ಕರ್ನಾಟಕ

karnataka

ಎಸ್​ಡಿಪಿಐ, ಪಿಎಫ್​ಐ ಸಂಘಟನೆಗಳಿಗೆ ಕಾಂಗ್ರೆಸ್​ ಬೆಂಬಲ ನೀಡ್ತಿದೆ: ಡಿ. ಎಸ್. ವೀರಯ್ಯ

By

Published : Jan 8, 2020, 4:30 PM IST

ಸಿಎಎ ಕಾಯ್ದೆ ಜಾರಿಗೆ ಬಂದಾಗಿನಿಂದ ಅದರ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅದರಲ್ಲಿ ಎಸ್​ಡಿಪಿಐ ಮತ್ತು ಪಿಎಫ್​ಐ ಇವೆರಡು ಉಗ್ರ ಸಂಘಟನೆಗಳಾಗಿದ್ದು, ಇವುಗಳಿಗೆ ಕಾಂಗ್ರೆಸ್​ ಪಕ್ಷ ಬೆಂಬಲ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ. ಎಸ್. ವೀರಯ್ಯ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಡಿ. ಎಸ್.ವೀರಯ್ಯ
D S Veeraiah

ರಾಮನಗರ:ಎಸ್​ಡಿಪಿಐ ಮತ್ತು ಪಿಎಫ್​ಐ ಇವೆರಡು ಉಗ್ರ ಸಂಘಟನೆಗಳಂತೆ ವರ್ತಿಸುತ್ತಿವೆ. ಇವುಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ. ಎಸ್. ವೀರಯ್ಯ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಡಿ. ಎಸ್. ವೀರಯ್ಯ

ನಗರದ ಪ್ರವಾಸಿ ಮಂದಿರದಲ್ಲಿ ಸಿಎಎ ಬೆಂಬಲಿಸಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪೌರತ್ವ ವಿರೋಧಿ ಹೋರಾಟದಲ್ಲಿ ಈ ಎರಡೂ ಸಂಘಟನೆಗಳು ಮುಂಚೂಣಿಯಲ್ಲಿವೆ. ದೇಶದಲ್ಲಿ ಮುಸ್ಲಿಂರು ನೆಮ್ಮದಿಯಾಗಿದ್ದಾರೆ. ಅದನ್ನು ಕೆಡಿಸುವ ಕೆಲಸ ನಡೆಯುತ್ತಿದೆ. ಸಂವಿಧಾನದ ವಿರೋಧಿಯಾಗಿ ಈ ಕಾಯ್ದೆ ಜಾರಿಗೆ ಬಂದಿಲ್ಲ. ರಾಜಕೀಯವಾಗಿ ಕಾಯ್ದೆಯನ್ನು ವಿರೋಧಿಸಲು ಕಾಂಗ್ರೆಸ್ ಕುಮ್ಮಕ್ಕಿನಿಂದ ಎರಡೂ ಸಂಘಟನೆಗಳು ಮುಸ್ಲಿಂರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಈ ಎರಡು ಸಂಘಟನೆಗಳು ಉಗ್ರವಾದದ ಸಂಘಟನೆಗಳು ಎಂಬುದು ಹಲವು ಬಾರಿ ಸಾಬೀತಾಗಿದೆ. ಸಿಎಎ ಕಾಯ್ದೆ 1956 ರಲ್ಲೇ ಬಂದಿದ್ದು, ಅದನ್ನು ಹೊಸದಾಗಿ ಜಾರಿಗೆ ತಿಂದಿಲ್ಲ. ಈಗಾಗಲೇ ಕೆಲವು ಬಾರಿ ತಿದ್ದುಪಡಿ ಆಗಿದೆ. 2011 ರಲ್ಲಿ ಕಾಂಗ್ರೆಸ್ ಪಕ್ಷ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನ, ಅಫ್ಘಾನ್ ಮತ್ತು ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗ್ತಿದೆ. ಈ ಕಾಯ್ದೆಯಿಂದ ಭಾರತದಲ್ಲೇ ಹುಟ್ಟಿ ಬೆಳೆದ ಯಾವೊಬ್ಬ ನಾಗರಿಕರಿಗೂ ತೊಂದರೆ ಇಲ್ಲ. ಸುಖಾ‌ಸುಮ್ಮನೆ ವಿರೋಧ ಮತ್ತು ಅಪಪ್ರಚಾರ ಮಾಡಲಾಗುತ್ತಿದೆ ಎಂದು ವೀರಯ್ಯ ಗುಡುಗಿದರು.

