ಕರ್ನಾಟಕ

karnataka

ಕಾಂಗ್ರೆಸ್​ 140 ಸ್ಥಾನ ಗೆಲ್ಲಲಿದೆ: ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ

By

Published : Feb 15, 2023, 6:39 PM IST

ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ - ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕೊಟ್ಟ ಯಾವ ಭರವಸೆಯನ್ನು ಈಡೇರಿಸಿಲ್ಲ, ಬರಿ ಭರವಸೆಯನ್ನು ನೀಡುವುದರಲ್ಲಿ ತಲ್ಲೀನ ಎಂದು ಟೀಕಿಸಿದ ಡಿಕೆಶಿ.

mysuru-dk-sivakumar-statement-at-prajadwani-programme
ಕಾಂಗ್ರೆಸ್​ 140 ಸ್ಥಾನ ಗೆಲ್ಲಲಿದೆ: ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ

ಮೈಸೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 140 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 60 ಜೆಡಿಎಸ್ 25 ಸ್ಥಾನ ಗೆಲ್ಲಲಿದೆ. ಆದ್ದರಿಂದ ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಹೀಗಾಗಿ ಕಾಂಗ್ರೆಸ್ ಚಿನ್ಹೆಗೆ ಮತ ಹಾಕಿ ಎಂದು ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇಂದಿನಿಂದ ಮೈಸೂರು ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು. ಹುಣಸೂರು ಪಟ್ಟಣದ ಪ್ರಜಾಧ್ವನಿ ಸಮಾವೇಶದ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿ, ಮಾತನಾಡಿದ ಡಿಕೆ ಶಿವಕುಮಾರ್, ಕಮಲ ಕೆರೆಯಲ್ಲಿ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ, ಆದ್ದರಿಂದ ಕೈಗೆ ಶಕ್ತಿ ತುಂಬಿ ಮತ ಹಾಕಬೇಕು ಎಂದು ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ ಕಾಂಗ್ರೆಸ್​ಗೆ ಮತ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್​ಗೆ ವಿಶ್ವನಾಥ್, ಸುಳಿವು ನೀಡಿದ ಡಿಕೆಶಿ:ಎಚ್.ವಿಶ್ವನಾಥ್ ಈ ಭಾಗದ ಹಿರಿಯ ರಾಜಕಾರಣಿ, ಶಾಸಕರಾಗಿ, ಮಂತ್ರಿಯಾಗಿ ಮತ್ತು ಸಂಸದರಾಗಿ ಅನುಭವವಿದ್ದು, ಅವರು ಅಪರೇಷನ್ ಕಮಲದ ಮೂಲಕ‌ ಬಿಜೆಪಿಗೆ ಹೊದರು. ಅಲ್ಲಿ ಎಂಎಲ್​ಸಿ ಆಗಿದ್ದರು, ನಮ್ಮನ್ನ ಭೇಟಿ ಮಾಡಿ ನಾನು ಸಾಯುವ ಮುನ್ನ ಕಾಂಗ್ರೆಸ್ಸಿಗನಾಗಿರಬೇಕು ಎಂದು ಹೇಳಿದ್ದಾರೆ. ಆ ಮೂಲಕ ಮತ್ತೆ ವಿಶ್ವನಾಥ್ ಕಾಂಗ್ರೆಸ್ ಸೇರುವ ಬಗ್ಗೆ ಡಿ ಕೆ.ಶಿವಕುಮಾರ್ ಸುಳಿವು ನೀಡಿದರು.

ಯಾವ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ:ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕೊಟ್ಟ ಯಾವ ಭರವಸೆಯನ್ನು ಈಡೇರಿಸಿಲ್ಲ, ಬರೀ ಭರವಸೆಯನ್ನು ನೀಡುವುದರಲ್ಲಿ ತಲ್ಲೀನವಾಗಿದೆ. ಯುವಜನರಿಗೆ ಉದ್ಯೋಗವಿಲ್ಲ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಬಿಜೆಪಿ 40 ಪರ್ಸೆಂಟ್​ ಕಮಿಷನ್ ಸರ್ಕಾರವಾಗಿದೆ ಎಂದು ಟೀಕಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷವು ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೂ, ಅವರ ತಂದೆ ದೇವೆಗೌಡರು ಪ್ರಧಾನಿಯಾಗಲು ಬೆಂಬಲ ನೀಡಿತ್ತು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೊಟ್ಟ ಭರವಸೆ ಈಡೇರಿಸುತ್ತೇವೆ:ಕೊಟ್ಟ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯ ಯಜಮಾನಿಗೆ 2000 ರೂಪಾಯಿ ಪ್ರತಿ ತಿಂಗಳು ಕೊಡುತ್ತೇವೆ. 5 ವರ್ಷಕ್ಕೆ ಒಟ್ಟು 2 ಲಕ್ಷ ರೂಪಾಯಿ ಕೊಡುತ್ತೇವೆ. ಜೊತೆಗೆ ಪ್ರತಿ‌ ಮನೆಗೆ 10 ಕೆಜಿ ಅಕ್ಕಿಯನ್ನ ನೀಡಲಾಗುವುದು.

ಮೇ ತಿಂಗಳು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಜೂನ್​ನಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಈ‌ ಯೋಜನೆಗಳನ್ನ ನಾವು ಘೋಷಣೆ ಮಾಡುತ್ತೇವೆ. ನಾವು ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಎಂದು ಡಿ.ಕೆ.ಶಿವಕುಮಾರ್ ಹುಣಸೂರಿನಲ್ಲಿ ನಡೆದ ಬಹಿರಂಗ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.

ಇದನ್ನೂ ಓದಿ:ಜೆಡಿಎಸ್ ನಾಯಕರೊಬ್ಬರ ಮನೆ ಮೇಲೆ ಐಟಿ ದಾಳಿ.. ರಾಜ್ಯದ ಕೆಲವೆಡೆ ಎನ್​​ಐಎ ರೇಡ್​.. ಇಡಿಯಿಂದಲೂ ಕಲವೆಡೆ ಅಟ್ಯಾಕ್​

ABOUT THE AUTHOR

...view details