ಕರ್ನಾಟಕ

karnataka

Video: ಗ್ರಾಮಸ್ಥರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ

By

Published : Aug 17, 2021, 10:00 PM IST

Updated : Aug 17, 2021, 10:21 PM IST

ಸಭೆಯಲ್ಲಿ ಗದ್ಗದಿತರಾಗಿ ಮಾತನಾಡಿದ ರುಕ್ಮಿಣಿ ಮಾದೇಗೌಡ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನನಗೆ ಅನ್ಯಾಯ ಮಾಡಿದವರನ್ನು ದೇವರು ನೋಡಿಕೊಳ್ಳಲಿ ಎಂದು ಕಣ್ಣೀರು ಹಾಕಿದ್ದಾರೆ.

ಗ್ರಾಮಸ್ಥರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ
ಗ್ರಾಮಸ್ಥರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ

ಮೈಸೂರು: ದಸರಾದಲ್ಲಿ ಚಾಮುಂಡೇಶ್ವರಿ ತಾಯಿಗೆ ಒಂದು ಹೂ ಹಾಕುವ ಭಾಗ್ಯವನ್ನು ಮಹನೀಯರು ಕಿತ್ತುಕೊಂಡರು‌‌ ಎಂದು ಗ್ರಾಮಸ್ಥರ ಮುಂದೆ ಮಾಜಿ ಮೇಯರ್​ ರುಕ್ಮಿಣಿ ಮಾದೇಗೌಡ‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ವಾರ್ಡ್​ ನಂ‌ 36ಕ್ಕೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರವಾಗಿ ರುಕ್ಮಿಣಿ ಮಾದೇಗೌಡ ಹಾಗೂ ಯರಗನಹಳ್ಳಿ ಗ್ರಾಮಸ್ಥರು ಸಭೆ ಸೇರಿದ್ದರು. ಸಭೆಯಲ್ಲಿ ಗದ್ಗದಿತರಾಗಿ ಮಾತನಾಡಿದ ರುಕ್ಮಿಣಿ ಮಾದೇಗೌಡ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನನಗೆ ಅನ್ಯಾಯ ಮಾಡಿದವರನ್ನು ದೇವರು ನೋಡಿಕೊಳ್ಳಲಿ ಎಂದು ಕಣ್ಣೀರು ಹಾಕಿದರು.

ಗ್ರಾಮಸ್ಥರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ

ಫೆ‌.24ರಂದು ಮೇಯರ್ ಪಟ್ಟ ಅಲಂಕರಿಸಿದ್ದ ರುಕ್ಮಿಣಿ ಮಾದೇಗೌಡರಿಗೆ ಸುಳ್ಳು ಅಫಿಡವಿಟ್​​ ನೀಡಿದ್ದು, ಅವರ ಸದಸ್ಯತ್ವ ಸ್ಥಾನಕ್ಕೆ ತುತ್ತು ತಂದಿತ್ತು.

Last Updated : Aug 17, 2021, 10:21 PM IST

ABOUT THE AUTHOR

...view details