ಕರ್ನಾಟಕ

karnataka

ಮೈಸೂರು: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಹಣ ಹಿಂದಿರುಗಿಸಿದ ಶುಶ್ರೂಷಕ

By

Published : Nov 13, 2022, 3:21 PM IST

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಹಣವನ್ನು ಪೊಲೀಸರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

honesty-of-nurse-by-returning-money-in-mysore
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಹಣ ಹಿಂದಿರುಗಿಸಿದ ಶುಶ್ರೂಷಕ

ಮೈಸೂರು: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ವ್ಯಕ್ತಿ ಬಳಿಯಿದ್ದ ಹಣವನ್ನು ಪೊಲೀಸರಿಗೆ ಹಿಂದಿರುಗಿಸುವ ಮೂಲಕ ಶುಶ್ರೂಷಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.

ಇಲ್ಲಿನ ಹೆಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆಯ ಶಾದಿ ಮಹಲ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಶಿರಾ ಮೂಲದ ಕುಮಾರ ಎಂಬವರು (40) ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದ ಗಾಯಾಳು ಕುಮಾರ ಅವರನ್ನು ಸಾರ್ವಜನಿಕರು ಎಚ್‌.ಡಿ.ಕೋಟೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ವೇಳೆ ಆಸ್ಪತ್ರೆಯ ಶುಶ್ರೂಷಕ ಪ್ರಶಾಂತ್​ ಎಂಬವರು ಗಾಯಾಳು ಬಳಿಯಿದ್ದ 1.37ಲಕ್ಷ ನಗದನ್ನು ಪೊಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇದನ್ನೂ ಓದಿ :ಯುವತಿಯ ಮೊಬೈಲ್​ ದರೋಡೆ: ಕಳ್ಳನನ್ನು ಬೆನ್ನಟ್ಟಿ ಡೆಲಿವರಿ ಬಾಯ್ ಸಾಹಸ.. ಆರೋಪಿ ಅಂದರ್​

ABOUT THE AUTHOR

...view details