Intro:Body:ರಾಮನಗರ : SDPI & PFI ಎರಡೂ ಸಂಘಟನೆಗಳು ಉಗ್ರ ಸಂಘಟನೆಗಳ ಅವುಗಳಿಗೆ ಕಾಂಗ್ರಸ್ ಪಕ್ಷ ಬೆಂಬಲ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಗಂಬೀರವಾಗಿ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸಿಎಎ ಬೆಂಬಲಿಸಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರತ್ವ ವಿರೋಧಿ ಹೋರಾಟದಲ್ಲಿ ಎರಡೂ ಸಂಘಟನೆಗಳು ಮುಂಚೂಣಿಯಲ್ಲಿವೆ, ದೇಶದ ಮುಸ್ಲಿಂರು ನೆಮ್ಮದಿಯಾಗಿದ್ದಾರೆ ಅದನ್ನ ಕೆಡಿಸುವ ಕೆಲಸ ನಡೆಯುತ್ತಿದೆ. ಸಂವಿಧಾನದ ವಿರೋಧಿಯಾಗಿ ಕಾಯ್ದೆ ಜಾರಿಗೆ ಬಂದಿಲ್ಲ, ರಾಜಕೀಯವಾಗಿ ಕಾಯ್ದೆಯನ್ನು ವಿರೋದಿಸಲು ಕಾಂಗ್ರೇಸ್ ಕುಮ್ಮಕ್ಕಿ ನಿಂದ ಎರಡೂ ಸಂಘಟನೆಗಳು ಮುಸ್ಲಿಂರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಈಗಾಗಲೇ ಈ ಎರಡು ಸಂಘಟನೆಗಳು ಉಗ್ರವಾದದ ಸಂಘಟನೆಗಳು ಎಂಬುದು ಹಲವಾರು ಬಾರಿ ಸಾಬೀತಾಗಿದೆ ಎಂದ ಅವರು ಕಾಂಗ್ರೆಸ್ ಅವರೊಗೆ ಕುಮ್ಮಕ್ಕು‌ನೀಡುತ್ತಿದೆ ಎಂದು ಗಂಬೀರ ಆರೋಪ‌ ಮಾಡಿದರು.
ಸಿಎಎ ಹೊಸದಾಗಿ ತಂದ ಕಾಯ್ದೆಯಲ್ಲ 1956 ರಲ್ಲೇ ಬಂದ ಕಾಯ್ದೆ ಎರಡು ಮೂರು ಬಾರಿ ತಿದ್ದುಪಡಿ ಅಗಿದೆ. 2011 ರಲ್ಲಿ ಕಾಂಗ್ರೆಸ್ ಪಕ್ಷ ಮನಮೋಹನ್ ಸಿಂಗ್ ಪ್ರದಾನಿಯಾದ ಸಮಯದಲ್ಲಿ ಪಾಕಿಸ್ತಾನ, ಅಪ್ಘಾನ್ ಮತ್ತು ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ತೀರ್ಮಾನ ಮಾಡಲಾಗಿತ್ತು, ಈ ಕಾಯ್ದೆಯಿಂದ ಬಾರತದಲ್ಲೇ ಹುಟ್ಟಿಬೆಳೆದ ಯಾವೊಬ್ಬ ನಾಗರೀಕರಿಗೂ ತೊಂದರೆ ಇಲ್ಲ ಸುಖಾ‌ಸುಮ್ಮನೆ ವಿರೋಧ ಮತ್ತು ಅಪಪ್ರಚಾರ ಮಾಡಲಾಗುತ್ತಿದೆ ಎಂದರು.Conclusion:

ABOUT THE AUTHOR

...view details