ಕರ್ನಾಟಕ

karnataka

ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ: ಮಹಾತ್ಮನಿಗೆ ನಮನ ಸಲ್ಲಿಸಿ ಭಜನೆ... ಖಾದಿ ಕೇಂದ್ರಕ್ಕೆ ರಾಹುಲ್ ಭೇಟಿ

By

Published : Oct 2, 2022, 9:41 AM IST

Updated : Oct 2, 2022, 12:16 PM IST

ನಂಜನಗೂಡಿನ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಮಹಾತ್ಮ ಗಾಂಧಿ ಪುತ್ಥಳಿಗೆ ನಮನ ಸಲ್ಲಿಸಿದರು.

Rahul Gandhi
ಮಹಾತ್ಮನಿಗೆ ಪುಷ್ಪ ನಮನ ಸಲ್ಲಿಸಿದ ರಾಹುಲ್ ಗಾಂಧಿ

ಮೈಸೂರು: ಗಾಂಧಿ ಜಯಂತಿ ಅಂಗವಾಗಿ ನಂಜನಗೂಡು ತಾಲೂಕಿನ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಗಾಂಧಿ ಜಯಂತಿ ಹಿನ್ನೆಲೆ ಭಾರತ್ ಜೋಡೋ ಪಾದಯಾತ್ರೆಗೆ ಇಂದು ಬೆಳಗ್ಗೆ ಬ್ರೇಕ್​ ನೀಡಲಾಗಿದೆ. ಗಾಂಧಿ ಪುತ್ಥಳಿಗೆ ನಮನ ಸಲ್ಲಿಸಿದ ಬಳಿಕ ಕಾಂಗ್ರೆಸ್ ನಾಯಕರು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ತೆರಳಿ, ಅಲ್ಲಿನ ಸಿಬ್ಬಂದಿ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್ ಮತ್ತು ಕೆ ಹೆಚ್​ ಮುನಿಯಪ್ಪ ಸೇರಿದಂತೆ ಹಲವರು ಇದ್ದರು.

ನಂತರ‌ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3ರ ವರೆಗೂ ಬದನವಾಳು ಗ್ರಾಮದಲ್ಲಿ ರಾಹುಲ್ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ರಾಗಾ ಜೊತೆ 1.5 ಕಿ.ಮೀ​ ನಡೆದ ಮೆಡಿಕಲ್ ವಿದ್ಯಾರ್ಥಿನಿ:‌ ಫಿಟ್​ನೆಸ್, ಆಯುರ್ವೇದದ ಬಗ್ಗೆ ಚರ್ಚೆ

ಮಧ್ಯಾಹ್ಮ 3.30ಕ್ಕೆ ಇತಿಹಾಸ ಪ್ರಸಿದ್ಧ ನಂಜನಗೂಡಿನ‌ ನಂಜುಡೇಶ್ವರ ಸನ್ನಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಸಂಜೆ ನಾಲ್ಕು ಗಂಟೆಗೆ ಎಂದಿನಂತೆ ತಾಂಡವಪುರದಿಂದ ಪಾದಯಾತ್ರೆ ಆರಂಭ ಮಾಡಲಿದ್ದಾರೆ.

Last Updated : Oct 2, 2022, 12:16 PM IST

ABOUT THE AUTHOR

...view details