ಕರ್ನಾಟಕ

karnataka

ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದರೂ ರಾಯಚೂರು ರೈತರ ಭತ್ತದ ಗದ್ದೆಗಿಲ್ಲ ನೀರು

By

Published : Oct 24, 2019, 6:15 PM IST

ಭತ್ತದ ಬೆಳೆಗೆ ಹೆಚ್ಚಿನ ನೀರು ಅವಶ್ಯಕತೆಯಿದ್ದು, ಆದರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನೀರಿದ್ದರೂ ಬಳಸಿಕೊಳ್ಳಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸೊಂಪಾಗಿ ಬೆಳೆದು ನಿಂತಿರುವ ಭತ್ತದ ಬೆಳೆ ಒಣಗುತ್ತಿದೆ.

ಭತ್ತ ಬೆಳೆದ ರೈತರು ಕಂಗಾಲು

ರಾಯಚೂರು: ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಕೃಷ್ಣಾ ನದಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆದ ಭತ್ತದ ಬೆಳೆ ನೀರಿಲ್ಲದೆ ಒಣಗುತ್ತಿದೆ.

ಭತ್ತದ ಬೆಳೆಗೆ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆಯಿದೆ. ಆದರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಗಳಲ್ಲಿ ಪಂಪ್​ಸೆಟ್​ ಇಡಲು ರೈತರಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ನದಿ ನೀರನ್ನು ಬೆಳೆಗೆ ಬಳಸಿಕೊಳ್ಳಲು ಸಾಧ್ಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸೊಂಪಾಗಿ ಬೆಳೆದು ನಿಂತಿರುವ ಭತ್ತದ ಬೆಳೆ ಒಣಗುತ್ತಿದೆ. ಜಿಲ್ಲೆಯ ಕಾಡ್ಲೂರು ತಾಲೂಕು ಸೀಮಾಂತರ ವ್ಯಾಪ್ತಿಯ ನದಿ ತೀರದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಬೆಳೆಗೆ ಸಂಪರ್ಕವಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ.

ಭತ್ತ ಬೆಳೆದ ರೈತರು ಕಂಗಾಲು

ಜಿಲ್ಲೆಯ ಸುಮಾರು 183 ಕಿ.ಮೀ.ವರೆಗೆ ಹರಿಯುವ ನದಿಯ ತೀರದಲ್ಲಿ ಗಡ್ಡೆಯ ಮೇಲೆರುವ ಭತ್ತದ ಗದ್ದೆಗಳಿಗೆ ಪಂಪ್ ಸೆಟ್ ಮೂಲಕವೇ ನೀರು ಕಟ್ಟಲಾಗುತ್ತದೆ. ಆದರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ, ನದಿಗೆ ಆಳವಡಿಸಿರುವ ಪಂಪ್ ಸೆಟ್ ಕೊಚ್ಚಿಕೊಂಡು ಹೋಗುತ್ತವೆ ಎಂಬ ಭೀತಿ ರೈತರನ್ನು ಕಾಡುತ್ತಿದೆ. ಆದ್ದರಿಂದ ನದಿಯಲ್ಲಿರುವ ಪಂಪ್ ಸೆಟ್​ಗಳನ್ನು ರೈತರು ತೆಗೆಯುತ್ತಿದ್ದಾರೆ. ಇದರಿಂದಾಗಿ ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.

