ಕರ್ನಾಟಕ

karnataka

ಹೆಂಡತಿ ಜೊತೆ ವಿವಾಹೇತರ ಸಂಬಂಧ ಶಂಕೆ : ಮೈಸೂರಲ್ಲಿ ವ್ಯಕ್ತಿಯ ಬರ್ಬರ ಕೊಲೆ

By

Published : Jun 5, 2022, 10:48 PM IST

ಶಿವಣ್ಣನ ಪತ್ನಿಯ ಜೊತೆ ಸಿದ್ದಶೆಟ್ಟಿ ಅಕ್ರಮ ಸಂಬಂಧ ಹೊಂದಿದ್ದನಂತೆ. ಈ ವಿಚಾರದಲ್ಲಿ ಇಬ್ಬರ ನಡುವೆ ಹಲವು ಬಾರಿ ಗಲಾಟೆ ಆಗಿತ್ತು. ಇಂದು ಇದೇ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಶಿವಣ್ಣ ತಾನು ತಂದಿದ್ದ ಮಚ್ಚಿನಿಂದ ಸಿದ್ದಶೆಟ್ಟಿ ಮೇಲೆ ಹಲ್ಲೆ ಮಾಡಿ ಕೊಂದುಹಾಕಿದ್ದಾನೆ.

ಹೆಂಡತಿ ಜೊತೆ ಅನೈತಿಕ ಸಂಬಂಧ ಶಂಕೆ : ವ್ಯಕ್ತಿಯ ಬರ್ಬರ ಹತ್ಯೆ
ಹೆಂಡತಿ ಜೊತೆ ಅನೈತಿಕ ಸಂಬಂಧ ಶಂಕೆ : ವ್ಯಕ್ತಿಯ ಬರ್ಬರ ಹತ್ಯೆ

ಮೈಸೂರು: ಹೆಂಡತಿ ಜೊತೆ ವಿವಾಹೇತರ ಸಂಬಂಧ ಇದೆ ಎಂಬ ಶಂಕೆ ಮೇರೆಗೆ ಸಂಬಂಧಿಯನ್ನೇ ಮಚ್ಚಿನಿಂದ ಕೊಂದು ಆರೋಪಿ ಪರಾರಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಶೆಟ್ಟಿ(47) ಕೊಲೆಗೀಡಾದ ವ್ಯಕ್ತಿ. ಶಿವಣ್ಣ(59) ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ.

ಶಿವಣ್ಣನ ಪತ್ನಿಯ ಜೊತೆ ಸಿದ್ದಶೆಟ್ಟಿ ಅಕ್ರಮ ಸಂಬಂಧ ಹೊಂದಿದ್ದನಂತೆ. ಈ ವಿಚಾರದಲ್ಲಿ ಇಬ್ಬರ ನಡುವೆ ಹಲವು ಬಾರಿ ಗಲಾಟೆ ಆಗಿತ್ತು. ಭಾನುವಾರ ಇದೇ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಶಿವಣ್ಣ ತಾನು ತಂದಿದ್ದ ಮಚ್ಚಿನಿಂದ ಸಿದ್ದಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾನೆ.

ಹೆಂಡತಿ ಜೊತೆ ವಿವಾಹೇತರ ಸಂಬಂಧ ಶಂಕೆ.. ವ್ಯಕ್ತಿಯ ಕೊಲೆ

ಹಲ್ಲೆಗೊಳಗಾದಸಿದ್ದ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ನಂತರ ಶಿವಣ್ಣ ನಾಪತ್ತೆಯಾಗಿದ್ದಾನೆ. ಈ ಸಂಬಂಧ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸೋನಿಯಾ ಗಾಂಧಿ ಬೆನ್ನಲ್ಲೇ ಪ್ರಿಯಾಂಕಾ ವಾದ್ರಾಗೂ ಕೋವಿಡ್​ ಪಾಸಿಟಿವ್​

ABOUT THE AUTHOR

...view details