ಕರ್ನಾಟಕ

karnataka

ಸರ್ಕಾರಿ ಭೂಮಿ ಒತ್ತುವರಿ ಆರೋಪ: ಈಗಲ್‌ಟನ್ ರೆಸಾರ್ಟ್‌ನಲ್ಲಿ ಲೆಕ್ಕಪರಿಶೋಧನಾ ಸಮಿತಿಯಿಂದ ಪರಿಶೀಲನೆ

By

Published : Feb 5, 2020, 10:05 AM IST

ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನಾ ಸಮಿತಿಯ ತಂಡ, ರೆಸಾರ್ಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.

Government land accusations allegation at Eagleton resort!
ಈಗಲ್‌ಟನ್ ರೆಸಾರ್ಟ್‌ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ!

ರಾಮನಗರ:ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಪರಿಶೋಧನಾ ಸಮಿತಿಯ ತಂಡ ಮಂಗಳವಾರ ಈಗಲ್​ಟನ್ ರೆಸಾರ್ಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಈ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಜೊತೆಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಎಂಎಲ್‌ಸಿ ಶರವಣ ಸೇರಿ ಹಲವರು ರೆಸಾರ್ಟ್‌ಗೆ ಆಗಮಿಸಿ ಸರ್ಕಾರಿ ಜಾಗದ ನಕಾಶೆಯನ್ನ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಹಾಗೂ ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿಯಿಂದ ಮಾಹಿತಿ ಪಡೆದರು.

ಈಗಲ್‌ಟನ್ ರೆಸಾರ್ಟ್‌ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ!

ಈ ವೇಳೆ ಮಾತನಾಡಿದ ಹೆಚ್.ಕೆ.ಪಾಟೀಲ್ ರೆಸಾರ್ಟ್‌ನ 508 ಎಕರೆ ಭೂಮಿಯಲ್ಲಿ ಸರ್ಕಾರದ್ದು 208 ಎಕರೆ ಇದೆ. ಅದರಲ್ಲಿ ಈಗ 28 ಎಕರೆ ಭೂಮಿಯನ್ನ ಸರ್ಕಾರಕ್ಕೆ ಬಿಟ್ಟುಕೊಡಬೇಕಿದೆ. ಜೊತೆಗೆ 77 ಎಕರೆ ಭೂಮಿಗೆ ಕಿಮ್ಮತ್ತು ಕಟ್ಟಬೇಕಿದ್ದು, ಆದರೆ ಈವರೆಗೂ ಕಟ್ಟಿಲ್ಲವೆಂದು ಹೇಳಿದರು.

ಒಟ್ಟು 980 ಕೋಟಿ ಹಣವನ್ನ ಸರ್ಕಾರಕ್ಕೆ ಕಟ್ಟಬೇಕಿದೆ. ಸದ್ಯ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದು, ಕೆಲ ನಿರ್ಣಯಗಳನ್ನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಸಮಿತಿ ಸದಸ್ಯರು ತಿಳಿಸಿದರು.

ಇನ್ನು ಈ ಬಗ್ಗೆ ಮಾತನಾಡಿದ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಈಗಲ್‌ಟನ್ ರೆಸಾರ್ಟ್‌ನಲ್ಲಿ ಸರ್ಕಾರದ ಭೂಮಿ ಒತ್ತುವರಿಯಾಗಿರುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು ಎಂದು ಹೇಳಿದರು.

ಒಟ್ಟಾರೆ ಹಲವು ರಾಜಕೀಯ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿದ್ದ ಈಗಲ್‌ಟನ್ ರೆಸಾರ್ಟ್ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ರೆಸಾರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದ್ರೀಗ ಸರ್ಕಾರಿ ಭೂಮಿ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ಈ ಬಗ್ಗೆ ಕೇಸ್‌ಗಳಿವೆ.

ABOUT THE AUTHOR

...view details