ಕರ್ನಾಟಕ

karnataka

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಂಭ್ರಮದ ತೆಪ್ಪೋತ್ಸವ: VIDEO

By

Published : Mar 29, 2021, 10:34 AM IST

ನಂಜನಗೂಡಿನಲ್ಲಿ‌ ಮಾರ್ಚ್ 26 ರಂದು ಜರುಗಿದ ಗೌತಮೀ ಪಂಚ ಮಹಾರಥೋತ್ಸವ ನಂತರ ಭಾನುವಾರ ಸಂಜೆ ದಕ್ಷಿಣ ಕಾಶಿ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿ ಬಳಿ ಶ್ರೀಕಂಠೇಶ್ವರ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳ ತೆಪ್ಪೋತ್ಸವ ಜರುಗಿತು.

nanjangud srikanteshwara and parvathy devi  teppostav
ತೆಪ್ಪೋತ್ಸವ

ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ಕಪಿಲ‌ ನದಿಯಲ್ಲಿ ಶ್ರೀಕಂಠೇಶ್ವರ ಮತ್ತು ಪಾರ್ವತಿ ದೇವಿಯ ತೆಪ್ಪೋತ್ಸವ ವಿಜೃಂಭಣೆಯಿಂದ ಜರುಗಿತು.

ತೆಪ್ಪೋತ್ಸವ

ನಂಜನಗೂಡಿನಲ್ಲಿ‌ ಮಾರ್ಚ್ 26 ರಂದು ಜರುಗಿದ ಗೌತಮೀ ಪಂಚ ಮಹಾರಥೋತ್ಸವದ ನಂತರ, ಭಾನುವಾರ ಸಂಜೆ ದಕ್ಷಿಣ ಕಾಶಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿ ಹರಿಯುವ ಕಪಿಲ ನದಿಯ ಸ್ನಾನ ಘಟ್ಟದ ಬಳಿ ಇರುವ ಮಂಟಪಕ್ಕೆ ಶ್ರೀಕಂಠೇಶ್ವರ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಅಲಂಕೃತ ದೋಣಿಯಲ್ಲಿ ಇಟ್ಟು ತೆಪ್ಪೋತ್ಸವ ನಡೆಸಲಾಯಿತು.

ದೇವಾಲಯದ ಅಧಿಕಾರಿಗಳು, ಅರ್ಚಕರು, ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದು ತೆಪ್ಪೋತ್ಸವ ಕಣ್ತುಂಬಿಕೊಂಡರು.

ಇದನ್ನೂ ಓದಿ:ಹೋಳಿ ನಿಮಿತ್ತ ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ.. ವಿಡಿಯೋ

ABOUT THE AUTHOR

...view details