ಕರ್ನಾಟಕ

karnataka

ಭೂ ಮಾಫಿಯಾಗೆ ಅನುಕೂಲ ಮಾಡಲು ಕೆರೆ‌ ಕೋಡಿ ಒಡೆದ ಮುಡಾ ಆಯುಕ್ತರು : ಸೀತಾರಾಮ್ ಆರೋಪ

By

Published : Nov 26, 2021, 8:56 PM IST

ಕೆರೆ ಕೋಡಿ ಒಡೆಯುವಲ್ಲಿ ಶಾಮೀಲಾಗಿರುವ ಮುಡಾ ಆಯುಕ್ತರ ಮೇಲೆ ಕ್ರಮ‌ಕೈಗೊಳ್ಳಬೇಕು. ಕೆರೆಯನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ, ರಾಜ್ಯಪಾಲರು, ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು..

GV Sitaram
ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿವಿಸೀತಾರಾಮ್

ಮೈಸೂರು :ಭೂ ಮಾಫಿಯಾದವರ ಕಟ್ಟಡಗಳನ್ನು ರಕ್ಷಿಸಲು ಹಾಗೂ ನೀರು ಸಂಗ್ರಹವಾಗದಂತೆ ತಡೆಯುವ ಸಲುವಾಗಿ ಮುಡಾದವರು ಲಿಂಗಾಂಬುಧಿ ಕೆರೆ ಕೋಡಿಯನ್ನು ಒಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ ವಿ ಸೀತಾರಾಮ್ ಜತೆಗೆ ಈಟಿವಿ ಭಾರತ ಮಾತು..

ಈ ಕುರಿತು ಈಟಿವಿ ಭಾರತದೊಂದಿಗೆ ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್ ಮಾತನಾಡಿ, ಲಿಂಗಾಂಬುಧಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮನೆ, ಶಿಕ್ಷಣ ಸಂಸ್ಥೆ ಕಟ್ಟಿಕೊಂಡಿರುವ ಪ್ರಭಾವಿಗಳ ಕಟ್ಟಡಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮುಡಾದವರು ಕೆರೆಯ ಕೋಡಿ ಒಡೆದಿದ್ದು, ಶೀಘ್ರವೇ ಕೋಡಿಯನ್ನು ಯಥಾಸ್ಥಿತಿಗೆ ಎತ್ತರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಲಿಂಗಾಂಬುಧಿ ಕೆರೆ 220 ಎಕರೆ ವ್ಯಾಪ್ತಿಯಲ್ಲಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದಾರೆ. ಆದರೆ, ಈಗ ಈ ಕೆರೆಯನ್ನು ಮುಡಾ ಆಯುಕ್ತರು ಭೂ ಮಾಫಿಯದವರಿಗೆ ಅನುಕೂಲ ಮಾಡಿಕೊಡಲು 4 ಅಡಿ ಕೋಡಿ ಒಡೆದಿದ್ದಾರೆ. ಕೆರೆಗೆ 3 ರಾಜಕಾಲುವೆಗಳಿಂದ ನೀರು ಹರಿದು ಬಂದು ಸೇರುತ್ತದೆ.

ಆದರೆ, ಕೆರೆಯ ನೀರನ್ನು ಮ್ಯಾನ್‌ಹೋಲಿನಲ್ಲಿ ಹರಿಯುವಂತೆ ಮಾಡಿ ಕೆರೆ ತುಂಬದೆ ಇರುವಂತೆ ಮಾಡಿದ್ದಾರೆ. ಯುಜಿಡಿ ನೀರನ್ನು ಕೆರೆಗೆ ಹರಿಸುತ್ತಿದ್ದು, ಕೆರೆಯಲ್ಲಿ ಈಗ ಜಲಚರಗಳು ಇಲ್ಲದಂತಾಗಿವೆ. ಕೆರೆಯ ಸುತ್ತಮುತ್ತ ಅರಣ್ಯ ಇಲಾಖೆಯವರು ಕಾಡು ನಿರ್ಮಾಣ ಮಾಡಿದ್ದು, ವಿದೇಶಿ ಪಕ್ಷಿಗಳು ವಲಸೆ ಬರುತ್ತವೆ. ಅಲ್ಲದೆ ಸ್ಥಳೀಯ ಪ್ರಾಣಿ, ಪಕ್ಷಿಗಳಿಗೆ ಇದರಿಂದ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆ ಕೋಡಿ ಒಡೆಯುವಲ್ಲಿ ಶಾಮೀಲಾಗಿರುವ ಮುಡಾ ಆಯುಕ್ತರ ಮೇಲೆ ಕ್ರಮ‌ಕೈಗೊಳ್ಳಬೇಕು. ಕೆರೆಯನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ, ರಾಜ್ಯಪಾಲರು, ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: COVID-19 : ಮತ್ತೆ ಹೆಚ್ಚಿದ ಕೊರೊನಾ, 402 ಹೊಸ ಕೇಸ್ ಪತ್ತೆ

ABOUT THE AUTHOR

...view details