ಕರ್ನಾಟಕ

karnataka

ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರ ವಿಚಾರ: ಹೆಚ್​ಡಿಕೆ ಭೇಟಿಯಾದ ಜೆಡಿಎಸ್​ ಸದಸ್ಯರು

By

Published : Sep 10, 2021, 10:20 AM IST

Kalburgi
ಹೆಚ್​ಡಿಕೆ ಭೇಟಿಯಾದ ಜೆಡಿಎಸ್​ ಸದಸ್ಯರು ()

ಮಹಾನಗರ ಪಾಲಿಗೆ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದ್ರೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಕಲಬುರಗಿಯಿಂದ ಬಂದ 4 ಮಂದಿ ನೂತನ ಸದಸ್ಯರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಮನಗರ: ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ವಿಚಾರಕ್ಕೆ ಸಂಬಂಧಿಸಿದಂತೆ 4 ಮಂದಿ ಜೆಡಿಎಸ್ ಸದಸ್ಯರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ರಾಮನಗರ ಜಿಲ್ಲೆ ಬಿಡದಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಹೆಚ್​ಡಿಕೆ ಭೇಟಿಯಾಗಿ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಲಾಯಿತು.

ಮಹಾನಗರ ಪಾಲಿಗೆ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಬಂದ 4 ಮಂದಿ ನೂತನ ಸದಸ್ಯರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿಗೆ ಬೆಂಬಲಿಸಬೇಕೋ ಅಥವಾ ಕಾಂಗ್ರೆಸ್​​ ಬೆಂಬಲಿಸಬೇಕೋ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದ್ದು, ಎರಡು ಪಕ್ಷಗಳಿಗೆ ಜೆಡಿಎಸ್ ಪಕ್ಷದ 4 ಸದಸ್ಯರು ಅನಿವಾರ್ಯವಾಗಿದೆ. ಇದರಿಂದ ಉಭಯ ಪಕ್ಷದ ನಾಯಕರು ಜೆಡಿಎಸ್ ಸದಸ್ಯರ ಬೆಂಬಲಕ್ಕೆ ಅಣಿಯಾಗಿದ್ದಾರೆ.

ಇತ್ತ‌ ಜೆಡಿಎಸ್ ಪಕ್ಷದ ನಿಲುವು ಮಾತ್ರ ಇನ್ನು ನಿಗೂಢವಾಗಿದ್ದು, ಯಾರ ಜೊತೆ ಕೈ ಜೋಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 2021ರ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಪ್ರಕಾರ ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4 ಇತರ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಯಾರೇ ಆಗಲಿ ಜೆಡಿಎಸ್​ ಬೆಂಬಲ ಪಡೆಯಲೇಬೇಕಿದೆ. ಹಾಗಾಗಿ ಜೆಡಿಎಸ್​ ಸದಸ್ಯರ ನಿರ್ಧಾರದ ಮೇಲೆ ಮೇಯರ್​- ಉಪಮೇಯರ್​ ಭವಿಷ್ಯ ನಿಂತಿದೆ.

ABOUT THE AUTHOR

...view details