Intro:¬ಸ್ಲಗ್: ಕಣ್ಮುಂದೆ ಅಪಾರ ಪ್ರಮಾಣದ ನೀರು ಹರಿದು ಹೋದರೆ, ಬೆಳೆಗೆ ನೀರಿಲ್ಲ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 24-1೦-2019
ಸ್ಥಳ: ರಾಯಚೂರು
ಆಂಕರ್: ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಪ್ರವಾಹ ಕಂಡಿರುವ ಕೃಷ್ಣ ನದಿಯಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳದಂತ ರೈತರ ಬೆಳೆ ನಷ್ಟು ಉಂಟಾಗಿದೆ. ಮೂರನೇ ಬಾರಿ ಬಂದಿರುವ ಪ್ರವಾಹದಿಂದ ನದಿ ತೀರದಲ್ಲಿರುವ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದ ನಿಂತಿರುವ ಭತ್ತಕ್ಕೆ ಬೆಳೆಗೆ ನೀರು ಅವಶ್ಯಕತೆಯಿದೆ. ಆದ್ರೆ ನದಿಯಲ್ಲಿ ಅಪಾಯದ ಮಟ್ಟ ಮೀರಿ ನದಿಯಲ್ಲಿ ಬೋರ್ಗೆಯುತ್ತಿದ್ರು, ರೈತರ ಹೊಲದಲ್ಲಿ ಹಚ್ಚ ಹಸಿರನಿಂದ ನಿಂತಿರುವ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಈ ಕುರಿತು ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ಹೀಗೆ ಒಂದು ಪ್ರವಾಹ ಮಧ್ಯ ಹಚ್ಚಿ ಹಸಿರಿನಿಂದ ಬೆಳೆದು ನಿಂತಿರುವ ಭತ್ತದ ಬೆಳೆ, ಮತ್ತೊಂದು ಬೆಳೆದು ನಿಂತಿರುವ ಬೆಳೆ ನೀರು ಇರಬೇಕಾದ ಗದ್ದೆಯಲ್ಲಿ ನೀರಿಲ್ಲದೆ ಸಂಕಷ್ಟವಾಗಿದೆ ಎನ್ನುವ ರೈತರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಯಚೂರು ಜಿಲ್ಲೆಯ. ಹೌದು, ತಾಲೂಕಿನ ಕಾಡ್ಲೂರು ಸೀಮಾಂತರ ವ್ಯಾಪ್ತಿಗೆ ನದಿಯ ತೀರಕ್ಕೆ ಬರುವಂತ ಸಾವಿರಾರು ಎಕರೆ ಭತ್ತವನ್ನ ನಾಟಿ ಮಾಡಿದ್ರೆ. ನಾಟಿ ಭತ್ತ ಈಗ ಫಲನೀಡುತ್ತಿದ್ದು, ಕಾಲು ಕಟ್ಟಿದೆ. ಈ ಸಮದಯಲ್ಲಿ ಬೆಳೆಗೆ ಸಂಪರ್ಕವಾಗಿ ನೀರು ಪೂರೈಕೆ ಮಾಡಬೇಕು. ಆದ್ರೆ ಕಣ್ಮುಂದೆ ಸಾಕಷ್ಟು ಪ್ರಮಾಣದಲ್ಲಿ ಹರಿದು ಹೋಗುತ್ತಿದ್ದರು, ತಮ್ಮ ಗದ್ದೆಗೆ ನೀರು ಹರಿಸಲಾಗದೆ ಕಂಗಾಲಾದ ಸ್ಥಿತಿ ರೈತರಿಗೆ ನಿರ್ಮಾಣವಾಗಿದೆ.
