ಕರ್ನಾಟಕ

karnataka

ರೈಸ್ ಪುಲ್ಲಿಂಗ್ ದಂಧೆ: ಮೈಸೂರಿನಲ್ಲಿ ನಾಲ್ವರ ಬಂಧನ

By

Published : Sep 30, 2020, 11:11 AM IST

ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಐಶ್ವರ್ಯ, ಸಂಪತ್ತು ವೃದ್ಧಿಸುತ್ತದೆ ಎಂದು ಸಾರ್ವಜನಿಕರಿಗೆ ಮಂಕುಬೂದಿ ಎರಚುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Arrest
Arrest

ಮೈಸೂರು: ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಎಂ.ಜಿ. ಚಂದ್ರಮೋಹನ್ (57), ಕೇರಳ ಮೂಲದ ಟಿ.ವಿ ಇಬ್ರಾಹಿಂ (50), ಬೆಂಗಳೂರು ನಗರದ ಗಿರಿನಾಥನ್ (49) ಹಾಗೂ ಗೋಪಿ (40) ಬಂಧಿತ ಆರೋಪಿಗಳು. ಇವರು ನಗರದ ಜನನಿಬಿಡ ಪ್ರದೇಶದ ಲಾಡ್ಜ್​ವೊಂದರಲ್ಲಿ ರೂಮ್​ ಮಾಡಿಕೊಂಡು ನಕಲಿ ರೈಸ್ ಪುಲ್ಲಿಂಗ್ ಸಾಮಗ್ರಿಗಳನ್ನು ತೋರಿಸಿ ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಐಶ್ವರ್ಯ, ಸಂಪತ್ತು ವೃದ್ಧಿಸುತ್ತದೆ ಎಂದು ಮೊಬೈಲ್​ನಲ್ಲಿ ವಿಡಿಯೋಗಳನ್ನು ತೋರಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದರು ಎನ್ನಲಾಗ್ತಿದೆ.

ಇನ್ನು ಬಂಧಿತರಿಂದ ರೈಸ್ ಪುಲ್ಲಿಂಗ್ ನಕಲಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details