ಕರ್ನಾಟಕ

karnataka

ಮೈಶುಗರ್ ಕಾರ್ಖಾನೆ ಖಾಸಗೀಕರಣ ಬೇಡ; ಶಾಸಕ ರವೀಂದ್ರ ಶ್ರೀಕಂಠಯ್ಯ

By

Published : Jan 21, 2021, 10:57 PM IST

ಮಂಡ್ಯ ಜಿಲ್ಲೆಯ ಮೈಶುಗರ್ ಕಾರ್ಖಾನೆ ಖಾಸಗೀಕರಣ ಮಾಡುವ ಪ್ರಯತ್ನದ ವಿರುದ್ದವಾಗಿದ್ದೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

dsd
ಮೈಶುಗರ್ ಕಾರ್ಖಾನೆ ಖಾಸಗೀಕರಣ ಬೇಡ ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ

ಮಂಡ್ಯ: ಸರ್ಕಾರದ ವತಿಯಿಂದಲೇ ಮೈಶುಗರ್ ಕಾರ್ಖಾನೆ ಪ್ರಾರಂಭವಾಗಬೇಕು, ಸಾರ್ವಜನಿಕರ ಹಿತಕ್ಕಾಗಿ ಸರ್ಕಾರ ನಿಗಾವಹಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಮೈಶುಗರ್ ಕಾರ್ಖಾನೆ ಖಾಸಗೀಕರಣ ಬೇಡ ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ

ಮೈಶುಗರ್ ಕಾರ್ಖಾನೆ ವಿಚಾರಕ್ಕೆ ಸಂಸದೆ ಸುಮಲತಾ ಅಂಬರೀಶ್ ವಿರುದ್ದ ರೈತರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಸದರು ಪಾರ್ಲಿಮೆಂಟ್ ಮೆಂಬರ್ ಇದ್ದಾರೆ. ಅವರ ಬಗ್ಗೆ ಮಾತನಾಡುವುದು ಬೇಡ‌‌. ಮೈಶುಗರ್ ಕಾರ್ಖಾನೆ ಪ್ರಾರಂಭಿಸಲು ಈ ರೀತಿಯ ವಿಳಂಬ ನೀತಿ ಸರ್ಕಾರಕ್ಕೆ ಒಳ್ಳೆಯದಲ್ಲ. ತಾವು ಎಲ್ಲದಕ್ಕೂ ಖಾಸಗೀಕರಣ ಮಾಡುವುದಾದರೆ ಸರ್ಕಾರ ಏಕೆ ಬೇಕು ಎಂದು ಪ್ರಶ್ನಿಸಿದರು.

ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಜನಪರವಿದ್ದು, ಇದರ ಬಗ್ಗೆ ಯೋಚಿಸಬೇಕು. ಕಾರ್ಖಾನೆಯನ್ನು ಸರ್ಕಾರದಲ್ಲಿ ಉಳಿಸಿಕೊಂಡು ಅಧಿಕಾರಿ ನೇಮಕ ಮಾಡಿ. ಮೈಶುಗರ್ ಕಾರ್ಖಾನೆ ಚೆನ್ನಾಗಿ ನಡೆಸಿ ನಮ್ಮ ರೈತರ ಪರ ಕೆಲಸ ಮಾಡಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ABOUT THE AUTHOR

...view details