ಕರ್ನಾಟಕ

karnataka

ಮಂಡ್ಯ ಸಾರಿಗೆ ಇಲಾಖೆ 41 ಸಿಬ್ಬಂದಿಗೆ ಕೊರೊನಾ.. ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

By

Published : Jan 19, 2022, 1:41 PM IST

ಸಾರಿಗೆ ಸಿಬ್ಬಂದಿಗೆ ಕೊರೊನಾ ತಾಕಿದ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಸಹಕರಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

transport-department
ಮಂಡ್ಯ ಸಾರಿಗೆ ಇಲಾಖೆ

ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ದಿನೇದಿನೇ ಕೊರೊನಾ ಆರ್ಭಟ ಜಾಸ್ತಿಯಾಗುತ್ತಿದೆ. ಕೆ.ಆರ್. ಪೇಟೆಯ ಕೆಎಸ್​ಆರ್​ಟಿಸಿಯ 41 ಸಿಬ್ಬಂದಿಗೆ ಮಹಾಮಾರಿ ವಕ್ಕರಿಸಿದೆ. ಕೆ.ಆರ್.ಪೇಟೆ ಡಿಪೋ ಮ್ಯಾನೇಜರ್, ಮೆಕ್ಯಾನಿಕ್, ಚಾಲಕ, ನಿರ್ವಾಹಕ ಸೇರಿ 41 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ.

ಇದು ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿರುವ 150 ಸಿಬ್ಬಂದಿಗೆ ಈಗ ಆತಂಕ ಶುರುವಾಗಿದ್ದು, ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತ ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಸಾರಿಗೆ ಸಿಬ್ಬಂದಿಗೆ ಕೊರೊನಾ ತಾಕಿದ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಸಹಕರಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇನ್ನು ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಡಿಟಿಒ ದಿನೇಶ್ ಕುಮಾರ್, ಸಾರ್ವಜನಿಕರ ಮಧ್ಯೆ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿಗೆ ಟೆಸ್ಟ್ ಮಾಡಿಸಲಾಗಿತ್ತು. ಕೆ.ಆರ್.ಪೇಟೆಯಲ್ಲಿ 42 ಸಿಬ್ಬಂದಿಗೆ ಪಾಸಿಟಿವ್ ಧೃಡ ಪಟ್ಟಿದೆ. ಪಾಸಿಟಿವ್ ಬಂದಿರುವವರು ಹೋಂ ಐಸೋಲೇಟ್​ ಮಾಡಲಾಗಿದೆ ಎಂದರು.

ಕಾರ್ಯ ನಿರ್ವಹಣೆಗೆ ತೊಂದರೆಯಾಗದ ರೀತಿ ಸಿಬ್ಬಂದಿ ನೇಮಕ ಮಾಡಲಾಗಿದೆ. ವಾರದ ರಜೆ ರದ್ದು ಮಾಡಿ ಬೇರೆ ಡಿಪೋಯಿಂದ ಸಪೋರ್ಟ್ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ, ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದ ರೀತಿ ಕರ್ತವ್ಯ ನಿರ್ವಹಿಸಲಾಗುವುದು. ಡಿಪೋ, ಬಸ್ ನಿಲ್ದಾಣ ಹಾಗೂ ಬಸ್​​ಗಳನ್ನು ಸ್ಯಾನಿಟೈಸ್​ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಕೋವಿಡ್​ನಿಂದ ಹೋಮ್​​ ಐಸೋಲೇಷನ್​ನಲ್ಲಿದ್ದೀರಾ..? ಮಾನಸಿಕ ಆರೋಗ್ಯಕ್ಕಾಗಿ ಈ ಮಾರ್ಗ ಅನುಸರಿಸಿ..!

ABOUT THE AUTHOR

...view details