ಕರ್ನಾಟಕ

karnataka

ನಾರಾಯಣಪುರ ಅಣೆಕಟ್ಟೆ ಒಳ ಹರಿವು ಹೆಚ್ಚಳ: ಪ್ರವಾಹ ಭೀತಿ

By

Published : Aug 10, 2020, 10:16 AM IST

ದಿನದಿಂದ ದಿನಕ್ಕೆ ನಾರಾಯಣಪುರ ಅಣೆಕಟ್ಟೆಯ ಒಳ ಹರಿವು ಹೆಚ್ಚುತ್ತಿದ್ದು, ಈಗಾಗಲೇ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.

Bridge
Bridge

ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆಯ ಒಳ ಹರಿವು ಹೆಚ್ಚುತ್ತಿದ್ದು, ಗೇಟ್​​​​ಗಳ ಮೂಲಕ ಹರಿಯುತ್ತಿರುವ ನೀರು ಅಪಾಯದ ಮಟ್ಟ ತಲುಪಿದೆ. ಇದರಿಂದಾಗಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ನಾರಾಯಣಪುರ ಅಣೆಕಟ್ಟೆಯ ನೀರಿನ ಗರಿಷ್ಟ ಮಟ್ಟ 492.252 ಮೀಟರ್ ಇದ್ದು, ಈ ಪೈಕಿ 490.950 ಮೀಟರ್ ನೀರಿನ ಮಟ್ಟ ಕಾಯ್ದುಕೊಂಡು 21 ಕ್ರಸ್ಟ್​​ ಗೇಟ್ ಗಳ ಮೂಲಕ 1,80,760 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚು ಕಡಿಮೆ ಆಗುತ್ತಿದೆ. ಈಗಾಗಲೇ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದ್ದು, ಕೆಲ ನಡುಗಡ್ಡೆಗಳಲ್ಲಿ ಜನ, ಜಾನುವಾರುಗಳು ಸಿಲುಕಿ ಸಂಕಷ್ಟ ಎದುರಿಸುವಂತಾಗಿದೆ.

ABOUT THE AUTHOR

...view details