ಕರ್ನಾಟಕ

karnataka

ಮೈಸೂರಿನ ಆರ್​ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ ವಿಡಿಯೋ

By

Published : Sep 8, 2022, 3:03 PM IST

Updated : Sep 8, 2022, 6:42 PM IST

ಮೈಸೂರು ನಗರದ ಹೊರವಲಯದ ಮೆಟಗಳ್ಳಿ ಬಳಿಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಆವರಣದಲ್ಲಿ ರಾತ್ರಿ ವೇಳೆ ಚಿರತೆಯೊಂದು ಕಳೆದ 15 ದಿನಗಳಿಂದ ತನ್ನ 2 ಮರಿಗಳೊಂದಿಗೆ ಓಡಾಟ ನಡೆಸುತ್ತಿದ್ದು, ಈ ದೃಶ್ಯ ಆವರಣದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈಸೂರಿನ ಆರ್​ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ
ಮೈಸೂರಿನ ಆರ್​ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಮೈಸೂರು: ನಗರದ ಹೊರವಲಯದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆವರಣದಲ್ಲಿ ಕಳೆದ 15 ದಿನಗಳಿಂದ ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ಓಡಾಡುತ್ತಿದ್ದು, ನಿವಾಸಿಗರಲ್ಲಿ ಆತಂಕ ಮೂಡಿಸಿದೆ. ಇದರಿಂದ ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ.

ನಗರದ ಹೊರವಲಯದ ಮೆಟಗಳ್ಳಿ ಬಳಿಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಆವರಣದಲ್ಲಿ ರಾತ್ರಿ ವೇಳೆ ಚಿರತೆಯೊಂದು ಕಳೆದ 15 ದಿನಗಳಿಂದ ತನ್ನ 2 ಮರಿಗಳೊಂದಿಗೆ ಓಡಾಟ ನಡೆಸುತ್ತಿದ್ದು, ಈ ದೃಶ್ಯ ಆವರಣದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಆರ್​ಬಿಐ ಸಿಬ್ಬಂದಿ ಹಾಗೂ ವಸತಿ ಗೃಹದಲ್ಲಿರುವ ಕುಟುಂಬಸ್ಥರು ಭಯಗೊಂಡಿದ್ದಾರೆ. ಇದರ ಜೊತೆಗೆ ಆರ್​ಬಿಐ ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಸೆಪ್ಟೆಂಬರ್ 1 ರಿಂದ ರಜೆ ಘೋಷಿಸಲಾಗಿದೆ.

ಮೈಸೂರಿನ ಆರ್​ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಚಿರತೆ ಸೆರೆಗೆ 3 ಬೋನ್: ಆರ್​ಬಿಐ ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯದ ಶಾಲಾ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಇಲಾಖೆ ಸಿಬ್ಬಂದಿ ಚಿರತೆ ಓಡಾಟ ನಡೆಸುತ್ತಿರುವ ಪ್ರದೇಶಗಳಲ್ಲಿ ಅದರ ಸೆರೆಗಾಗಿ 3 ಬೋನ್​ಗಳನ್ನು ಇಟ್ಟಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ರಾತ್ರಿ ವೇಳೆ ತನ್ನ ಎರಡು ಮರಿಗಳೊಂದಿಗೆ ಓಡಾಟ ನಡೆಸುತ್ತಿರುವ ಚಿರತೆಯ ಬಗ್ಗೆ ಕಳೆದ ಒಂದು ವಾರಗಳಿಂದ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲನೆ ನಡೆಸಿದ್ದು, ಜೊತೆಗೆ ಆವರಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಚಿರತೆ ಸೆರೆಗಾಗಿ ಮೂರು ಕಡೆ ಬೋನ್ ಇಡಲಾಗಿದೆ. ಆದರೂ ಚಿರತೆಯ ಸುಳಿವು ಇಲ್ಲ. ಮತ್ತೆ ಒಂದೆರಡು ದಿನಗಳ ನಂತರ ಓಡಾಟ ಆರಂಭಿಸಿದ್ದು, ರಾತ್ರಿ ವೇಳೆಯಲ್ಲಿ ಓಡಾಟ ನಡೆಸುತ್ತಿದೆ. ಈ ಚಿರತೆಯನ್ನು ಶೀಘ್ರವಾಗಿ ಸೆರೆಹಿಡಿಯಲು ಅರಣ್ಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಚಿರತೆ ಓಡಾಟ ನಡೆಸಿದರೆ, ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗುವುದು ಎಂದು ಡಿಸಿಎಫ್ ಕಮಲಾ ಕರಿಕಾಳನ್ ಮಾಹಿತಿ ನೀಡಿದ್ದಾರೆ.

ಓದಿ:ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಬೆಳ್ಳಂದೂರು ಪರಿಸ್ಥಿತಿ ವೀಕ್ಷಣೆ

Last Updated : Sep 8, 2022, 6:42 PM IST

ABOUT THE AUTHOR

...view details