ಕರ್ನಾಟಕ

karnataka

ಮದ್ಯ ಹಂಚಿಕೆಯಲ್ಲಿ ಆದ ಗಲಾಟೆಗೆ ವ್ಯಕ್ತಿ ಕೊಲೆ; ಆರೋಪಿಗಳ ಬಂಧನ

By

Published : Jan 16, 2021, 11:02 PM IST

ಮದ್ಯ ಹಂಚಿಕೆಯಲ್ಲಿ ಗಲಾಟೆ ನಡೆದು, ಹೆಚ್ಚು ಮದ್ಯ ಸೇವಿಸ್ತೀಯಾ ಎಂದು ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Raichur
ರಾಯಚೂರು

ರಾಯಚೂರು: ಸಿಮೆಂಟ್ ಕಲ್ಲಿನಿಂದ ಚಚ್ಚಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಕೊಲೆಗಡುಕರನ್ನು ನೇತಾಜಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ನಗರದ ದೇವಿನಗರ ಬಡಾವಣೆಯ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಬಳಿ ತಿರುಮಲೇಶ್ ಎಂಬಾತನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನರಸಿಂಹಲು ಆಲಿಯಾಸ್ ಬೆಲಂ ನರಸಿಂಹಲು, ಗೋಪಾಲ ಎಂಬವರನ್ನು ಬಂಧಿಸಿದ್ದಾರೆ.

ಗೋಪಿ, ನರಸಿಂಹಲು ಹಾಗೂ ಮೃತ ತಿರುಮಲೇಶ ಮೂವರು ಮದ್ಯ ಖರೀದಿಸಿದ್ದಾರೆ. ಇದಾದ ಬಳಿಕ ಮದ್ಯವನ್ನ ಹಂಚಿಕೊಳ್ಳುವ ವಿಚಾರಕ್ಕೆ ಗಲಾಟೆಯಾಗಿ, ಮದ್ಯಪಾನ ಹೆಚ್ಚಾಗಿ ಸೇವನೆ ಮಾಡುತ್ತೀಯಾ ಎಂದು ಮೃತಪಟ್ಟ ವ್ಯಕ್ತಿಯೊಂದಿಗೆ ಜಗಳ ತೆಗೆದಿದ್ದಾರೆ. ಇದರ ಬೆನ್ನಲ್ಲೇ ಅಲ್ಲಿಯೇ ಬಿದ್ದಿದ್ದ ಸಿಮೆಂಟ್ ಕಲ್ಲಿನ್ನು ಮುಖದ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕ್ಷಿಪ್ರವಾಗಿ ಆರೋಪಿಗಳನ್ನ ಬಂಧಿಸಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details