ಕರ್ನಾಟಕ

karnataka

ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಿ: ರಮೇಶ ಜಾರಕಿಹೊಳಿ

By

Published : Jun 25, 2021, 1:43 PM IST

ಸ್ವಾಮೀಜಿಯನ್ನ ಭೇಟಿಯಾದ ಬಳಿಕ‌ ನಾನು ಮಾತನಾಡುತ್ತೇನೆ. ರಾಜೀನಾಮೆ ವಿಚಾರ ಮುಂಬೈನಲ್ಲಿ ಹೋಗಿ ಮಾತನಾಡುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

MLA Ramesh Jarkiholi
ಶಾಸಕ ರಮೇಶ್ ಜಾರಕಿಹೊಳಿ

ಮೈಸೂರು: ಸರ್ಕಾರ ತಂದವನು ನಾನು, ಹಾಗಾಗಿ ನಾನು ಮಂತ್ರಿ ಸ್ಥಾನ ಕೇಳುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸುತ್ತೂರು ಶ್ರೀಗಳ ಭೇಟಿಗೂ ಮುನ್ನ ಮಂಡಕಳ್ಳಿ ವಿಮಾನ‌ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ರಮೇಶ ಜಾರಕಿಹೊಳಿ ಪ್ರತಿಕ್ರಿಯೆ

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈ‌ನಲ್ಲಿ ತೀರ್ಮಾನ ಆಗಲಿದೆ. ಸದ್ಯಕ್ಕೆ ಇಲ್ಲಿ ಬಂದಿರುವುದು ಸ್ವಾಮೀಜಿಯನ್ನ ಭೇಟಿ ಮಾಡುವುದಕ್ಕೆ ಎಂದರು‌. ಸಿಎಂ ಬಂದು ಭೇಟಿ ಮಾಡಿ ಎಂದಿರುವುದು ನನಗೆ ಗೊತ್ತಿಲ್ಲ. ಮುಂಬೈಗೆ ಹೋಗಿರುವುದು ರಾಜಕೀಯ ಇರಬಹುದು.

ಸುತ್ತೂರು ಶ್ರೀಗಳ ತಾಯಿಯವರು ದೈವಾಧೀನರಾದ ಕಾರಣ ಇಲ್ಲಿಗೆ ಬಂದಿದ್ದೇನೆ. ಮಂತ್ರಿ ಸ್ಥಾನಗೋಸ್ಕರ ನಾನು ಸ್ವಾಮೀಜಿಯನ್ನ ಭೇಟಿ ಮಾಡುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಸಹೋದರನ ಜೊತೆ ಸುತ್ತೂರು ಮಠಕ್ಕೆ ತೆರಳಿದ ಮಾಜಿ ಸಚಿವ ರಮೇಶ ಜಾರಕಿಹೊಳಿ‌

ABOUT THE AUTHOR

...view details