ಕರ್ನಾಟಕ

karnataka

ಮುಡಾ ಅಧ್ಯಕ್ಷರಾಗಿ ಯಶಸ್ವಿ ಸೋಮಶೇಖರ್ ಅಧಿಕಾರ ಸ್ವೀಕಾರ

By

Published : Dec 21, 2022, 8:19 PM IST

ಮುಡಾ ಅಧ್ಯಕ್ಷರಾಗಿ ಯಶಸ್ವಿ ಸೋಮಶೇಖರ್ ಇಂದು ಅಧಿಕಾರ ಸ್ವೀಕಾರ ಮಾಡಿದರು.

Muda President Yassav Somashekhar
ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್

ಮೈಸೂರು :ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನೂತನ ಅಧ್ಯಕ್ಷರಾಗಿ ಯಶಸ್ವಿ ಸೋಮಶೇಖರ್ ಬುಧವಾರ ಅಧಿಕಾರ ಸ್ವೀಕರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ಅಭಿವೃದ್ಧಿಗಾಗಿ ಪ್ರಾರಂಭಿಸಿದ ಜಾಗದಲ್ಲಿ‌ ಕೂತು ಕೆಲಸ ಮಾಡಲು ಅವಕಾಶ ಸಿಕ್ಕಿದೆ. ನಗರದ ಅಭಿವೃದ್ಧಿ ಮಾಡಲು ಸರ್ಕಾರ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದೆ. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ ಎಂದರು.

ನಗರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ‌. ಮೈಸೂರು ಸಾಕಷ್ಟು ಬೆಳೆದಿದೆ. ಜನಸಂಖ್ಯೆಯೂ ಹೆಚ್ಚಾಗಿದೆ. ಜನಸಂಖ್ಯೆಗೆ ತಕ್ಕಂತೆ ಬಡಾವಣೆಗಳು ಹೆಚ್ಚಾಗುತ್ತಿವೆ. ಮೂಲ ಸೌಲಭ್ಯ, ರಸ್ತೆ ಚರಂಡಿ‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತೇನೆ ಎಂದು ತಿಳಿಸಿದರು. ನನಗೆ ಸಿಕ್ಕಿರುವುದು ಕಡಿಮೆ ಕಾಲಾವಕಾಶ. 6 ತಿಂಗಳಲ್ಲೇ 6 ವರ್ಷಗಳಲ್ಲಿ ಮಾಡಬಹುದಾದ ಕಾರ್ಯ ಮಾಡುವ ಹುಮ್ಮಸ್ಸಿದೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಮತ್ತೆ ಅಧಿಕಾರ ಸಿಗುವ ವಿಶ್ವಾಸವಿದೆ ಎಂದರು. ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದೆ. ರಿಂಗ್ ರಸ್ತೆಯ ಮೇಲೆ ಒತ್ತಡ ಅಧಿಕವಾಗಿದ್ದು, ಒತ್ತಡ ತಗ್ಗಿಸಲು ಫ್ಲೈ ಓವರ್ ಮಾಡಬೇಕಾದ ಅಗತ್ಯವಿದೆ. ತುರ್ತಾಗಿ ಕೊಲಂಬಿಯ ಏಶಿಯಾ‌ ಆಸ್ಪತ್ರೆ ಬಳಿ ಫ್ಲೈ‌ ಓವರ್ ಮಾಡಬೇಕಾಗಿದ್ದು, ಸಿಎಂ ಜತೆ ಚರ್ಚಿಸಿ ನನ್ನ ಅವಧಿಯಲ್ಲೇ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು.

ಜೊತೆಗೆ ಪೆರಿಪರಲ್‌ ರಿಂಗ್ ರಸ್ತೆ ಅನುಷ್ಠಾನಕ್ಕೂ ಪ್ರಯತ್ನಿಸುತ್ತೇನೆ. ರಾಜೀವ್ ಅವರು ಅಧ್ಯಕ್ಷರಾಗಿದ್ದಾಗ ರೂಪಿಸುವ ಗುಂಪುಮನೆ ಯೋಜನೆ ಮುಂದುವರಿಸಲು ಪ್ರಯತ್ನಿಸುತ್ತೇನೆ ಎಂದು‌ ತಿಳಿಸಿದರು.

ಇದನ್ನೂ ಓದಿ :ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರಾಜೀವ್ ನೇಮಕ

ABOUT THE AUTHOR

...view details