ಕರ್ನಾಟಕ

karnataka

ರಾಹುಲ್‌ಗಾಂಧಿ ಎಐಸಿಸಿ ಅಧ್ಯಕ್ಷರಾಗುವುದು ಸೂಕ್ತ: ಎನ್.ಎಸ್.ಬೋಸರಾಜ್

By

Published : Aug 25, 2020, 5:37 PM IST

ದಿವಂಗತ ನೆಹರು ಕಾಲದಿಂದಲೂ ಗಾಂಧಿ ಕುಟುಂಬದ ಮೇಲೆ ದೇಶದ ಜನತೆ ನಂಬಿಕೆಯಿಟ್ಟಿದ್ದು, ಗಾಂಧಿ ಕುಟುಂಬದ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ಒಳಿತು. ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್ ಮುನ್ನಡೆಸಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.

Rahul Gandhi to be President of AICC NS Boseraj
ರಾಹುಲ್‌ಗಾಂಧಿ ಎಐಸಿಸಿ ಅಧ್ಯಕ್ಷರಾಗುವುದು ಸೂಕ್ತ: ಎನ್.ಎಸ್.ಬೋಸರಾಜ್

ರಾಯಚೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನ ಮುನ್ನಡೆಸಲು ರಾಹುಲ್‌ಗಾಂಧಿ ಎಐಸಿಸಿ ಅಧ್ಯಕ್ಷರಾಗುವುದು ಸೂಕ್ತವೆಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಅವರು, ದಿವಂಗತ ನೆಹರು ಕಾಲದಿಂದಲೂ ಗಾಂಧಿ ಕುಟುಂಬದ ಮೇಲೆ ದೇಶದ ಜನತೆ ನಂಬಿಕೆಯಿಟ್ಟಿದ್ದು, ಗಾಂಧಿ ಕುಟುಂಬದ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ಒಳಿತು. ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್ ಮುನ್ನಡೆಸಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ಅವರ ಆರೋಗ್ಯ ಸಮಸ್ಯೆಯಿಂದಾಗಿ ಅಧ್ಯಕ್ಷರನ್ನ ಬದಲಾಯಿಸಬೇಕಾಗಿದೆ.

ಈಗಿರುವ ಸನ್ನಿವೇಶದಲ್ಲಿ ರಾಹುಲ್‌ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಪಕ್ಷದ ಜವಾಬ್ದಾರಿಯನ್ನ ನೀಡುವುದು ಸೂಕ್ತವಾಗಿದೆ ಎಂದರು.

ಇನ್ನೂ ಪಕ್ಷದಲ್ಲಿ ಮುಖಂಡರು ಅಸಮಾಧಾನ ಪತ್ರದ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದವರು, ಪಕ್ಷದ ಹಿರಿಯ ಮುಖಂಡರು ಕೆಲವರು ಪತ್ರ ಬರೆದಿರುವುರು ಸರಿಯಲ್ಲ. ಆದ್ರೆ ಈ ಬಗ್ಗೆ ಪಕ್ಷದಲ್ಲಿ ಮುಖಂಡರು ಎಲ್ಲಾರೂ ಸಮಾಲೋಚನೆ ನಡೆಸುವ ಮೂಲಕ ಸರಿಪಡಿಸಲಾಗುವುದು. ಈಗ ಪತ್ರ ಬರೆದಿರುವವರು ಮುಖಂಡರು, ಉಳಿದ ಮುಖಂಡರು ಎಲ್ಲಾರೂ ಒಂದೇ ಕುಟುಂಬದ ಸದಸ್ಯರು. ಏನೇ ಭಿನ್ನಾಭಿಪ್ರಾಯಗಳಿದರು, ಅದನ್ನ ಸರಿಪಡಿಸಲಾಗುವುದು ಎಂದರು.

ABOUT THE AUTHOR

...view details