ಕರ್ನಾಟಕ

karnataka

ರಾಯಚೂರು ಗುಡುದನಾಳ ಗ್ರಾಮದಲ್ಲಿ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ

By

Published : Feb 17, 2021, 9:08 PM IST

ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕೊಲೆಯಾದ ಶರಣ ಬಸವನ ತಾಯಿ ಗೆದ್ದಿದ್ದರು. ಈ ಕಾರಣಕ್ಕೆ ದ್ವೇಷ ಸಾಧಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಪೊಲೀಸರ ತನಿಖೆಯಿಂದ ಕೊಲೆಗೆ ನಿಖರ ಕಾರಣ ತಿಳಿದು ಬರಬೇಕಿದೆ..

Lingasuguru police arrested five Murder accused
ರಾಯಚೂರು ಗುಡುದನಾಳ ಗ್ರಾಮದಲ್ಲಿ ಕೊಲೆ ಪ್ರಕರಣ

ರಾಯಚೂರು :ಜಿಲ್ಲೆಯ ಗುಡುದನಾಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಲಿಂಗಸೂಗೂರು ಪೊಲೀಸರು ಬಂಧಿಸಿದ್ದಾರೆ.

ದುರುಗಪ್ಪ, ಜಗದೀಶ್, ಶರಣಬಸವ, ಹನಮಂತಿ, ಯಲ್ಲವ್ವ ಎಂಬುವರು ಬಂಧಿತ ಆರೋಪಿಗಳು. ರಾಜಕೀಯ ದ್ವೇಷದ ಹಿನ್ನೆಲೆ ‌ಶರಣ ಬಸವ ಹೊಸಮನಿ (35) ಎಂಬಾತನನ್ನು ಕೊಲೆ ಮಾಡಲಾಗಿತ್ತು.

ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡಿದ್ದರು. ಪ್ರಕರಣ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಓದಿ : ಪತಿಯಿಂದಲೇ ಗರ್ಭಿಣಿ ಕೊಲೆ ಪ್ರಕರಣ: ಡಿಸಿಪಿ ಪ್ರಕಾಶಗೌಡ ಹೇಳಿದ್ದೇನು?

ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕೊಲೆಯಾದ ಶರಣ ಬಸವನ ತಾಯಿ ಗೆದ್ದಿದ್ದರು. ಈ ಕಾರಣಕ್ಕೆ ದ್ವೇಷ ಸಾಧಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಪೊಲೀಸರ ತನಿಖೆಯಿಂದ ಕೊಲೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

ABOUT THE AUTHOR

...view details