ಕರ್ನಾಟಕ

karnataka

ಮುಡಾದಿಂದ ಗುಂಪು ಮನೆ ನಿರ್ಮಾಣಕ್ಕೆ ಅನುಮೋದನೆ : ಮುಡಾ ಅಧ್ಯಕ್ಷ ರಾಜೀವ್

By

Published : Aug 14, 2021, 4:11 PM IST

ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಜಂಟಿಯಾಗಿ ಈ ಯೋಜನೆಯನ್ನ ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಗಾಗಿ 14 ಸಾವಿರ ಕೋಟಿಗೂ ಹೆಚ್ಚು ಅನುದಾನ ಕಾಯ್ದಿರಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಡಾ ಚಿಂತನೆ ನಡೆಸಿದೆ..

Muda President Rajeev
ಮುಡಾ ಅಧ್ಯಕ್ಷ ರಾಜೀವ್

ಮೈಸೂರು :ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ‌ ಮೈಸೂರು ಮುಡಾದಿಂದ ಗುಂಪು ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ತಿಳಿಸಿದರು‌.

ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು ಮಾಹಿತಿ ನೀಡುತ್ತಿರುವುದು..

ಇಂದು ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ವತಿಯಿಂದ ಈ ವರ್ಷದಲ್ಲಿ ವಿಜಯನಗರದ 4ನೇ ಹಂತ, ದಟ್ಟಕಳ್ಳಿಯ 1ನೇ ಹಂತ, ಸಾಗಟ್ಟಳ್ಳಿ ಬಿ.ವಲಯದ ಡಾ.ಬಿರ್.ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿ ಸುಮಾರು 462.60 ಕೋಟಿ ರೂ. ವೆಚ್ಚದಲ್ಲಿ 1960 ಗುಂಪು ಮನೆಗಳನ್ನು ನಿರ್ಮಾಣ ಮಾಡಲು ಅನುಮತಿ‌ ನೀಡಲಾಗಿದೆ ಎಂದರು.

ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಮುಂದಿನ 30 ವರ್ಷಗಳ ಬೆಳವಣಿಗೆಯ ದೃಷ್ಟಿ ಇಟ್ಟುಕೊಂಡು ಮೆಟ್ರೊಲೈಟ್, ಮೆಟ್ರೊ ನಿಯೋ ಯೋಜನೆಯನ್ನು ಜಾರಿಗೆ ತರುವ ಸಂಬಂಧ ಡಿಪಿಆರ್ ತಯಾರಿಸಲು ಅನುಮೋದನೆ ನೀಡಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಜಂಟಿಯಾಗಿ ಈ ಯೋಜನೆಯನ್ನ ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಗಾಗಿ 14 ಸಾವಿರ ಕೋಟಿಗೂ ಹೆಚ್ಚು ಅನುದಾನ ಕಾಯ್ದಿರಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಡಾ ಚಿಂತನೆ ನಡೆಸಿದೆ ಎಂದರು.

ಓದಿ: Video: ಗುಬ್ಬಿ ಶಾಸಕ ಶ್ರೀನಿವಾಸ್​-ತುಮಕೂರು ಸಂಸದ ಬಸವರಾಜು ಜಟಾಪಟಿ..ಸಾರ್ವಜನಿಕ ಕಾರ್ಯಕ್ರಮದಲ್ಲೇ ಜೋರು ಜಗಳ!

ಮುಡಾ ಹಾಗೂ ಮುಡಾದಿಂದ ಅನುಮೋದನೆ ಪಡೆದ ಖಾಸಗಿ ಬಡಾವಣೆಗಳಿಗೆ ಕಬಿನಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಬಿದರಗೂಡು ಯೋಜನೆಯಲ್ಲಿ ಈಗಾಗಲೇ 180 ಎಂಎಲ್​​ಡಿ ಸಾಮಾರ್ಥ್ಯದ ಕುಡಿಯುವ ನೀರನ್ನು ಪಡೆಯಲು ಅವಕಾಶವಿದೆ. ಎಂಎಲ್​​ಡಿ ಮಾತ್ರ ಮೈಸೂರು ನಗರ ವ್ಯಾಪ್ತಿಯಲ್ಲಿ ಉಪಯೋಗಿಸಬಹುದು ಎಂದು ಮುಡಾ ಅಧ್ಯಕ್ಷರು ತಿಳಿಸಿದರು.

ABOUT THE AUTHOR

...view details