ಕರ್ನಾಟಕ

karnataka

ಸಿನಿಮಾ, ಸೀರಿಯಲ್​ನಲ್ಲಿ ಅವಕಾಶ ಕೊಡಿಸುವುದಾಗಿ ಮಹಿಳೆಯರಿಗೆ ವಂಚನೆ: ದೂರು ದಾಖಲು

By

Published : Oct 9, 2020, 8:22 PM IST

ವ್ಯಕ್ತಿಯೊಬ್ಬ ಸಿನಿಮಾ ಮತ್ತು ಸೀರಿಯಲ್​ನಲ್ಲಿ ಅವಕಾಶ ಕೊಡಿಸುವುದಾಗಿ 50ಕ್ಕೂ ಹೆಚ್ಚು ಮಹಿಳೆಯರನ್ನು ನಂಬಿಸಿ ಅವರಿಗೆ ಮೋಸ ಮಾಡಿದ್ದು, ಆತನ ವಿರುದ್ಧ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Girish
ಗಿರೀಶ್

ಮೈಸೂರು: ವ್ಯಕ್ತಿಯೊಬ್ಬ ಸಿನಿಮಾ ಮತ್ತು ಸೀರಿಯಲ್​ನಲ್ಲಿ ಅವಕಾಶ ಕೊಡಿಸುವುದಾಗಿ 50ಕ್ಕೂ ಹೆಚ್ಚು ಮಹಿಳೆಯರನ್ನು ನಂಬಿಸಿ, ಅವರಿಂದ ಹಣ ಪಡೆದುಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ಎಂಬಾತನೆ ವಂಚನೆ ಮಾಡಿದ್ದು, ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿಯಾಗಿದ್ದು, ಸಿನಿಮಾ ಮತ್ತು ಸೀರಿಯಲ್​ನಲ್ಲಿ ಮಿಂಚಬೇಕು ಎಂಬ ಆಸೆಯಿಂದ ಈತನ ಬಳಿಗೆ ಬಂದ ಬರೋಬ್ಬರಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಮೋಸ ಮಾಡಿದ್ದಾನೆ.

ಗಿರೀಶ್ ಮಹಿಳೆಯರನ್ನು ನಂಬಿಸಲು ಮಹಿಳೆಯರಿಂದ ಹಣ ಪಡೆಯುವಾಗ ತಾನೇ ವಿಡಿಯೋ ಮಾಡುತ್ತಿದ್ದ. ಆ ಮೂಲಕ ಮಹಿಳೆಯರ ನಂಬಿಕೆಯನ್ನು ಗಳಿಸುತ್ತಿದ್ದ, ಈತ ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಂಚನೆಗೆ ಒಳಗಾದ ಕೆಲ ಮಹಿಳೆಯರು ಆರೋಪಿಸಿದ್ದಾರೆ.

ವಂಚನೆ ಹೇಗೆ ?:ಮೊದಲು ಸಿನಿಮಾ, ಸೀರಿಯಲ್​ಗೆ ಕಲಾವಿದರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುತ್ತಿದ್ದ. ಆ ಜಾಹೀರಾತು ನೋಡಿ ಈತನನ್ನು ಭೇಟಿ ಮಾಡಿದವರಿಗೆ ತಾನೇ ಕಥೆ ಹೇಳಿ ಯಾಮಾರಿಸಿದ್ದು, ಕೆಲವರಿಗೆ ತಾನು ಪೊಲೀಸ್ ಎಂದು ಕೂಡ ಸುಳ್ಳು ಹೇಳಿದ್ದಾನೆ.

ವಂಚಕನ ಕಟ್ಟುಕತೆಯನ್ನು ನಂಬಿದ ಹಲವರು ಬಳಿಕ ಈತ ಮೋಸಗಾರ ಎಂದು ತಿಳಿದು ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯಕ್ಕೆ ಆರೋಪಿ ಗಿರೀಶ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಗಿರೀಶ್‌ನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details