ಕರ್ನಾಟಕ

karnataka

ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಪ್ರಕರಣಕ್ಕೆ ಟ್ವಿಸ್ಟ್​​: ಪ್ರೀತಿಗೆ ಬೇಬಿ ಅಡ್ಡಿ ಎಂದು ನಾಟಕವಾಡಿದ ಲವ್​ಬರ್ಡ್ಸ್​

By

Published : May 23, 2022, 3:18 PM IST

ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗು ಕೊಟ್ಟು ಪರಾರಿ ಆಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೀತಿಗೆ ಮಗು ಅಡ್ಡಿ ಆಗುತ್ತದೆ ಎಂಬ ಕಾರಣಕ್ಕೆ ಅನಾಥ ಮಗು ಎಂದು ಬಿಂಬಿಸಿದ ಪ್ರೇಮಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

Woman gives the child to young man hands and escapes case
ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ

ಮೈಸೂರು:ಕಳೆದ 15 ದಿನಗಳ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ, ಹೆಚ್.ಡಿ. ಕೋಟೆಯ ಯುವಕ ರಘು ಕೈಗೆ ಗಂಡು ಮಗು ಕೊಟ್ಟು ಪರಾರಿ ಆಗಿದ್ದರು. ಆ ಮಗುವನ್ನ ಯುವಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ, ಪೊಲೀಸರಿಗೊಪ್ಪಿಸಿದ್ದ. ಬಳಿಕ ಪೊಲೀಸರು ಮಗುವನ್ನ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟಿದ್ದರು.

ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಪ್ರಕರಣಕ್ಕೆ ಟ್ವಿಸ್ಟ್

ತನಿಖೆ ಕೈಗೊಂಡಾಗ ಪೊಲೀಸರಿಗೆ ಆ ಮಗು ತಂದುಕೊಟ್ಟಿದ್ದ ರಘು ಹಾಗೂ ಆ ಮಗುವಿನ ತಾಯಿಯ ನಿಜವಾದ ಸಂಬಂಧ ಗೊತ್ತಾಗಿದೆ. ಮಗುವಿನ ತಾಯಿಗೆ ರಘು ಇನ್​​​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಆತನಿಗೆ ರಾಯಚೂರಿನ ಮಹಿಳೆಯೊಂದಿಗೆ ಒಡನಾಟ ಇತ್ತು. ಇದು ಮಹಿಳೆಯ ಗಂಡನಿಗೂ ಕೂಡ ಗೊತ್ತಾಗಿತ್ತು. ಅವರ ಪ್ರೀತಿಗೆ ಅಡ್ಡಿಯಾಗುವ ಈ ಮಗುವನ್ನ ದೂರ ಮಾಡುವ ಪ್ಲ್ಯಾನ್​​ ಮಾಡಿ, ರಾಯಚೂರಿನ ಬಸ್ ಸ್ಟ್ಯಾಂಡ್​ನಲ್ಲಿ ಅಪರಿಚಿತ ಮಹಿಳೆ ಮಗುವನ್ನ ಕೊಟ್ಟು ಹೋದಳು ಎಂಬ ಕಥೆಯನ್ನ ರಘು ಕಟ್ಟಿದ್ದ.

ಇದರಿಂದ ಅನುಮಾನಗೊಂಡ ಲಷ್ಕರ್ ಪೊಲೀಸರು ಮಗುವಿನ ತಂದೆಯನ್ನ ಪತ್ತೆ ಮಾಡಿ ವಿಚಾರಿಸಿದಾಗ ಇವರಿಬ್ಬರ ಸಂಬಂಧ ಹಾಗೂ ಡ್ರಾಮಾ ಗೊತ್ತಾಗಿದೆ. ಇಬ್ಬರನ್ನ ಬಂಧಿಸಿರುವ ಲಷ್ಕರ್ ಪೊಲೀಸರು, ಕಳ್ಳ ಪ್ರೇಮಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹೀಗೆ ಅಕ್ರಮ ಸಂಬಂಧಕ್ಕೆ ರಾಯಚೂರಿನ ಮಹಿಳೆ ಹಾಗೂ ಹೆಚ್.ಡಿ.ಕೋಟೆ ಮೂಲದ ರಘು ಆಡಿದ ನಾಟಕವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಇದನ್ನೂ ಓದಿ:ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ವೈದ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details