತರಿಸಿದ ಸಚಿವ ಎಸ್ ಟಿ ಸೋಮಶೇಖರ್..

By

Published : May 9, 2020, 9:31 AM IST

ಆಶಾ ಕಾರ್ಯಕರ್ತೆಯರು, ನರ್ಸ್ ಹಾಗೂ ವೈದ್ಯರ ಸೇವೆ ಶ್ಲಾಘನೀಯ. ಆಶಾ ಕಾರ್ಯಕರ್ತೆಯರ ಜೊತೆಯಲ್ಲಿ ಸೇವೆ ಸಲ್ಲಿಸುತ್ತಿರುವ 79 ನರ್ಸ್​ಗಳಿಗೂ ಸಹಾಯಧನ ನೀಡಲು ನಿರ್ಧಾರ.

3000 subsidy  Distributed To Asha activists
ಆಶಾ ಕಾರ್ಯಕರ್ತೆಯರಿಗೆ 3000 ಸಹಾಯಧನ ವಿತರಣೆ

ರಾಮನಗರ: ಕೊರೊನಾ‌ ವಾರಿಯರ್ಸ್ ಸೇವೆ ನಿಜಕ್ಕೂ ಶ್ಲಾಘನೀಯ. ಅವರಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಆದರೆ, ಅವರನ್ನು ಗೌರವಿಸುವುದಕ್ಕಾಗಿ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ನಗರದ 225 ಆಶಾ ಕಾರ್ಯಕರ್ತೆಯರಿಗೆ ₹3000 ಸಹಾಯ ಧನವನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ವಿತರಿಸಿದರು.

ನಗರದ‌ ಹೊರವಲಯದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು, ನರ್ಸ್ ಹಾಗೂ ವೈದ್ಯರ ಸೇವೆ ಶ್ಲಾಘನೀಯ ಹಾಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಕೆಲಸವನ್ನು ಗೌರವಿಸುವ ದೃಷ್ಠಿಯಿಂದ ₹3000 ಸಹಾಯ ಧನವನ್ನು ಒಂದು ಸಣ್ಣ ಸೇವೆಯಾಗಿ ನಾವು ಅವರಿಗೆ ಸಲ್ಲಿಸುತ್ತಿದ್ದೇವೆ ಎಂದರು. ಆಶಾ ಕಾರ್ಯಕರ್ತೆಯರ ಜೊತೆಯಲ್ಲಿ ಸೇವೆ ಸಲ್ಲಿಸುತ್ತಿರುವ 79 ನರ್ಸ್​ಗಳಿಗೂ ಸಹಾಯಧನ ನೀಡಲಾಗುವುದು ಎಂದರು.

ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರಿಗೆ ತಿಳಿಸಲಾಗಿದೆ ಎಂದರು. ಇನ್ನು ಪ್ರತಿದಿನ 10,000ಕ್ಕೂ ಹೆಚ್ಚು ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಹಾಗೂ ಕೋವಿಡ್ ರೋಗ ಕಂಡು ಬಂದವರನ್ನು ಗುಣಮುಖ ಮಾಡಲು ಶ್ರಮಿಸಲಾಗುತ್ತಿದೆ ಎಂದರು.

ಹೊರ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್​ನಲ್ಲಿಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರಿಗೆ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ನಿಗಾ ವಹಿಸಲಿದ್ದಾರೆ. ಎಲ್ಲಾ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು ಸಚಿವ ಎಸ್‌.ಟಿ ಸೋಮಶೇಖರ್‌.

ABOUT THE AUTHOR

...view details