ಕರ್ನಾಟಕ

karnataka

ಸಂಬಂಧಿಕರ ಮನೆಗೆ ತೆರಳಿದವರು ನೀರು ಪಾಲು.. ಮನೆಯಲ್ಲಿ ಮಡುಗಟ್ಟಿದ ನೀರವ ಮೌನ..

By

Published : Jan 3, 2020, 12:06 PM IST

ಸದ್ಯ ಮೃತ ಶವಗಳನ್ನ ರಾಯಚೂರಿಗೆ ತೆಗೆದುಕೊಂಡು ಬರಲಾಗುತ್ತಿದೆ. ಮೃತರ ಮನೆಯಲ್ಲಿ ನೀರವ ಮೌನ ಆವರಿಸಿದೆ.

four-people-died-in-andra-pradesh-river
ಸಂಬಂಧಿಕರ ಮನೆಗೆ ತೆರಳಿದವರು ನೀರು ಪಾಲು

ರಾಯಚೂರು: ನದಿಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕಿಯರು ಸೇರಿ ಓರ್ವ ವ್ಯಕ್ತಿ ನೀರು ಪಾಲಾಗಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಸಿದ್ದಪಟ್ಟಣಂನಲ್ಲಿ ನಡೆದಿದೆ.

ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಬಡಾವಣೆಯ ಮದಿಹಾ(12), ಫರಿಯಾ(10), ಲೋಹಾ(10) ಹಾಗೂ ಅನ್ವರ್ (35) ಮೃತ ದುರ್ದೈವಿಗಳಾಗಿದ್ದಾರೆ.

ಸಂಬಂಧಿಕರ ಮನೆಗೆ ತೆರಳಿದವರು ನೀರು ಪಾಲು..

ಇವರು ಕಡಪ ಜಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದಾಗ, ಸಿದ್ದಪಟ್ಟಣಂ ಬಳಿ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈಜುವ ವೇಳೆ ಮೂವರು ಬಾಲಕಿಯರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅನ್ವರ್ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಮೂವರು ಬಾಲಕಿಯರ ಜೊತೆಗೆ ರಕ್ಷಣೆಗೆ ಬಂದಿದ್ದ ವ್ಯಕ್ತಿ ಕೂಡ ನೀರು ಪಾಲಾಗಿದ್ದಾರೆ.

ಸದ್ಯ ಮೃತ ಶವಗಳನ್ನ ರಾಯಚೂರಿಗೆ ತೆಗೆದುಕೊಂಡು ಬರಲಾಗುತ್ತಿದೆ. ಮೃತರ ಮನೆಯಲ್ಲಿ ನೀರವ ಮೌನ ಆವರಿಸಿದೆ.

Intro:ಸ್ಲಗ್: ನಾಲ್ವರ ಸಾವು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೩-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ನದಿಯಲ್ಲಿ ಈಜಲು ತೆರಳಿದ ರಾಯಚೂರಿನ ಮೂವರು ಬಾಲಕಿಯರು ಸೇರಿ ಓರ್ವ ವ್ಯಕ್ತಿ ನೀರು ಪಾಲು ಆಗಿರುವ ಆಂದ್ರಪ್ರದೇಶದ ಕಡಪ ಜಿಲ್ಲೆಯ ಸಿದ್ದಪಟ್ಟಣಂ ನಡೆದಿದೆ. Body:ಮದಿಹಾ(೧೨), ಫರಿಯಾ(೧೦), ಲೋಹಾ(೧೦) ಹಾಗೂ ಅನ್ವರ್ (೩೫) ಮೃತಪಟ್ಟವರಾಗಿದ್ದಾರೆ. ಕಡಪ ಜಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದಾಗ, ಅಲ್ಲಿಗೆ ಸಿದ್ದಪಟ್ಟಣಂ ಬಳಿ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈಜು ಆಡುವ ವೇಳೆ ಮೂವರು ಬಾಲಕಿಯರು ನೀರು ಪಾಲು ಆಗುತ್ತಿರುವುದನ್ನ ಕಂಡು ಅನ್ವರ್ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ಮೂವರು ಬಾಲಕಿಯರು ಸೇರಿದಂತೆ ರಕ್ಷಣೆ ಮಾಡಲು ತೆರಳಿದ ವ್ಯಕ್ತಿ ನೀರು ಪಾಲು ಆಗಿದ್ದಾರೆ.

Conclusion:ಮೃತಪಟ್ಟವರು ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಬಳಿ ಬಡವಣೆ ಬಳಿ ವಾಸವಾಗಿದ್ದರು. ಸದ್ಯ ಮೃತ ಶವಗಳನ್ನ ರಾಯಚೂರು ತೆಗೆದುಕೊಂಡು ಬರಲಾಗುತ್ತದೆ.

ABOUT THE AUTHOR

...view details