ಕರ್ನಾಟಕ

karnataka

ಮೈಸೂರು: ಸೊಸೆಗೆ ಚಾಕು ಚುಚ್ಚಿದ ಅತ್ತೆ.. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ

By

Published : Sep 29, 2021, 2:23 PM IST

ಸೊಸೆಗೆ ಚಾಕು ಅತ್ತೆ ಚಾಕುವಿನಿಂದ ಚುಚ್ಚಿದ್ದು, ಬಳಿಕ ಭಯಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

woman-committed-suicide-after-stabbing-knife-to-daughter-in-law
ಮೈಸೂರು: ಸೊಸೆಗೆ ಚಾಕು ಚುಚ್ಚಿದ ಅತ್ತೆ... ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೈಸೂರು:ಸೊಸೆಗೆ ಚಾಕು ಚುಚ್ಚಿ ಭಯಗೊಂಡ ಅತ್ತೆ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ. ನಿವೃತ್ತ ಶಿಕ್ಷಕಿ, ಬೋಗಾದಿ ಮಾದೇವಿ (62) ನೇಣಿಗೆ ಶರಣಾದ ವೃದ್ಧೆ ಎಂದು ತಿಳಿದು ಬಂದಿದೆ.

ಒಂದೇ ಮನೆಯಲ್ಲಿ ಕೆಳಗಡೆ ಮಾದೇವಿ ವಾಸವಾಗಿದ್ದರೆ, ಮೇಲುಗಡೆ ಮಹಡಿ ಮನೆಯಲ್ಲಿ ವಾಸವಿದ್ದ ಮಗ ಹಾಗೂ ಸೊಸೆ ವೇದಾವತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಕೋಪದಲ್ಲಿ ಮಾದೇವಿ ಸೊಸೆಗೆ ಚಾಕುವಿನಿಂದ ಚುಚ್ಚಿದ್ದಾರೆ. ಸೊಸೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಗಾಯಗೊಂಡ ವೇದಾವತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೊಸೆ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅತ್ತೆ ಮಾದೇವಿ ಪೊಲೀಸರಿಗೆ ಹೆದರಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Watch... ಪವಾಡ ಸದೃಶ್ಯ ರೀತಿ ಬದುಕುಳಿದ ತಾಯಿ: 4 ವರ್ಷದ ಮಗುವಿಗಾಗಿ ಮುಂದುವರಿದ ಶೋಧ

ABOUT THE AUTHOR

...view details