ಕರ್ನಾಟಕ

karnataka

ಮೈಸೂರಿನ ಇಬ್ಬರಿಗೆ ಯುಪಿಎಸ್​​ಸಿ ಪರೀಕ್ಷೆಯಲ್ಲಿ ರ‍್ಯಾಂಕ್​

By

Published : Aug 4, 2020, 11:28 PM IST

ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೈಸೂರಿನವರಾದ ಪ್ರಜ್ವಲ್ ಮತ್ತು ವರುಣ್ ಕೆ.ಗೌಡ ಎನ್ನುವರು ರ‍್ಯಾಂಕ್​ಪಡೆದಿದ್ದಾರೆ.

ಮೈಸೂರಿನ ಇಬ್ಬರಿಗೆ ಯುಪಿಎಸ್​​ಸಿ ಪರೀಕ್ಷೆಯಲ್ಲಿ ರ‍್ಯಾಂಕ್​
ಮೈಸೂರಿನ ಇಬ್ಬರಿಗೆ ಯುಪಿಎಸ್​​ಸಿ ಪರೀಕ್ಷೆಯಲ್ಲಿ ರ‍್ಯಾಂಕ್​

ಮೈಸೂರು: ಯುಪಿಎಸ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಇಬ್ಬರು ರ‍್ಯಾಂಕ್​ ಪಡೆದಿದ್ದಾರೆ. ಪ್ರಜ್ವಲ್ ಎಂಬುವರು 636ನೇ ರ‍್ಯಾಂಕ್​ ಪಡೆದರೆ, ವರುಣ್ ಕೆ.ಗೌಡ ಅವರು 528ನೇ ರ‍್ಯಾಂಕ್​ಪಡೆದಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೈಸೂರಿನ ಪ್ರಜ್ವಲ್ 4 ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಇವರು ಮೆಕಾನಿಕ್ ಇಂಜಿನಿಯರ್ ವ್ಯಾಸಂಗ ಮಾಡಿದ್ದು, ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವರುಣ್ ಕೆ.ಗೌಡ ಇವರು ತಿ.ನರಸೀಪುರ ತಾಲೂಕಿನವರಾಗಿದ್ದಾರೆ. ಇವರು ಪರೀಕ್ಷೆಯನ್ನು ಪಾಸ್ ಮಾಡಲೆಂದೇ ಸತತ ಪರಿಶ್ರಮದಿಂದ ವ್ಯಾಸಂಗ ಮಾಡುತ್ತಿದ್ದರು.

ABOUT THE AUTHOR

...view details