ಕರ್ನಾಟಕ

karnataka

ಕೇಕ್​ಗಳಲ್ಲೂ ಮುಂದುವರಿದ ಫಿಫಾ ವರ್ಲ್ಡ್​​ ಕಪ್​ ಉತ್ಸಾಹದ ಕೇಕೆ.. 560ಕೆಜಿ ಸಂಸತ್ ಕಟ್ಟಡ ನೋಡಲು ಮುಗಿಬಿದ್ದ ಜನ..

By

Published : Dec 22, 2022, 1:24 PM IST

Updated : Dec 22, 2022, 3:35 PM IST

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗೃಹಶೋಭೆ ಎಕ್ಸಿಬಿಷನ್‌ನಲ್ಲಿ ಡಾಲ್ಫಿನ್ ಬೇಕರ್ಸ್‌ನಿಂದ ತಯಾರಿಸಿದ ನೂತನ ಸಂಸತ್ ಕಟ್ಟಡ, ರಾಷ್ಟ್ರೀಯ ಲಾಂಛನ ಹಾಗೂ ಫಿಫಾ ವಿಶ್ವಕಪ್‌ನ ಕೇಕ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.

FIFA World Cup fame in cakes
ಕೇಕ್​ಗಳಲ್ಲೂ ಫಿಫಾ ವಲ್ಡ್೯ ಕಪ್​ ಹವಾ

ಕೇಕ್​ಗಳಲ್ಲಿ ಫಿಫಾ ವಲ್ಡ್೯ ಕಪ್​ ಹವಾ

ಮೈಸೂರು: ಫಿಫಾ ವರ್ಲ್ಡ್​ ಕಪ್ ಮುಗಿದಿದ್ದರೂ ಅದರ ನೆನಪು ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಅದರಂತೆ ಕೇಕ್​ಗಳಲ್ಲಿಯೂ ಈಗ ಫಿಫಾ ವಲ್ಡ್೯ ಕಪ್​ ಹವಾ ಮುಂದುವರಿದಿದೆ.

ಡಾಲ್ಫಿನ್ ಬೇಕರ್ಸ್‌:ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹಶೋಭೆಯಲ್ಲಿ ಡಾಲ್ಫಿನ್ ಬೇಕರ್ಸ್‌ನಿಂದ ತಯಾರಿಸಿದ ನೂತನ ಸಂಸತ್ ಕಟ್ಟಡ, ರಾಷ್ಟ್ರೀಯ ಲಾಂಛನ ಹಾಗೂ ಫಿಫಾ ವಿಶ್ವಕಪ್‌ನ ಕೇಕ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.

560 ಕೆ ಜಿ ಸಂಸತ್ ಕಟ್ಟಡ

ಎಕ್ಸಿಬಿಷನ್‌:ಗೃಹಶೋಭೆ ಎಕ್ಸಿಬಿಷನ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಪೇಂಟಿಂಗ್​ಗಳು ಕಾರ್ಪೆಟ್, ಅಡುಗೆ ಮನೆ ವಸ್ತುಗಳು ಮಾತ್ರವಲ್ಲದೇ ಕೇಕ್‌ನಿಂದ ತಯಾರಾಗಿರುವ ನೂತನ ಸಂಸತ್ ಕಟ್ಟಡ, ರಾಷ್ಟ್ರೀಯ ಲಾಂಛನ ಹಾಗೂ ಫಿಫಾ ವಿಶ್ವಕಪ್​ನ ಪ್ರತಿಕೃತಿಗಳೂ ಇವೆ.

ಸಂಸತ್ ಕಟ್ಟಡ:ಫಾಂಡೆಂಟ್ ಐಸ್ ಕ್ರೀಂ, ಥರ್ಮೋಕೋಲ್ ಹಾಗೂ ಕೃತಕ ಆಹಾರ ಬಣ್ಣಗಳನ್ನು ಬಳಸಿ ತಯಾರಿಸಿರುವ ನೂತನ ಸಂಸತ್ ಕಟ್ಟಡ (ಸೆಂಟ್ರಲ್ ವಿಸ್ತ) ನೋಡಲು ಎಲ್ಲರೂ ಮುಗಿಬೀಳುತ್ತಿದ್ದಾರೆ. ಆರು ಮಂದಿ 35 ದಿನ ಕಾಲ ಸಮಯ ತೆಗೆದುಕೊಂಡು ಈ ಕೇಕ್ ತಯಾರಿ ಮಾಡಿದ್ದಾರೆ. ಈ ಕೇಕ್ ಹನ್ನೆರಡು ಅಡಿ ಎತ್ತರ ಹಾಗೂ ನಾಲ್ಕು ಅಡಿ ಅಗಲ ಇದೆ ಇದ್ದು, 560 ಕೆ.ಜಿ. ತೂಕ ಇದೆ.

ರಾಷ್ಟ್ರ ಲಾಂಛನ: ಇನ್ನು ನಮ್ಮ ರಾಷ್ಟ್ರ ಲಾಂಛನ 500 ಕೆ.ಜಿ. ತೂಕ ಇದ್ದು, 6 ಅಡಿ ಎತ್ತರ, 10 ಅಡಿ ಅಗಲ ಇದೆ. ಇದನ್ನು ಹೊರತುಪಡಿಸಿ ಟೈಟಾನಿಕ್, ಸ್ಪೋಟ್ಸರ್ ಕಾರ್, ಫಿಾ ವಲ್ಡರ್ ಕಪ್ ಮತ್ತು ಜರ್ಸಿ, ಕಾಡು, ಮರದಿಂದ ಮಾಡಿದ ಮನೆ, ವೆಡ್ಡಿಂಗ್ ಕೇಕ್‌ಗಳು ಸಹ ಇವೆ.

ಕೇಕ್‌ಗಳಿಗೆ ಬೇಡಿಕೆ:ಫಿಫಾ ವಲ್ಡ್೯ ಕಪ್ ಆರಂಭವಾದಾಗಿನಿಂದ ಈ ಪರಿಕಲ್ಪನೆಯ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹಲವರು ಮೆಸ್ಸಿ ಹಾಗೂ ರೊನಾಲ್ಡೋ ಅವರ ರೀತಿಯ ಕೇಕ್‌ಗಳನ್ನು ಸಹ ಕೊಂಡಿದ್ದರು. ಆರ್ಡರ್ ಮಾಡಿದ ಮೂರ್ನಾಲ್ಕು ಗಂಟೆಗಳಲ್ಲಿ ಕೇಕ್ ತಯಾರಾಗಿರುತ್ತಿದೆ. ಈ ನಿಟ್ಟಿನಲ್ಲಿ ಹಲವು ಅನುಭವಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂಓದಿ:ಹಾವೇರಿ: ಮಿಂಚಿನಂತೆ ಓಡಿ ನೋಡುಗರನ್ನು ರೋಮಾಂಚನಗೊಳಿಸಿದ ಎತ್ತುಗಳು

Last Updated :Dec 22, 2022, 3:35 PM IST

ABOUT THE AUTHOR

...view details