ಕರ್ನಾಟಕ

karnataka

ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮೆಲುಗೈ: ಭದ್ರಕೋಟೆ ಕಳೆದುಕೊಂಡ ಜೆಡಿಎಸ್, ಇದ್ದ ಸ್ಥಾನವನ್ನೂ ನಷ್ಟ ಮಾಡಿಕೊಂಡ ಬಿಜೆಪಿ

By

Published : May 13, 2023, 7:56 PM IST

ಜೆಡಿಎಸ್​ ಮತ್ತು ಬಿಜೆಪಿ ತಮ್ಮ ಸ್ಥಿರ ಸ್ಥಾನಗಳನ್ನು ರಾಜ್ಯಾದ್ಯಂತ ಕಳೆದುಕೊಂಡಿದ್ದರೆ, ಕಾಂಗ್ರೆಸ್​ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಜೊತೆಗೆ ಜೆಡಿಎಸ್​ ತನ್ನ ಭದ್ರಕೋಟೆ ಎಂದೇ ಹೇಳಿಕೊಳ್ಳುತ್ತಿದ್ದ ಮೈಸೂರನ್ನು ಕಳೆದುಕೊಂಡಿದೆ.

congress-is-dominant-in-mysore-district
ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮೆಲುಗೈ: ಭದ್ರಕೋಟೆ ಕಳೆದುಕೊಂಡ ಜೆಡಿಎಸ್, ಇದ್ದ ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ

ಮೈಸೂರು:ಜೆಡಿಎಸ್​ ಮತ್ತು ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಳ್ಳುತ್ತಿದ್ದ ಮೈಸೂರು ಜಿಲ್ಲೆ ಈ ಬಾರಿ ಕಾಂಗ್ರೆಸ್​ ಪಾಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಜೆಡಿಎಸ್ 3 ಸ್ಥಾನ ಕಳೆದುಕೊಂಡು ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಭೇರಿ ಬಾರಿಸಿ ಕಳಪೆ ಪ್ರದರ್ಶನ ತೋರಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೊಚ್ಚಿ ಹೋಗಿವೆ. ಈ ಅಲೆ ಮೈಸೂರು ಜಿಲ್ಲೆಗೂ ಅಪ್ಪಳಿಸಿದೆ. ಕಳೆದ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾಂಗ್ರೆಸ್, ಈ ಬಾರಿ 11 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಎರಡು ಹಾಗೂ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ.

ಗೆದ್ದವರು ಯಾರು :ಈ ಬಾರಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ವರುಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ, ಕೆ ಆರ್ ನಗರದಿಂದ ರವಿಶಂಕರ್, ಎಚ್ ಡಿ. ಕೋಟೆಯಿಂದ ಅನಿಲ್ ಚಿಕ್ಕಮಾದು, ನಂಜನಗೂಡಿನಿಂದ ದರ್ಶನ್ ಧೃವನಾರಾಯಣ್, ಟಿ.ನರಸೀಪುರದಿಂದ ಡಾ. ಎಚ್ ಸಿ. ಮಹಾದೇವಪ್ಪ, ಪಿರಿಯಾಪಟ್ಟಣದಿಂದ ಕೆ. ವೆಂಕಟೇಶ್, ನರಸಿಂಹರಾಜದಿಂದ ತನ್ವೀರ್ ಸೇಠ್, ಚಾಮರಾಜ ಕ್ಷೇತ್ರದಿಂದ ಹರೀಶ್ ಗೌಡ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.

ಇದರ ಜೊತೆಗೆ ಚಾಮುಂಡೇಶ್ವರಿಯಿಂದ ಜಿ. ಟಿ. ದೇವೇಗೌಡ ಜೆಡಿಎಸ್​ನಿಂದ ಪುನಃ ಆಯ್ಕೆಯಾಗಿದ್ದರೆ, ಹುಣಸೂರಿನಿಂದ ಅವರ ಮಗ ಜಿ ಡಿ ಹರೀಶ್ ಗೌಡ ಜೆಡಿಎಸ್​ನಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

ಕಳೆದುಕೊಂಡ ಕ್ಷೇತ್ರಗಳು ಯಾವುವು :ಕಾಂಗ್ರೆಸ್ ಕಳೆದ ಬಾರಿ ಹುಣಸೂರಿನಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಹುಣಸೂರನ್ನ ಕಳೆದುಕೊಂಡಿದೆ. ಬದಲಾಗಿ ಚಾಮರಾಜ, ಪಿರಿಯಾಪಟ್ಟಣ, ಟಿ. ನರಸೀಪುರ, ನಂಜನಗೂಡು ಹಾಗೂ ಕೆ ಆರ್ ನಗರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಜೆಡಿಎಸ್ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬದಲಾಗಿ ಕಳೆದ ಬಾರಿ ಗೆಲುವು ಸಾಧಿಸಿದ್ದ ಪಿರಿಯಾಪಟ್ಟಣ, ಟಿ ನರಸೀಪುರ ಹಾಗೂ ಕೆ ಆರ್ ನಗರ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದರ ಜೊತೆಗೆ ಬಿಜೆಪಿ ಶ್ರೀವತ್ಸ ಕೃಷ್ಣರಾಜ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಈ ಬಾರಿ ನಂಜನಗೂಡು ಹಾಗೂ ಮೈಸೂರು ನಗರದ ಚಾಮರಾಜ ಕ್ಷೇತ್ರವನ್ನು ಕಳೆದುಕೊಂಡಿದೆ.

ಇದನ್ನೂ ಓದಿ:ಖರ್ಗೆ ನಿವಾಸಕ್ಕೆ ಸುರ್ಜೆವಾಲ, ಡಿಕೆಶಿ ಭೇಟಿ: ಗೆಲುವಿನ ಸಿಹಿ ಹಂಚಿಕೊಂಡ ನಾಯಕರು

ABOUT THE AUTHOR

...view details