ಕರ್ನಾಟಕ

karnataka

ಮೇಕೆದಾಟು ಪಾದಯಾತ್ರೆ ಪ್ರಾರಂಭಿಸುವ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ

By

Published : Jan 8, 2022, 11:48 AM IST

Updated : Jan 8, 2022, 12:46 PM IST

ನಾನು‌ ಹಾಗೂ ಸಿದ್ದರಾಮಯ್ಯನವರ ಜೊತೆ ಹಲವು ಕಾಂಗ್ರೆಸ್ ಶಾಸಕರು ಹಾಗೂ ಮುಂಖಡರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಲೇ ಇದೆ. ನಾವು ಈಗಾಗಲೇ ತೀರ್ಮಾನ ಮಾಡಿದ್ದೇವೆ, ಪಾದಯಾತ್ರೆ ಮಾಡೇ ಮಾಡುತ್ತೇವೆ..

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ರಾಮನಗರ ‌: ಮೇಕೆದಾಟು ಪಾದಯಾತ್ರೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ‌ ಕನಕಪುರದಲ್ಲಿರುವ ಮನೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ರಾಮನಗರ ಜಿಲ್ಲೆಯ ಕನಕಪುರದ ಕೆಂಕೇರಮ್ಮ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಪತ್ನಿ ಜೊತೆ ಬಂದು ವಿಶೇಷ ಪೂಜೆ ಸಲ್ಲಿಸಿದರು.

ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಮೊದಲ ಪೂಜೆ ಮನೆ ದೇವರಿಗೆ ಮಾಡಿಸುವ ವಾಡಿಕೆಯನ್ನ ಡಿ.ಕೆ ಶಿವಕುಮಾರ್ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗುವಂತೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಳೆ ಮೇಕೆದಾಟಿನಿಂದ ಪಾದಯಾತ್ರೆ ಮಾಡಲಿದ್ದೇವೆ. ಯಾರೇ ಯಾವುದೇ ಅಡೆತಡೆ ನಡೆಸಿದರೂ ಕೂಡ ಪಾದಯಾತ್ರೆ ನಡೆದೇ ನಡೆಯುತ್ತದೆ. ನಾನು ಹಾಗೂ ಸಿದ್ದರಾಮಯ್ಯ ಈಗಾಗಲೇ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದೇವೆ.

ನಮ್ಮ ಮನೆ ದೇವರ ಜೊತೆ ಕಬ್ಬಾಳಮ್ಮ ದೇವರಿಗೂ ಕೂಡ ಪೂಜೆ ಸಲ್ಲಿಸಲಾಗುವುದು. ಜೊತೆಗೆ ಮಡಿವಾಳ ಗ್ರಾಮದಲ್ಲಿರುವ ಶಿವನ ದೇವಸ್ಥಾನಕ್ಕೂ ಕೂಡ ತೆರಳಿ ಅಲ್ಲಿ‌ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗುವುದು ಎಂದರು.

ನಾನು‌ ಹಾಗೂ ಸಿದ್ದರಾಮಯ್ಯನವರ ಜೊತೆ ಹಲವು ಕಾಂಗ್ರೆಸ್ ಶಾಸಕರು ಹಾಗೂ ಮುಂಖಡರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಲೇ ಇದೆ. ನಾವು ಈಗಾಗಲೇ ತೀರ್ಮಾನ ಮಾಡಿದ್ದೇವೆ, ಪಾದಯಾತ್ರೆ ಮಾಡೇ ಮಾಡುತ್ತೇವೆ.

ರಾಮನಗರದಲ್ಲಿ ಐಸಿಯುನಲ್ಲಿ‌ ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರಿಗೆ ಕಷ್ಟ ನೀಡಲು ಕರ್ಫ್ಯೂ ಮಾಡಿದ್ದಾರೆಯೇ ಹೊರತು, ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಇಂದು ಸಂಜೆ ಕೂಡ ಕನಕಪುರದಲ್ಲಿ ಶಾಸಕರ ಸಭೆ ನಡೆಸಿ, ಪಾದಯಾತ್ರೆ ಬಗ್ಗೆ ಚರ್ಚೆ ಮಾಡಲಾಗುವುದು. ಹಾಗೆಯೇ ಅಭಿವೃದ್ಧಿ, ಜನರಿಗಾಗಿ ನಾವು ಪಾದಯಾತ್ರೆ ‌ಮಾಡುತ್ತಿದ್ದೇವೆ. ಎಲ್ಲಿ‌ ಶ್ರಮ ಇರುತ್ತೋ ಅಲ್ಲಿ‌ ಫಲ‌ ಇದ್ದೇ ಇರುತ್ತೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.

ಓದಿ:ಒಂದೂವರೆ ಲಕ್ಷದ ಸನಿಹಕ್ಕೆ ಕೊರೊನಾ ಪ್ರಕರಣಗಳು.. ಏರುತ್ತಲೇ ಇದೆ ಕೋವಿಡ್​ ಭಯದ ಅಲೆ!

Last Updated : Jan 8, 2022, 12:46 PM IST

ABOUT THE AUTHOR

...view details