ಕರ್ನಾಟಕ

karnataka

'ಕಪಿಲಾ ನದಿಯಿಂದ ನಂಜನಗೂಡಿಗೆ ಸರಬರಾಜಾಗುವ ಕುಡಿಯುವ ನೀರು ಯೋಗ್ಯವಲ್ಲ'

By

Published : Jan 14, 2022, 3:11 PM IST

ನಗರಸಭೆ ಸದಸ್ಯರಿಂದ ವರದಿ

ನಂಜನಗೂಡಿಗೆ ದೇಬೂರು ಗ್ರಾಮದ ಕಪಿಲಾ ನದಿಯ ಪಂಪ್ ಹೌಸ್‌ನಿಂದ ನೀರು ಸರಬರಾಜಾಗುತ್ತಿದೆ. ಸುಮಾರು 60 ಸಾವಿರ ಮಂದಿ ಇದೇ ನೀರನ್ನು ಬಳಸುತ್ತಿದ್ದಾರೆ. ಜನವರಿ 6ರಂದು ಸಾರ್ವಜನಿಕರೊಬ್ಬರು ಪಡೆದ ನೀರಿನ ಗುಣಮಟ್ಟದ ವರದಿಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ ಎಂದು ನಗರ ಸಭೆ ಸದಸ್ಯರೊಬ್ಬರು ತಿಳಿಸಿದರು.

ಮೈಸೂರು:ಕಪಿಲಾ ನದಿಯಿಂದ ನಂಜನಗೂಡು ನಗರಕ್ಕೆ ಸರಬರಾಜಾಗುವ ನೀರು ಬಳಕೆಗೆ ಯೋಗ್ಯವಲ್ಲ ಎಂಬ ವರದಿಯನ್ನು ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರದರ್ಶನ ಮಾಡಿದರು.

ನಂಜನಗೂಡು ನಗರಸಭೆ ಸಾಮಾನ್ಯ ಸಭೆಯಲ್ಲಿ ಅಶುದ್ಧ ಕುಡಿಯುವ ನೀರಿನ ಸರಬರಾಜು ವಿಚಾರ ಪ್ರತಿ ಧ್ವನಿಸಿತು. ಸಾಮಾನ್ಯ ಸಭೆಯಲ್ಲಿ ಸದಸ್ಯ ದೊರೆಸ್ವಾಮಿ ಲ್ಯಾಬ್ ರಿಪೋರ್ಟ್ ಪ್ರದರ್ಶಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜೊತೆಗೆ, ಈ ನೀರನ್ನು ನಂಜನಗೂಡಿನ‌ ಜನ ಕುಡಿಯುವುದರಿಂದ ಅವರ ಆರೋಗ್ಯದ ಮೇಲೆ ಸಮಸ್ಯೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ, ವಾರ್ಡ್‌ಗಳಿಗೆ ಅನುದಾನ ನೀಡದಿರುವ ಬಗ್ಗೆ ನಡಾವಳಿ ಪುಸ್ತಕದಲ್ಲಿ ಸಮರ್ಪಕವಾಗಿ ದಾಖಲಿಸದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದ ವೇಳೆ ನಗರಸಭಾ ದೊರೆಸ್ವಾಮಿ ಈ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದರು. ನಂಜನಗೂಡಿಗೆ ದೇಬೂರು ಗ್ರಾಮದ ಕಪಿಲಾ ನದಿಯ ಪಂಪ್ ಹೌಸ್‌ನಿಂದ ನೀರು ಸರಬರಾಜಾಗುತ್ತಿದೆ. ಸುಮಾರು 60 ಸಾವಿರ ಮಂದಿ ಇದೇ ನೀರನ್ನು ಬಳಸುತ್ತಿದ್ದಾರೆ. ಜನವರಿ 6ರಂದು ಸಾರ್ವಜನಿಕರೊಬ್ಬರು ಪಡೆದ ನೀರಿನ ಗುಣಮಟ್ಟದ ವರದಿಯಲ್ಲಿ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಧ್ಯಕ್ಷರು ಹಾಗೂ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಕೊರೊನಾದಿಂದ ತತ್ತರಿಸಿರುವ ಜನತೆ ಅಶುದ್ಧ ಕುಡಿಯುವ ನೀರಿನಿಂದ ಮತ್ತಷ್ಟು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಈ ನೀರು ಬಳಸಿದ ಹಲವರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ. ಹಾಗಾಗಿ, ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಿ‌ ಎಂದು ಅವರು ಒತ್ತಾಯಿಸಿದರು.

ABOUT THE AUTHOR

...view details