ಕರ್ನಾಟಕ

karnataka

ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಮೂವರು ಆರೋಪಿಗಳ ಬಂಧನ

By

Published : Feb 1, 2020, 8:52 PM IST

ರಾಯಚೂರಿನ ಬಾಲಕಿಯರ ಬಾಲಮಂದಿರದಲ್ಲಿನ 16 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

sexual-harassment-on-minor-girl
sexual-harassment-on-minor-girl

ರಾಯಚೂರು:ಬಾಲಕಿಯರ ಬಾಲಮಂದಿರದಲ್ಲಿನ 16 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಡಾ. ಸಿ.ಬಿ.ವೇದಮೂರ್ತಿ, ಎಸ್ಪಿ

ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿರುವ ಬಾಲಕಿಯರ ಬಾಲಮಂದಿರದಲ್ಲಿದ 16 ವರ್ಷದ ಬಾಲಕಿ ಮೇಲೆ ಅಲ್ಲಿಯೇ ಕ್ಲರ್ಕ್​ ಕೆಲಸ ಮಾಡಿತ್ತಿದ್ದ ಸಿದ್ದಯ್ಯ ಎಂಬುವವನು ಲೈಂಗಿಕ ದೌರ್ಜನ್ಯವೆಸಗಿದ್ದ. ಈತನಿಗೆ ಬಾಲಮಂದಿದ ಸೂಪರಿಂಟೆಂಡೆಂಟ್ ಸೈಯದ್ ಪಾಷಾ ಮತ್ತು ಅಡುಗೆ ಸಹಾಯಕಿ ಕಮಲಮ್ಮ ಸಹಕಾರ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಪ್ರಕರಣ ಹಿನ್ನಲೆ: 2019 ನ. 11ರಂದು ಬಾಲಮಂದಿರದಲ್ಲಿದ್ದ ಬಾಲಕಿಯನ್ನ ಆರೋಪಿ ಸಿದ್ದಯ್ಯ ಮನೆಗೆ ಕರೆದುಕೊಂಡು‌ ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದ ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ಪೋಕ್ಸೋ ಕಾಯ್ದೆಯಡಿ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ನಂತರ ದೌರ್ಜನ್ಯವೆಸಗಿದ್ದ ಆರೋಪಿ ನಾಪತ್ತೆಯಾಗಿದ್ದರಿಂದ ಆರೋಪಿಯನ್ನ ಬಂಧಿಸಲು ವಿಶೇಷ ತಂಡದ‌ ರಚಿಸಿ ಕಾರ್ಯಪ್ರವೃತ್ತರಾದ ವಿಶೇಷ ತಂಡ, ಸದ್ಯ ಆರೋಪಿಯನ್ನ ಬಂಧಿಸಿದೆ. ಬಳಿಕ ಆರೋಪಿ ಸಿದ್ದಯ್ಯ ವಿಚಾರಣೆ ವೇಳೆ ಲೈಂಗಿಕ ದೌರ್ಜನ್ಯವೆಗಿರುವುದನ್ನು ಒಪ್ಪಿಕೊಂಡಿದ್ದು, ಈತನ ಸಹಾಯಕ್ಕೆ ಸೂಪರಿಂಟೆಂಡೆಂಟ್​ ಹಾಗೂ‌ ಅಡುಗೆ ಸಹಾಯಕಿ ಇದ್ದರು ಎಂಬುದನ್ನು ಬಾಯಿಬಿಟ್ಟಿದ್ದಾನೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯವೆಸಗಿದ ಸಿದ್ದಯ್ಯ, ಅಡುಗೆ ಸಹಾಯಕಿ ಹಾಗೂ ಸೂಪರಿಂಟೆಂಡೆಂಟ್​​ ಸೈಯದ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details