ವಾಯ್ಸ್ ಓವರ್.2: ಈಗಾಗಲೇ ಎರಡು ಬಾರಿ ಅಪ್ಪಳಿಸಿದ ಪ್ರವಾಹಕ್ಕೆ ನದಿ ಪಕ್ಕದಲ್ಲಿನ ಭತ್ತದ ಬೆಳೆ ಹಾನಿಯಾಗಿದೆ. ಇದೀಗ ಮೂರನೇ ಬಾರಿ ಬಂದಿರುವ ಪ್ರವಾಹದಿಂದ ನದಿ ಪಕ್ಕದಲ್ಲಿನ ಗಡ್ಡೆಯ ಮೇಲಿರುವ ಬಹುತೇಕ ಗದ್ದೆಗಳಿಗೆ ನದಿ ನೀರಿನ್ನ ಪಂಪ್ ಸೆಟ್ ಆಳವಡಿಸಿಕೊಳ್ಳುವ ಮೂಲಕ ಭತ್ತದ ಗದ್ದೆಗೆ ರೈತರು ನೀರು ಹರಿಸಿಕೊಳ್ಳುತ್ತಾರೆ. ಆದ್ರೆ ಅಪಾಯ ಮಟ್ಟ ಮೀರಿ ನದಿ ಹರಿಯುತ್ತಿರುವುದರಿಂದ ನದಿಗೆ ಆಳವಡಿಸಿರುವ ಪಂಪ್ ಸೆಟ್ ಕೊಚ್ಚಿಕೊಂಡು ಹೋಗುತ್ತವೆಂದು ತೆಗೆಯುತ್ತಿದ್ದಾರೆ. ಇದರಿಂದ ಭತ್ತದ ಗದ್ದೆಗೆ ನೀರು ಪೂರೈಕೆ ಮಾಡಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿ ಭತ್ತದ ಬೆಳೆಗಾರರು ಸಿಲುಕಿದ್ದಾರೆ.
ವಾಯ್ಸ್ ಓವರ್.3: ಇನ್ನೂ ಕಾಡ್ಲೂರು ಸೀಮಾಂತರಕ್ಕೆ ಎರಡುವರೆ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಈ ಗದ್ದೆಗಳಿಗೆ ಪಂಪ್ ಸೆಟ್ ಮೂಲಕ ನೀರು ಬಿಡಲಾಗಿದೆ. ಅಷ್ಟೆ ಅಲ್ಲದೇ ಜಿಲ್ಲೆಯ ಸರಿಸುಮಾರು 183 ಕಿ.ಮೀ.ವರೆಗೆ ಹರಿಯುವ ನದಿಯ ತೀರದಲ್ಲಿ ಗಡ್ಡೆಯ ಮೇಲೆರುವ ಭತ್ತದ ಗದ್ದೆಗಳಿಗೆ ಪಂಪ್ ಸೆಟ್ ಮೂಲಕವೇ ನೀರು ಕಟ್ಟಲಾಗುತ್ತದೆ. ಆದ್ರೆ ಇಷ್ಟು ದಿನಗಳ ಸಾವಿರಾರು ವ್ಯಯ ಮಾಡಿ, ಬೆಳೆ ಕಾಳು ಕಟ್ಟುವ ಸಮಯದಲ್ಲಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾಳು ಕಟ್ಟಿದ ತೆನೆ ತಾನ್ ಹಿಡಿದು, ಹಿಡುವಳಿ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ತೊಂದರೆ ಅನುಭವಿಸುವ ಸಂಕಷ್ಟಕ್ಕೆ ಸಿಲುಸಿದೆ. ಒಟ್ನಿಲ್ಲಿ, ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಅಪ್ಪಳಿಸಿದ ನೆರೆಯಿಂದ ನಷ್ಟ ಭತ್ತದ ಬೆಳೆಗಾರರು, ನದಿಯ ಗಡ್ಡೆಯ ಬೆಳೆದಿರುವ ಭತ್ತಕ್ಕೆ ಕಣ್ಮುಂದೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿದು ಹೋದರೆ, ತಮ್ಮ ಬದುಕು ಕಟ್ಟಿಕೊಳ್ಳಲು ಭತ್ತದ ಬೆಳೆಗೆ ನೀರಿಲ್ಲದೆ ತೊಂದರೆ ಅನುಭವಿಸುವಂತೆ ಆಗಿದ್ದು, ಮೂರನೇ ಪ್ರವಾಹಕ್ಕೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಭೀತಿಯಲ್ಲಿದೆ. Conclusion:
ಬೈಟ್.1: ಜಮಾಸೀರ್, ಭತ್ತದ ಬೆಳೆಗಾರ, ಕಾಡ್ಲೂರು ಗ್ರಾಮದ ರೈತ(ವೈಟ್ ಶರ್ಟ್ ಧರಿಸಿದ ವ್ಯಕ್ತಿ)
ಬೈಟ್.2: ಸಿದ್ದನಗೌಡ, ಭತ್ತದ ರೈತ(ಲೈನಿಂಗ್ ಶರ್ಟ್ ಧರಿಸಿದ ವ್ಯಕ್ತಿ)

ABOUT THE AUTHOR

...view details