ಕರ್ನಾಟಕ

karnataka

ಕಪಿಲಾ ನದಿಗೆ ಹಾರಿ ಮಹಿಳೆ ಸಾವು : ಇಬ್ಬರು ಪ್ರಾಣಾಪಾಯದಿಂದ ಪಾರು.

By

Published : Oct 19, 2020, 5:51 PM IST

ಸಾಲ ತೀರಿಸಲು ಆಗದೆ ಹೆದರಿ ಕಪಿಲಾ ನದಿಗೆ ತಾಯಿ, ಮಗಳು ಹಾಗೂ ಮೊಮ್ಮಗಳು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಇಬ್ಬರು ಪಾರಾಗಿ, ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.

suicide
ಮಹಿಳೆ ಸಾವು

ಮೈಸೂರು:ಕಪಿಲಾ ನದಿಗೆ ತಾಯಿ, ಮಗಳು ಹಾಗೂ ಮೊಮ್ಮಗಳು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು , ಅದರಲ್ಲಿ ಇಬ್ಬರು ಪಾರಾಗಿ, ಒಬ್ಬ ಮಹಿಳೆ ಸಾವನ್ನಪ್ಪಿರುವ ಘಟನೆ ನಂಜನಗೂಡಿನ ಕಪಿಲಾ ನದಿಯಲ್ಲಿ ನಡೆದಿದೆ.

ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಅಕ್ಕಮ್ಮ (60) ಮಗಳು ರಶ್ಮಿ (35) ಹಾಗೂ ಮೊಮ್ಮಗಳು ಮಿಂಚು (10). ಈ ಮೂವರಲ್ಲಿ ಮಗಳು ರಶ್ಮಿ ಸಾವನ್ನಪ್ಪಿದ್ದು , ಅಜ್ಜಿ, ಮೊಮ್ಮಗಳು ಪಾರಾಗಿದ್ದಾರೆ.

ಕಪಿಲಾ ನದಿಗೆ ಹಾರಿ ಮಹಿಳೆ ಸಾವು

ಈ ಮೂವರು ಮೈಸೂರಿನ ಜೆ.ಎಸ್.ಎಸ್. ಲೇಔಟ್​ನ‌ ನಿವಾಸಿಗಳಾಗಿದ್ದು , ರಶ್ಮಿ ಬ್ಯಾಂಕ್ ಉದ್ಯೋಗಿ ಎನ್ನಲಾಗಿದೆ. ಸುಮಾರು 50 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಇವರು ಸಾಲ ತೀರಿಸಲು ಆಗದೆ ಹೆದರಿ ಆತ್ಮಹತ್ಯೆಗೆ ಮುಂದಾಗಿದ್ದು, ಸಾಲದಿಂದ ಮನೆಯಲ್ಲಿ ಗಲಾಟೆಯಾಗುತ್ತಿತ್ತು , ಇದರಿಂದ ಮನನೊಂದು ನಂಜನಗೂಡಿನ ಪಟ್ಟಣದ ಮಲ್ಲನಮೂಲೆ ಮಠದ ಕಪಿಲಾ ನದಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಬದುಕಿರುವ ಅಜ್ಜಿ, ಮೊಮ್ಮಗಳನ್ನು ಚಿಕಿತ್ಸೆಗೆಂದು ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಸಾವನ್ನಪ್ಪಿರುವ ರಶ್ಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details