ಕರ್ನಾಟಕ

karnataka

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯ: ಮೈಸೂರಿನಲ್ಲಿ ಪ್ರಗತಿಪರರಿಂದ ಪ್ರತಿಭಟನೆ

By

Published : Jul 17, 2023, 6:18 PM IST

Updated : Jul 17, 2023, 7:49 PM IST

ಬೆಳ್ತಂಗಡಿ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ.

protest-to-demanding-re-investigation-on-belthangady-student-rape-murder-case
ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯ: ಮೈಸೂರಿನಲ್ಲಿ ಪ್ರಗತಿಪರರಿಂದ ಪ್ರತಿಭಟನೆ

ಮೈಸೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 11 ವರ್ಷಗಳ ಹಿಂದೆ ನಡೆದ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ನಗರದಲ್ಲಿ ಬಹೃತ್ ಪ್ರತಿಭಟನೆ ನಡೆಸಲಾಯಿತು. ಬಾಲಕಿಯ ಪೋಷಕರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಮಾವೇಶಗೊಂಡು, ಬಳಿಕ ಪ್ರತಿಭಟನಾ ಮೆರವಣಿಗೆ ಹೊರಟ ಪ್ರಗತಿಪರರು, ವಿದ್ಯಾರ್ಥಿಗಳು, ಹೋರಾಟಗಾರರು ನೊಂದ ಕುಟುಂಬಕ್ಕೆ ನ್ಯಾಯ ಒದ ಆಗ್ರಹಿಸಿದರು. ಮರು ತನಿಖೆಗೆ ಆಗ್ರಹಿಸುವ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿ ಧಿಕ್ಕಾರ ಕೂಗಿದರು. ವಿನೋಬಾ ರಸ್ತೆ ಮಾರ್ಗವಾಗಿ ಸಾಗಿದ ಪ್ರತಿಭಟನಾ ಜಾಥಾದಲ್ಲಿ ಬಾಲಕಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.

ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಪೋಷಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಾಯಿ ಮಾತನಾಡಿ, ''11 ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇಷ್ಟು ವರ್ಷಗಳವರೆಗೆ ನಾವು ಪಟ್ಟ ನೋವು ಮತ್ಯಾರಿಗೂ ಬರಬಾರದು. ಈ ಘಟನೆಯಿಂದ ನಾವು ಸಾಕಷ್ಟು ನೊಂದಿದ್ದೇವೆ. ಜನರು ಹೋರಾಟದ ಮೂಲಕವೇ ನಮಗೆ ನ್ಯಾಯ ದೊರಕಿಸಿಕೊಡಬೇಕು'' ಎಂದು ಅಂಗಲಾಚಿದರು.

ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಮಾತನಾಡಿ, 'ಈ ಪ್ರಕರಣದಲ್ಲಿ ನನ್ನ ತಮ್ಮ ಸಂತೋಷ್​ನದು ಯಾವುದೇ ತಪ್ಪಿಲ್ಲ. ದೇವಸ್ಥಾನಕ್ಕೆ ಹೋಗಿದ್ದ ಆತನನ್ನು ಆರೋಪಿ ಮಾಡಿದರು. ಯಾವ ತಪ್ಪು ಮಾಡದೇ ಆತ 6 ವರ್ಷ ಜೈಲು ಶಿಕ್ಷೆ ಅನುಭವಿಸಿದ. ಈಗ ನಿರಪರಾಧಿಯಾಗಿ ಹೊರಗೆ ಬಂದಿದ್ದಾನೆ. ನಮಗಾದ ಅನ್ಯಾಯಕ್ಕೆ ಪರಿಹಾರ ಸಿಗಬೇಕು' ಎಂದು ಒತ್ತಾಯಿಸಿದರು.

ಒಡನಾಡಿಯ ಸ್ಟ್ಯಾನ್ಲಿ ಮಾತನಾಡಿ, ಕಾನೂನಿಗೆ ಗೋರಿ ಕಟ್ಟಿದ್ದರಿಂದ ವಿದ್ಯಾರ್ಥಿನಿ ಮತ್ತು ಸಂತೋಷ್ ರಾವ್ ಮನೆಗಳು ಸ್ಮಶಾನದಂತಾಗಿವೆ. ಈ ಪ್ರಕರಣದಲ್ಲಿ ಭಾಗಿದಾರರಾದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳು ಬಾಲಕಿಯ ಮನೆಗೆ ಭೇಟಿ ಕೊಡಬೇಕು. ಈಗಾಗಲೇ ಸಾಕಷ್ಟು ನೊಂದಿರುವ ಆಕೆಯ ಪೋಷಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಡಾ.ಸಬೀಹಾ ಭೂಮಿಗೌಡ, ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಹೋರಾಟಗಾರ್ತಿ ಸೀಮಾ, ಜಿ.ಪಿ.ಬಸವರಾಜು, ಹೆಚ್.ಜನಾರ್ಧನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು: ಕಳೆದ 11 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಅರೋಪದಡಿ ಬೆಳ್ತಂಗಡಿ ಠಾಣೆ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಸಂತೋಷ್​ ರಾವ್​ ನಿರ್ದೋಷಿ ಎಂದು ಕಳೆದ ಜೂನ್​ ತಿಂಗಳಿನಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ಬೆಳ್ತಂಗಡಿಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್: ಆರೋಪಿ ಸಂತೋಷ್ ರಾವ್ ನಿರಪರಾಧಿ- ಸಿಬಿಐ ಕೋರ್ಟ್ ತೀರ್ಪು

Last Updated : Jul 17, 2023, 7:49 PM IST

ABOUT THE AUTHOR

...view details