ಕರ್ನಾಟಕ

karnataka

ಜೆಡಿಎಸ್ ಅಭ್ಯರ್ಥಿಯನ್ನು ಪದವೀಧರರು ತಿರಸ್ಕರಿಸಿದ್ದು ಖುಷಿ ತಂದಿದೆ: ಎಂಎಲ್‌ಸಿ ಮರಿತಿಬ್ಬೇಗೌಡ

By

Published : Jun 16, 2022, 5:57 PM IST

ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಸಂಬಂಧಪಡದ ಅಭ್ಯರ್ಥಿಯನ್ನು ಹಾಕಿರುವುದೇ ಜೆಡಿಎಸ್ ಸೋಲಲು ಪ್ರಮುಖ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಮರೀತಿಬ್ಬೇಗೌಡ ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿಯನ್ನು ತಿರಸ್ಕಾರ ಮಾಡಿದ್ದು ಖುಷಿ ತಂದಿದೆ : ಎಂ ಎಲ್ ಸಿ ಮರಿತಿಬ್ಬೇಗೌಡ
ಜೆಡಿಎಸ್ ಅಭ್ಯರ್ಥಿಯನ್ನು ತಿರಸ್ಕಾರ ಮಾಡಿದ್ದು ಖುಷಿ ತಂದಿದೆ : ಎಂ ಎಲ್ ಸಿ ಮರಿತಿಬ್ಬೇಗೌಡ

ಮೈಸೂರು:ಶ್ರೀಮಂತ ಹಾಗೂ ಕ್ಷೇತ್ರಕ್ಕೆ ಸಂಬಂಧವಿಲ್ಲದ ಜೆಡಿಎಸ್ ಅಭ್ಯರ್ಥಿಯನ್ನು ಪದವೀಧರರು ತಿರಸ್ಕಾರ ಮಾಡಿದ್ದು ಖುಷಿ ತಂದಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರೀತಿಬ್ಬೇಗೌಡ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪದವೀಧರ ಮತದಾರರು ಮಧು ಜಿ.ಮಾದೇಗೌಡ ಅವರನ್ನು ಗೆಲ್ಲಿಸಿದ್ದು, ಈ ಕ್ಷೇತ್ರದ ಪಾರುಪತ್ಯವನ್ನು ನಾಡಿಗೆ ತೋರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಲಿಗೆ ಬಿಜೆಪಿ ಸರ್ಕಾರವೇ ಕಾರಣ. ಈ ಸರ್ಕಾರ ನಿರುದ್ಯೋಗ ಸಮಸ್ಯೆಗೆ ಯಾವುದೇ ಪರಿಹಾರ ನೀಡಿಲ್ಲ. ಅಪಾರ ಪ್ರಮಾಣದ ಭ್ರಷ್ಟಾಚಾರ, ಪಠ್ಯ ಪುಸ್ತಕ ವಿಚಾರದಲ್ಲಿ ಗೊಂದಲ ಇವುಗಳು ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಸೋಲಿಗೆ ಕ್ಷೇತ್ರಕ್ಕೆ ಸಂಬಂಧವಿಲ್ಲದ ಅಭ್ಯರ್ಥಿಯನ್ನು ಹಾಕಿರುವುದೇ ಆಗಿದೆ ಎಂದರು.

ಶಿಸ್ತು ಕ್ರಮ ಕೈಗೊಂಡರೆ ನಾನು ಸಿದ್ಧ: ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಮು ಸೋಲಿಗೆ ಪ್ರಮುಖ ಕಾರಣ, ಅವರಿಗೆ ಈ ಕ್ಷೇತ್ರ ಗೊತ್ತಿಲ್ಲ. ಜೊತೆಗೆ ಮತದಾರರ ಜೊತೆ ಬಾಂಧವ್ಯವಿಲ್ಲ. ಎರಡು ವರ್ಷ ಮುಂಚೆಯೇ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಸೂಚಿಸಿದ್ದು ಜೆಡಿಎಸ್ ಸೋಲಿಗೆ ಕಾರಣ. ನಾನು ಎಲ್ಲರ ಸಲಹೆಯನ್ನು ಪಡೆದು ಮಾದೇಗೌಡರ ಮಗನ ಪರವಾಗಿ ಪ್ರಚಾರ ಮಾಡಿದೆ. ಜೆಡಿಎಸ್ ಪಕ್ಷ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಅದನ್ನು ಎದುರಿಸಲು ಸಿದ್ಧ. ಪಕ್ಷದ ನಾಯಕರಲ್ಲಿ ಹೊಂದಾಣಿಕೆ ಕೊರತೆ ಕಾಣುತ್ತಿದ್ದು,ಅದನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಇದು ರಾಮು ಸೋಲಲ್ಲ ಪಕ್ಷದ ಸೋಲು, ಈ ಸೋಲಿಗೆ ಪಕ್ಷದ ನಾಯಕರೇ ಕಾರಣ ಎಂದು ಜೆಡಿಎಸ್ ವರಿಷ್ಠರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಸದ್ಯ ನಾನು ಜೆಡಿಎಸ್ ಪಕ್ಷದಲ್ಲಿದ್ದೇನೆ. ಮುಂದಿನ ತೀರ್ಮಾನವನ್ನು ಹಿತೈಷಿಗಳ ಜೊತೆ ಚರ್ಚಿಸಿ ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಮರೀತಿಬ್ಬೇಗೌಡ ಹೇಳಿದರು.

ಇದನ್ನೂ ಓದಿ:ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ

TAGGED:

ABOUT THE AUTHOR

...view details