ಕರ್ನಾಟಕ

karnataka

ರಾಜ್ಯ ಪ್ರವಾಸ ಮಾಡುವುದರಿಂದ ಏನೂ ಉಪಯೋಗವಿಲ್ಲ: ಮಾಜಿ ಸಿಎಂ ಹೆಚ್​ಡಿಕೆ

By

Published : Aug 16, 2021, 5:39 PM IST

ಪಕ್ಷಗಳ ವರ್ಚಸ್ಸು ನಶಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯ ಪ್ರವಾಸ ಮಾಡುತ್ತಿವೆ. ಪ್ರವಾಸ ಮಾಡುವುದರಿಂದ ಏನೂ ಉಪಯೋಗವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ex cm hdk outrage against bjp congress state tour
ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ

ರಾಮನಗರ:ಎರಡೂ ಪಕ್ಷಗಳ ವರ್ಚಸ್ಸು ನಶಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಕೊರೊನಾ ನಡುವೆ ರಾಜ್ಯ ಪ್ರವಾಸ ಮಾಡುತ್ತಿವೆ. ಕೇಂದ್ರ ಸಚಿವರು ಕೊರೊನಾ ನಡುವೆಯು 280 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಪ್ರವಾಸ ಮಾಡುವುದರಿಂದ ಏನೂ ಉಪಯೋಗ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ

ರಾಮನಗರದಲ್ಲಿ ಮಾತನಾಡಿದ ಹೆಚ್​ಡಿಕೆ, ಕೇಂದ್ರ ಬಿಜೆಪಿ ಸಚಿವರ 'ಜನ ಆಶೀರ್ವಾದ ಯಾತ್ರೆ' ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ್ರು. ಜನರ ಕಷ್ಟಗಳನ್ನ ನೋಡಿ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಬೇಕು. ಈ ಬಾರಿಯ ಕೊರೊನಾ 3ನೇ ಅಲೆಯನ್ನ ಯಾರು ಕೂಡ ಲಘುವಾಗಿ ಪರಿಗಣಿಸಬೇಡಿ. ಈಗಾಗಲೇ ಎರಡು ಅಲೆಗಳಲ್ಲಿ ಪೆಟ್ಟು ತಿಂದಿದ್ದೇವೆ ಎಂದರು.

ಯಾವುದೇ ವರದಿ ನನ್ನ ಬಳಿ ಬಂದಿರಲಿಲ್ಲ

ಜಾತಿ ಜನಗಣತಿ ವರದಿಯನ್ನ ಕುಮಾರಸ್ವಾಮಿ ಅವರು ಸ್ವೀಕಾರ ಮಾಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ನನ್ನ ಬಳಿ ಯಾರು ವರದಿಯನ್ನ ಕೊಟ್ಟಿಲ್ಲ ಎಂದು ತಿಳಿಸಿದ್ರು. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಜನಗಣತಿ ವರದಿ ಬಗ್ಗೆ ನನ್ನ ಜೊತೆಗೆ ಚರ್ಚೆ ಮಾಡಿದ್ರ ಇಲ್ಲಾ ನನ್ನ ಬಳಿ ವರದಿ ಇದೆ ತೆಗೆದುಕೊಳ್ಳಿ ಅಂತಾ ಬಂದಿದ್ರ. ಇದೀಗ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಅಷ್ಟೇ.

ಈವಾಗ ಅಹಿಂದ ಹೆಸರಿನಲ್ಲಿ ಏನೋ ಮಾಡಲು ಹೊರಟ್ಟಿದ್ದರಲ್ಲ, 5 ವರ್ಷಗಳಲ್ಲಿ ಏನ್ ಮಾಡಿದ್ದಾರೆ ಅಂತಾ ನನಗೆ ಗೊತ್ತಿದೆ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು.

ಇನ್ನು ಸಿ.ಟಿ.ರವಿ ಹಾಗೂ ಪ್ರಿಯಾಂಕ್​ ಖರ್ಗೆ ಹೇಳಿಕೆ ವಿಚಾರಕ್ಕೆ, ಯಾರ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಅವರ ಕಾಲದಲ್ಲಿ ನಾವ್ಯಾರು ಹುಟ್ಟೇ ಇರಲಿಲ್ಲ. ಯಾರ ಹೆಸರುಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಅವರುಗಳು ಕೂಡ ಹುಟ್ಟೇ ಇರಲಿಲ್ಲ, ಅಂತವರ ಬಗ್ಗೆ ಇದೀಗ ಚರ್ಚೆ ಮಾಡುವುದು ಅವರ ಸಣ್ಣತನ ಎಂದ್ರು.

ಸಾರ್ವಜನಿಕ ಜೀವನದಲ್ಲಿ ಯಾರ ಬಗ್ಗೆಯಾದರೂ ಮಾತನಾಡುವಾಗ ಗೌರವಯುತವಾಗಿ ಮಾತನಾಡಬೇಕು. ಈ ರೀತಿಯ ಕೀಳು ಮಟ್ಟದ ಭಾಷೆಗಳನ್ನ ಬಳಸಬೇಡಿ ಎಂದು ಮಾಜಿ ಸಿಎಂ ಸಲಹೆ ಕೊಟ್ಟರು.

ABOUT THE AUTHOR

...view details