ಕರ್ನಾಟಕ

karnataka

ದಸರಾ ದಿನಗಳಲ್ಲಿ ಮೈಸೂರು ಅರಮನೆ, ಮೃಗಾಲಯಕ್ಕೆ ಲಕ್ಷಾಂತರ ಪ್ರವಾಸಿಗರ ಭೇಟಿ, ಆದಾಯ ಹೆಚ್ಚಳ

By ETV Bharat Karnataka Team

Published : Oct 26, 2023, 3:25 PM IST

Updated : Oct 26, 2023, 3:45 PM IST

ಲೋಕಪ್ರಸಿದ್ಧಿ ಪಡೆದ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದ ಜನರು ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದರಿಂದ ಅರಮನೆ ಹಾಗೂ ಮೃಗಾಲಯದ ಆದಾಯದಲ್ಲಿ ಏರಿಕೆಯಾಗಿದೆ.

ಮೈಸೂರು
ಮೈಸೂರು

ಮೈಸೂರು: ದಸರಾ ಮಹೋತ್ಸವ ಹಾಗೂ ಜಂಬೂಸವಾರಿ ಮೆರವಣಿಗೆ ನೋಡಲು ಮೈಸೂರಿಗೆ ಆಗಮಿಸಿದ ಪ್ರವಾಸಿಗರು, ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದು, ಅರಮನೆ ಹಾಗೂ ಮೃಗಾಲಯದ ಆದಾಯದಲ್ಲಿ ಏರಿಕೆ ಕಂಡಿದೆ. ಅರಮನೆಗೆ ಅಕ್ಬೋಬರ್ 9 ರಿಂದ ಅ. 23ರವರೆಗೆ ಒಟ್ಟು 15 ದಿನಗಳಲ್ಲಿ 1,67,065 ಜನರು ಭೇಟಿ ಕೊಟ್ಟಿದ್ದಾರೆ.

ಅ.9 ರಿಂದ ಅ.23ರವರೆಗೆ ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೀಗಿದೆ. ಅ.9ರಂದು 5,229 ಮಂದಿ (ಮಧ್ಯಾಹ್ನ 2ರಿಂದ ಸಂಜೆ 5.30ರವರಗೆ), ಅ.10 ರಂದು 6,714, ಅ.11ರಂದು 5,960, ಅ.12ರಂದು 7,675, ಅ.13 ರಂದು 9,253, ಅ.14ರಂದು 15,485, ಅ.15ರಂದು 12,513 (ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ), ಅ.16ರಂದು 9,958, ಅ.17ರಂದು 10,376, ಅ.18ರಂದು 10,622, ಅ.19ರಂದು 10,699, ಅ.20ರಂದು 12,345, ಅ.21ರಂದು 17,863, ಅ.22ರಂದು 21,560, ಅ.23ರಂದು 10,813 (ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ) ಸೇರಿದಂತೆ ಒಟ್ಟಾರೆ 1,67,065 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ:ಮೈಸೂರುಮೃಗಾಲಯಕ್ಕೂ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ದಸರಾ ಮಹೋತ್ಸವ ಉದ್ಘಾಟನೆಯ ಅ.15ರಿಂದ 24ರವರೆಗೆ 1,65,003 ಮಂದಿ ಬಂದು ಹೋಗಿದ್ದಾರೆ. ಅ.15ರಿಂದ 24ರವರೆಗೆ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಇಂತಿದೆ.

ಅ.15ರಂದು 16,600, ಅ.16ರಂದು 10,145, ಅ.17ರಂದು 8,599, ಅ.18ರಂದು 10,603, ಅ.19ರಂದು 11,098, ಅ.20ರಂದು 11,280, ಅ.21ರಂದು 16,875, ಅ.22ರಂದು 25,180, ಅ.23ರಂದು 28,287, ಅ.24ರಂದು 23,890 ಅಲ್ಲದೇ, 2,426 ಇತರೆ ಪ್ರವಾಸಿಗರು ಸೇರಿದಂತೆ ಒಟ್ಟಾರೆ 1,65,003 ಮಂದಿ ಆಗಮಿಸಿದ್ದಾರೆ.

2020ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ 10 ದಿನಗಳಲ್ಲಿ 20,217 ಮಂದಿ ಮಾತ್ರ ಭೇಟಿ ಕೊಟ್ಟಿದ್ದರು. 2021ರಲ್ಲಿ 75,251 ಪ್ರವಾಸಿಗರು, 2022ರಲ್ಲಿ 8,164 ಇತರೆ ಪ್ರವಾಸಿಗರು ಸೇರಿ 1,55,588 ಮಂದಿ ಭೇಟಿ ನೀಡಿದ್ದಾರೆ.

ಚಾಮುಂಡೇಶ್ವರಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀನಂಜುಂಡೇಶ್ವರ ದೇವಾಲಯ ಸೇರಿದಂತೆ ಮೈಸೂರಿನ ಹಲವು ದೇವಾಲಯಗಳು ಹಾಗೂ ಪ್ರವಾಸಿತಾಣಗಳಿಗೆ ಪ್ರವಾಸಿಗರು ಆಗಮಿಸಿದ್ದು, ಆದಾಯ ಹೆಚ್ಚಳವಾಗಿದೆ.

ವಾರ್ಷಿಕ ರಥೋತ್ಸವ: ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವಾರ್ಷಿಕ ರಥೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಇಂದು ರಾಜವಂಶಸ್ಥರಾದ ಯದುವೀರ ಒಡೆಯರ್ ಚಾಲನೆ ನೀಡಿದರು. ಬೆಳಿಗ್ಗೆಯಿಂದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಬೆ. 7.50 ರಿಂದ 8.10ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಯದುವೀರ್ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು.

ನವರಾತ್ರಿ ನಂತರದ ಹಾಗೂ ವಿಜಯದಶಮಿ ಜಂಬೂಸವಾರಿಯ ಶುಭ ಮುಹೂರ್ತದಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಯ ರಥೋತ್ಸವ ಇದಾಗಿದೆ. ರಥೋತ್ಸವಕ್ಕೂ ಮುನ್ನ ಬೆಟ್ಟದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ನಂತರ ರಥೋತ್ಸವ ನಡೆಯಿತು. ರಥ ಚಾಮುಂಡಿ ಬೆಟ್ಟದ ಸುತ್ತಲೂ ಒಂದು ಸುತ್ತು ಸುತ್ತುವ ವೇಳೆ 21 ಸುತ್ತು ಸಿಡಿ ಮದ್ದು ಸಿಡಿಸಿ ಗೌರವ ಸಲ್ಲಿಸಲಾಯಿತು. ಇದಾದ ಬಳಿಕ ರಥಕ್ಕೆ ಭಕ್ತರು ಹಣ್ಣು ಜವನ ಎಸೆದು ಚಾಮುಂಡೇಶ್ವರಿ ತಾಯಿಗೆ ಜೈಕಾರ ಹಾಕಿ ರಥ ಎಳೆದು ಪುನೀತರಾದರು. ಬಳಿಕ ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು.

ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವಕ್ಕೆ ಚಾಲನೆ ನೀಡಿದ ರಾಜ ವಂಶಸ್ಥರು

Last Updated : Oct 26, 2023, 3:45 PM IST

ABOUT THE AUTHOR

...view details