ಮೈಸೂರು:ಕೇರಳದ ವಯನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯ ತುಂಬಿದೆ. ಆರು ಗೇಟ್ಗಳಿಂದ ಧುಮ್ಮಿಕ್ಕುವ ನೀರಿನ ನಿನಾದ ಹಾಗೂ ದೂರ ದೂರಕ್ಕೂ ಕಾಣುವ ಕಬಿನಿ ವಿಹಂಗಮ ನೋಟವನ್ನು ಡ್ರೋನ್ನಲ್ಲಿ ಸೆರೆ ಹಿಡಿಯಲಾಗಿದೆ.
ಕಬಿನಿ ಜಲಾಶಯದ ವಿಹಂಗಮ ನೋಟ ಡ್ರೋನ್ನಲ್ಲಿ ಸೆರೆ: ವಿಡಿಯೋ ನೋಡಿ
ಕಬಿನಿ ಜಲಾಶಯದ ವಿಹಂಗಮ ನೋಟವನ್ನು ಡ್ರೋನ್ನಲ್ಲಿ ಸೆರೆ ಹಿಡಿಯಲಾಗಿದೆ.
ಕಬಿನಿ ಜಲಾಶಯ
ಕಬಿನಿ ರಾಜ್ಯದ ಜಲಾಶಯಗಳಲ್ಲಿಯೇ ಬೇಗ ನೀರು ತುಂಬುವ ಜಲಾಶಯವೆಂಬ ಖ್ಯಾತಿ ಪಡೆದಿದೆ. 2284 ಅಡಿ ಉದ್ದ ಹಾಗೂ 19.59 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಹೆಚ್.ಡಿ.ಕೋಟೆ ತಾಲೂಕಿನಲ್ಲಿ ತಾರಕ , ನುಗು ಹಾಗು ಕಬಿನಿ ಮೂರು ಜಲಾಶಯಗಳಿವೆ. ಆದರೆ ಈ ಮೂರು ಜಲಾಶಯಗಳ ಪೈಕಿ ಕಬಿನಿ ಜಲಾಶಯ ಬೇಗ ತುಂಬಿಕೊಳ್ಳುತ್ತದೆ. ಇದರಿಂದ ಪ್ರವಾಹದ ಭೀತಿ ಎದುರಾಗಲಿದೆ.
ಕಬಿನಿ ಜಲಾಶಯದಲ್ಲಿ ಗುರುವಾರ 2281 ಅಡಿ ಹಾಗೂ 17.83 ಟಿಎಂಸಿ ನೀರಿದೆ. 19697 ಕ್ಯೂಸೆಕ್ ಒಳ ಹರಿವು ನೀರು ಹರಿದು ಬಂದಿದೆ. 15800 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.