ಕರ್ನಾಟಕ

karnataka

ಸಿದ್ದರಾಮಯ್ಯ ವಿರುದ್ಧ ಘೋಷಣೆ: 6 ಮಂದಿ ಕೈ ಕಾರ್ಯಕರ್ತರು ಅಮಾನತು

By

Published : Mar 6, 2021, 11:06 AM IST

ಫೆ.26ರಂದು ಎನ್.ಆರ್.ಕ್ಷೇತ್ರದಲ್ಲಿರುವ ತನ್ವೀರ್‌ ಸೇಠ್ ಮನೆ ಮುಂದೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಅಭಿಮಾನಿಗಳು ಜೊತೆಗೂಡಿ ಕೆಲ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಈ ಹಿನ್ನೆಲೆ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಸದಸ್ಯತ್ವವನ್ನು ಅಮಾನತು ಮಾಡಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಆದೇಶ ಹೊರಡಿಸಿದ್ದಾರೆ.

Mysore
6 ಮಂದಿ ಕೈ ಕಾರ್ಯಕರ್ತರು ಅಮಾನತು

ಮೈಸೂರು:ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮೈತ್ರಿ ವಿಚಾರವಾಗಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಸದಸ್ಯತ್ವವನ್ನು ಅಮಾನತು ಮಾಡಲಾಗಿದೆ.

ಶಾಹಿದ್, ಎಂ.ಎನ್. ಲೋಕೇಶ್, ಅಬೀಬ್, ಅಣ್ಣು, ಅಣ್ಣು ಪುತ್ರ ಸೇರಿ ಮತ್ತೊಬ್ಬನನ್ನು ಮುಂದಿನ ಆದೇಶದವರೆಗೆ ಅಮಾನತು ಮಾಡಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಆದೇಶ ಹೊರಡಿಸಿದ್ದಾರೆ.

ಫೆ.26ರಂದು ಎನ್.ಆರ್.ಕ್ಷೇತ್ರದಲ್ಲಿರುವ ತನ್ವೀರ್‌ ಸೇಠ್ ಮನೆ ಮುಂದೆ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಅಭಿಮಾನಿಗಳು ಜೊತೆಗೂಡಿ ಕೆಲ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಕಾಂಗ್ರೆಸ್‌ನಿಂದ ಎನ್.ಆರ್.ಕ್ಷೇತ್ರದಲ್ಲಿ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಮಾನತು ಮಾಡಲಾಗಿದೆ. ಇದರಿಂದ ಕಾರ್ಯಕರ್ತರು ಮತ್ತಷ್ಟು ಅಸಮಾಧಾನಗೊಂಡಿದ್ದಾರೆ.

ಓದಿ:ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದು ಸರಿಯಲ್ಲ; ಡಾ.ಹೆಚ್.ಸಿ. ಮಹದೇವಪ್ಪ

ABOUT THE AUTHOR

...view details