ಕರ್ನಾಟಕ

karnataka

ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಕನ್ನ ಹಾಕಲು ವಿಫಲಯತ್ನ!

By

Published : Aug 5, 2019, 10:01 PM IST

ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ವಿಫಲಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಕನ್ನ ಹಾಕಲು ವಿಫಲಯತ್ನ..!

ರಾಮನಗರ: ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ವಿಫಲಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಕನ್ನ ಹಾಕಲು ವಿಫಲಯತ್ನ

ಕಳ್ಳರು ಬ್ಯಾಂಕ್​ನ ಬಾಗಿಲ ಬೀಗ ಒಡೆದು ಒಳನುಗ್ಗಿ ಸಿಸಿ ಟಿವಿಗೆ ಅಳವಡಿಸಿದ್ದ ಕೇಬಲ್ ವೈರ್ ಕಟ್ ಮಾಡಿದ್ದು, ಮತ್ತೊಂದು ಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಕಳ್ಳತನ ಮಾಡಲು ಸಹಾಯಕ್ಕೆ ತಂದಿದ್ದ ಗ್ಯಾಸ್ ಸಿಲಿಂಡರ್​, ಹಾರೆ, ಗ್ಯಾಸ್‌ ಕಟರ್, ಸಣ್ಣಪುಟ್ಟ ಉಪಕರಣಗಳನ್ನು ಸ್ಥಳದಲ್ಲಿಯೇ ಬಿಟ್ಟು ಬರಿಗೈಯಲ್ಲಿ ಪರಾರಿಯಾಗಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಸೋಮವಾರ ಎಂದಿನಂತೆ ಬ್ಯಾಂಕಿನ ಕೆಲಸಕ್ಕೆ ಹಾಜರಾದಾಗ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನಿಸಿರುವುದು ತಿಳಿದು ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಗ್ರಾಮಾಂತರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದು ಕಳ್ಳರನ್ನು ಹಿಡಿಯಲು‌ ಬಲೆ‌ ಬೀಸಿದ್ದಾರೆ.

Intro:nullBody:ರಾಮನಗರ : ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಭಾನುವಾರ ತಡ ರಾತ್ರಿ ವಿಫಲ‌ಯತ್ನ‌ ನಡೆಸಿದ್ದಾರೆಂಬುದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿನ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನಿಸಿರುವ ಕಳ್ಳರು ಬಾಗಿಲ ಬೀಗ ಒಡೆದು ಒಳನುಗ್ಗಿ ಸಿಸಿ ಟಿವಿಗೆ ಅಳವಡಿಸಿದ್ದ ಕೇಬಲ್ ವೈರ್ ಕಟ್ ಮಾಡಿದ್ದು ಮತ್ತೊಂದು ಬಾಗಿಲನ್ನು ಆರೆಯಿಂದ ಮೀಟಿ ಒಳನುಗ್ಗಲು ಪ್ರಯತ್ನಿಸಿದ್ದಾರೆ ಅಲ್ಲದೆ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ವೆಲ್ಡ್‌ರ್‌ನಿಂದ ಭದ್ರತಾ ಕೊಠಡಿಯ ಬಾಗಿಲು ತೆಗೆಯಲು ಹೋಗಿ ವಿಫಲರಾಗಿದ್ದಾರೆ ಎನ್ನಲಾಗಿದೆ.
ಕಳ್ಳತನ ಮಾಡಲು ಸಹಾಯಕ್ಕೆ ತಂದಿದ್ದ ಗ್ಯಾಸ್ ಸಿಲಿಂಡರ್ ಆರೆ, ಗ್ಯಾಸ್ ಕಟರ್, ಸಣ್ಣಪುಟ್ಟ ಉಪಕರಣಗಳನ್ನು ಸ್ಥಳದಲ್ಲಿಯೇ ಬಿಟ್ಟು ಬರಿಗೈಯಲ್ಲಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಸಿಬ್ಬಂದಿಗಳು ಸೋಮವಾರ ಎಂದಿನಂತೆ ಬ್ಯಾಂಕಿನ ಕೆಲಸಕ್ಕೆ ಹಾಜರಾದಾಗ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನಿಸಿರುವ ಘಟನೆ ಕಾಣಿಸಿದೆ ಕೂಡಲೇ ಬ್ಯಾಂಕಿನ ವ್ಯವಸ್ಥಾಪಕರು ಪೋಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿದ ಗ್ರಾಮಾಂತರ ಪೋಲೀಸರು ಪರಿಶೀಲಿಸಿ ಮಾಹಿತಿ ಕಲೆಹಾಕಿದ್ದು, ನಂತರ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದು ಕಳ್ಳರನ್ನು ಹಿಡಿಯಲು‌ ಬಲೆ‌ ಬೀಸಿದ್ದಾರೆ.
Conclusion:null

ABOUT THE AUTHOR

...view details