ಕರ್ನಾಟಕ

karnataka

ರಾಯಚೂರಿನ ಕೃಷಿ ಹೊಂಡ ಯೋಜನೆಯಲ್ಲಿ ಅಕ್ರಮ ಆರೋಪ

By

Published : Dec 13, 2019, 7:56 PM IST

ಸರಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದ ಕೃಷಿ ಹೊಂಡ ಯೋಜನೆ ಈಗ ಚಂದ್ರಬಂಡಾ ರೈತರಿಗೆ ಅನಾನುಕೂಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Scam in Krushi honda scheme, ಕೃಷಿ ಹೊಂಡ ಯೋಜನೆಯಲ್ಲಿ ಅಕ್ರಮ ಆರೋಪ
ಕೃಷಿ ಹೊಂಡ ಯೋಜನೆಯಲ್ಲಿ ಅಕ್ರಮ ಆರೋಪ

ರಾಯಚೂರು: ಸರಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದ ಕೃಷಿ ಹೊಂಡ ಯೋಜನೆ ಈಗ ಚಂದ್ರಬಂಡಾ ರೈತರಿಗೆ ಅನಾನುಕೂಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಪ್ರಸಕ್ತ ಸಾಲಿನಲ್ಲಿ 18 ಕೃಷಿ ಹೊಂಡ ಮಂಜುರಾಗಿ ನಿರ್ಮಾಣವಾಗಿವೆ. ಆದರೆ ದಲಿತ ಸಂಘಟನೆಯ ಹೆಸರಿನಲ್ಲಿ ವೀರೇಶ್ ಎಂಬುವವರು ಅಕ್ರಮವಾಗಿದೆ ಎಂದು ಕೃಷಿ ಇಲಾಖೆ‌ ವಿರುದ್ಧ ದೂರು ನೀಡಿದ್ದಾರೆ.

ಕೃಷಿ ಹೊಂಡ ಯೋಜನೆಯಲ್ಲಿ ಅಕ್ರಮ ಆರೋಪ

ದೂರು ನೀಡಿದ ನಂತರ ತನಿಖೆಯ ನೆಪದಲ್ಲಿ ಉಳಿದ ಕೃಷಿ‌ ಹೊಂಡ ಕಾಮಗಾರಿ ನಿರ್ಮಾಣ ಮಾಡುತ್ತಿಲ್ಲ. ಇದರಿಂದ ಚಂದ್ರಬಂಡಾ ವ್ಯಾಪ್ತಿಗೆ ಬರುವ ಗಣಮೂರು ಸೇರಿದಂತೆ ಸುತ್ತಲಿನ ಗ್ರಾಮದ ರೈತರಿಗೆ, ಕೂಲಿ ಕಾರ್ಮಿಕರಿಗೆ ಮೂರು ತಿಂಗಳಿನಿಂದ ಕೆಲಸ ನೀಡುತ್ತಿಲ್ಲ ಎಂದು‌‌ ಗಣಮೂರಿನ‌ ಗ್ರಾಮಸ್ಥರು ದೂರುತ್ತಿದ್ದಾರೆ.

ಆರೋಪ ಸತ್ಯವಾದಲ್ಲಿ ಕೃಷಿ ಇಲಾಖೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಗಣಮೂರಿನ‌ ಗ್ರಾಮಸ್ಥ ಮಲ್ಲೇಶ ಒತ್ತಾಯಿಸಿದ್ದಾರೆ.

Intro:ಸರಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದ ಕೃಷಿ ಹೊಂಡ ಯೋಜನೆ ಈಗ ರಾಯಚೂರು ತಾಲೂಕಿನ ಚಂದ್ರಬಂಡಾ ರೈತರಿಗೆ ಅನನುಕೂಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.



Body:ಹೌದು, ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಪ್ರಸಕ್ತ ಸಾಲಿನಲ್ಲಿ 18 ಕೃಷಿ ಹೊಂಡ ಮಂಜುರಾಗಿ ನಿರ್ಮಾಣವಾಗಿದೆ ಆದ್ರೆ ದಲಿತ ಸಂಘಟನೆಯ ಹೆಸರಿನಲ್ಲಿ ವೀರೇಶ್ ಎಂಬುವವರು ಅಕ್ರಮವಾಗಿದೆ ಎಂದು ಕೃಷಿ ಇಲಾಖೆ‌ ವಿರುಧ್ಧ ದೂರು ನೀಡಿದ್ದಾರೆ.
ದೂರು ನೀಡಿದ ನಂತರ ತನಿಖೆಯ ನೆಪದಲ್ಲಿ ಉಳಿದ ಕೃಷಿ‌ ಹೊಂಡ ಕಾಮಗಾರಿ ನಿರ್ಮಾಣ ಮಾಡುತ್ತಿಲ್ಲ ಇದರಿಂದ ಚಂದ್ರಬಂಡಾ ವ್ಯಾಪ್ತಿಗೆ ಬರುವ ಗಣಮೂರು ಸೇರಿದಂತೆ ಸುತ್ತಲಿನ ಗ್ರಾಮದ ರೈತರಿಗೆ,ಕೂಲಿಕಾರ್ಮಿಕರಿಗೆ ಮೂರು ತಿಂಗಳಿನದ ಕೆಲಸ ನೀಡುತ್ತಿಲ್ಲ ಎಂದು‌‌ ಗಣಮೂರಿನ‌ ಗ್ರಾಮಸ್ಥರು ದೂರುತಿದ್ದಾರೆ.
ಅಲ್ಲಿ ಕೆಸಲವಿಲ್ಲದೇ ರಾಯಚೂರು‌‌ ನಗರಕ್ಕೆ ಕೆಲಸ ಹುಡುಕಿಕೊಂಡು ಬರುತ್ತಿದ್ದಾರೆ ಎನ್ನುವ ಗ್ರಾಮಸ್ಥರು ದಲಿತ ಸಂಘಟನೆಯಿಂದ ಮಾಡಲಾಗಿರುವ ದೂರು,ಆರೋಪ‌ಸತ್ಯವಾಗಿಲ್ಲ‌ಅವರು ಸ್ಥಳಿಯರೂ‌ ಅಲ್ಲ ಒಂದು ವೇಳೆ ಸತ್ಯವಾದಲ್ಲಿ ಕೃಷಿ ಇಲಾಖೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಗಣಮೂರಿನ‌ ಗ್ರಾಮಸ್ಥ ಮಲ್ಲೇಶ ಗ್ರಾಮಸ್ಥರೊಂದಿಗೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.
ಅದೇನೆ‌ ಆದ್ರೂ ಗಂಡ -ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತ ಸ್ಥಿತಿ ಗಣಮೂರು ಗ್ರಾಮಸ್ಥರ ಸ್ಥಿತಿಯಾಗಿದೆ.

ಬೈಟ್: ಮಲ್ಲೇಶ, ಗಣಮೂರು ಗ್ರಾಮಸ್ಥ‌.



Conclusion:

ABOUT THE AUTHOR

...view details