ಕರ್ನಾಟಕ

karnataka

ಚಿಂಚೋಡಿ ಬಳಿ ನಡುಗಡ್ಡೆಯಲ್ಲಿ ಸಿಲುಕಿದ 300ಕ್ಕೂ ಹೆಚ್ಚು ಕುರಿಗಳು-ಮೂವರು ಕುರಿಗಾಹಿಗಳ ರಕ್ಷಣೆಗೆ ಹರಸಾಹಸ

By

Published : Oct 22, 2019, 7:53 PM IST

ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ನಡುಗಡ್ಡೆಯಲ್ಲಿ ಸಿಲುಕಿದ್ದ ಸುಮಾರು 300ಕ್ಕೂ ಹೆಚ್ಚು ಕುರಿಗಳು ಮತ್ತು ಮೂವರು ಕುರಿಗಾಹಿಗಳನ್ನು ರಕ್ಷಿಸಲು ತಾಲೂಕು ಅಗ್ನಿಶಾಮಕ ದಳ ಸಿಬ್ಬಂದಿ ಮುಂದಾಗಿದ್ದು, ಬೋಟ್​ ಸಹಾಯದ ಮೂಲಕ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.

ಕುರಿ ಮತ್ತು ಕುರಿಗಾಯಿಗಳ ರಕ್ಷಣಾಕಾರ್ಯ ಆರಂಭ

ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆಯಲ್ಲಿ‌ ಸಿಲುಕಿರುವ 300ಕ್ಕೂ ಹೆಚ್ಚು ಕುರಿಗಳು ಮತ್ತು ಮೂವರು ಕುರಿಗಾಹಿಗಳನ್ನು ರಕ್ಷಿಸಲು ಅಗ್ನಶಾಮಕ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ನಡುಗಡ್ಡೆಗೆ ಸುಮಾರು 300ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ತೆರಳಿದ್ದ ಕುರಿಗಾಹಿಗಳು, ಕೃಷ್ಣಾ ನದಿಗೆ 3 ಲಕ್ಷಕ್ಕೂ ಅಧಿಕ ಕ್ಯೂಸೆಕ್​ ನೀರು ಬಿಟ್ಟ ಹಿನ್ನೆಲೆ ನಡುಗಡ್ಡೆಯಲ್ಲಿ ಸಿಲುಕಿದ್ದರು.

ನಡುಗಡ್ಡೆಯಲ್ಲಿ ಸಿಲುಕಿರುವ 300ಕ್ಕೂ ಹೆಚ್ಚು ಕುರಿ ಮತ್ತು ಕುರಿಗಾಹಿಗಳ ರಕ್ಷಣಾ ಕಾರ್ಯ ಆರಂಭ

ಸದ್ಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿರುವ ತಾಲೂಕು ಅಗ್ನಿಶಾಮಕ ದಳ ಸಿಬ್ಬಂದಿ, ಬೋಟ್​ ಸಹಾಯದೊಂದಿಗೆ ಕುರಿಗಾಹಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳದಲ್ಲಿ ತಹಸೀಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

Intro:ಸ್ಲಗ್: ನಡುಗಡ್ಡೆ ಸಿಲುಕಿದ ಕುರಿಗಳ ರಕ್ಷಣೆ
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೨-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಕೃಷ್ಣ ನದಿ ಪ್ರವಾಹದಿಂದ ನಡುಗಡ್ಡೆಯಲ್ಲಿ‌ ಸಿಲುಕಿದ ೩೦೦ಕ್ಕೂ೩ ಕುರಿಗಾಯಿಗಳನ್ನ ಹೆಚ್ಚು ಕುರಿಗಳನ್ನ ಅಗ್ನಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡುತ್ತಿದ್ದಾರೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ನಡುಗಡ್ಡೆಯಲ್ಲಿ ೩೦೦ಕ್ಕೂ ಹೆಚ್ಚು ಕುರಿಗಳನ್ನ ಮೇಯಿಸಲು ತೆರಳಿದ್ದಾರೆ. ಈ ವೇಳೆ ನದಿಗೆ ೩ ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬೀಡಲಾಗಿದೆ. ಇದರಿಂದ ನಡುಗಡ್ಡೆಯಲ್ಲಿ ೩೦೦ ಕ್ಕೂ ಹೆಚ್ಚುಗಳು ಹಾಗೂ ಇಬ್ಬರು ಕುರಿಗಾಯಿ ಸಿಲುಕಿಕೊಂಡಿದರಿಂದ ಅತಂತ್ರ. ಇದರ ಮಾಹಿತಿ ಪಡೆದ ತಾಲೂಕು ಆಡಳಿತ ಅಗ್ನಿಶಾಮಕ ಸಿಬ್ಬಂದಿಗಳ ಬೋಟ್‌ ಸಹಾಯದೊಂದಿಗೆ ಸುರಕ್ಷಿತ ಸ್ಥಳಕ್ಕೆ ಕರೆ ತರುವ ಕಾರ್ಯ ನಡೆದಿದೆ. ಸ್ಥಳದಲ್ಲಿ ತಹಸೀಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಂ ಹೊಡಿದ್ದಾರೆ.
Conclusion:ಬೈಟ್.೧: ಮಂಜುನಾಥ,ತಹಸೀಲ್ದಾರ್, ದೇವದುರ್ಗ

ABOUT THE AUTHOR

...view details