ಕರ್ನಾಟಕ

karnataka

ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾ ಏರಿ ಬಂದ ಸಚಿವ ಸೋಮಶೇಖರ್

By

Published : Oct 14, 2021, 9:03 AM IST

Minister Somshekar arrived in Tonga for Cultural program at Mysuru
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾ ಏರಿ ಬಂದ ಸಚಿವ ಸೋಮಶೇಖರ್ ()

ಇಂದು ಮತ್ತು ನಾಳೆ ಮೈಸೂರು ದಸರಾ ಉತ್ಸವದಲ್ಲಿ ಕಂಗೊಳಿಸಲಿದೆ. ಪಾರಂಪರಿಕ ನಗರಿ ರಾತ್ರಿ ವೇಳೆಯ ಆಕರ್ಷಕ ದೀಪಾಲಂಕಾರದಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಳಿಸುತ್ತಿವೆ.

ಮೈಸೂರು:ಸಾಂಸ್ಕೃತಿಕ ನಗರದಲ್ಲಿ ದಸರಾ ಉತ್ಸವ ಕಳೆಗಟ್ಟಿದೆ. ವಿದ್ಯುತ್ ದೀಪಾಲಂಕಾರದಿಂದ ಇಡೀ ನಗರ ಝಗಮಗಿಸುತ್ತಿದೆ. ನಿನ್ನೆ ರಾತ್ರಿ ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್​ ಟಾಂಗಾದಲ್ಲಿ ನಗರ ಪ್ರದಕ್ಷಿಣೆ ಹಾಕಿ ನಗರ ಸೌಂದರ್ಯ ಕಣ್ತುಂಬಿಕೊಂಡರು.

ಇಲ್ಲಿನ ಸರ್ಕಾರಿ ಅಥಿತಿಗೃಹದಿಂದ ಟಾಂಗಾದಲ್ಲಿಯೇ ಆಗಮಿಸಿದ ಸಚಿವರು, ನಗರದಲ್ಲಿ ಹಾಕಲಾಗಿದ್ದ ದೀಪಾಲಂಕಾರ ವೀಕ್ಷಿಸಿದ್ದಾರೆ.

ಮೈಸೂರಿಗೆ ಆಗಮಿಸುವ ಪ್ರವಾಸಿಗರು ತಮ್ಮ ಅಚ್ಚುಮೆಚ್ಚಿನ ಟಾಂಗಾ ಸವಾರಿ ಮಾಡಿ ಸಂತಸಪಡುತ್ತಾರೆ. ಅದರಂತೆ ನಿನ್ನೆಯ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಸಚಿವರು ಟಾಂಗಾದಲ್ಲಿಯೇ ಬಂದು ಗಮನ ಸೆಳೆದರು.

ಇದನ್ನೂ ಓದಿ:ಮೈಸೂರು ಅರಮನೆಯಲ್ಲಿಂದು ಆಯುಧಪೂಜೆ ಸಂಭ್ರಮ, ನಾಳೆ ಜಗತ್ಪ್ರಸಿದ್ಧ ಜಂಬೂಸವಾರಿ

ABOUT THE AUTHOR

...view details