ಕರ್ನಾಟಕ

karnataka

ನಾನು ಮಂಡ್ಯ ಸೊಸೆ, ರಾಜಕಾರಣ ಬಿಟ್ಟರೂ ಸ್ವಾಭಿಮಾನ ಸಿದ್ದಾಂತವನ್ನ ಬಿಡಲ್ಲ: ಸಂಸದೆ ಸುಮಲತಾ

By ETV Bharat Karnataka Team

Published : Nov 3, 2023, 9:20 PM IST

Updated : Nov 3, 2023, 11:00 PM IST

ರಾಜಕಾರಣ ಬಿಟ್ಟರೂ ಮಂಡ್ಯ ಬಿಡಲ್ಲ ಎಂದು ಹೇಳಿರುವ ಸಂಸದೆ ಸುಮಲತಾ ಅಂಬರೀಶ್, ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಸ್ಪರ್ಧೆ ಮಂಡ್ಯದಿಂದಲೇ ಎಂಬ ಮಾತುಗಳನ್ನು ಆಡಿದ್ದಾರೆ. ​

ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್

ಸಂಸದೆ ಸುಮಲತಾ ಅಂಬರೀಶ್​ ಹೇಳಿಕೆ

ಮಂಡ್ಯ: ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ರಾಜಕಾರಣ ಬಿಟ್ಟರೂ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ. ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ.‌ ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ ಬಿಜೆಪಿ ಮೈತ್ರಿ ಕುರಿತು ಮಾತನಾಡಿದ ಅವರು, ಮೈತ್ರಿ ಆಗಿದೆ. ಆದರೆ, ಕ್ಷೇತ್ರ ಹಂಚಿಕೆ ಇನ್ನು ಆಗಿಲ್ಲ. ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ದುಡುಕಿನ ನಿರ್ಧಾರ ಮಾಡಲ್ಲ. ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನೂರಾರು ನಡೆದಿರಬಹುದು. ಆದರೆ ಇನ್ನು ಯಾವುದೇ ಕ್ಷೇತ್ರ ಹಂಚಿಕೆ ಆಗಿಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ವಿಶ್ವಾಸ ಇದೆ. ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ನಾನು ಕೇಳಿಲ್ಲ.

ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಕಳೆದ ಚುನಾವಣೆಯಲ್ಲೇ ಬೆಂಗಳೂರು ಉತ್ತರ ಆಫರ್ ನಿರಾಕರಿಸಿದ್ದೆ. ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನ ನೂರಾರು ಬಾರಿ ಹೇಳಿದ್ದೇನೆ. ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಚಾಲೆಂಜಿಂಗ್. ಚಾಲೆಂಜ್‌ಗೆ ಹೆದರುವ ಸ್ವಭಾವ ನನ್ನದ್ದಲ್ಲ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಇನ್ನು ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರವರ ಪಕ್ಷದ ಆಂತರಿಕ ವಿಚಾರ, ನಾನು ಈ ಬಗ್ಗೆ ಮಾತನಾಡಲ್ಲ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಹಾಗೂ ನೀರಿನ ಸಮಸ್ಯೆ ಇದೆ. ಅನುದಾನ ಸಿಗದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಚಿತ ಗ್ಯಾರಂಟಿ ಕೊಟ್ಟರೆ ಅಭಿವೃದ್ಧಿ ಕೆಲಸ ಆಗಲ್ಲ ಎಂದು ಮೊದಲೇ ಹೇಳಲಾಗಿತ್ತು. ಚುನಾವಣೆ ಗೆಲ್ಲುವ ಉದ್ದೇಶದಿಂದ ಉಚಿತ ಭಾಗ್ಯಕೊಟ್ಟರೆ ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಎಲ್ಲಿಂದ ತರ್ತೀರಾ? ಫಂಡ್ಸ್ ಹುಟ್ಸೋಕೆ ಆಗಲ್ಲ, ಇರೋದರಲ್ಲೇ ಅಭಿವೃದ್ದಿ ಮಾಡಬೇಕು. ನೀವು ಉಚಿತ ಕೊಡ್ತಿರುವುದು ಜನರಿಗೂ ತೊಂದರೆ ಆಗುತ್ತದೆ. ಅದು ಅವರಿಗೂ ಗೊತ್ತಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕೂಡ ಉಚಿತ ಗ್ಯಾರಂಟಿ‌ಗಳ ಚಾಲೆಂಜ್ ಫೇಸ್ ಮಾಡ್ತಿದೆ ಎಂದರು.

ಬಳಿಕ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪದೇ ಪದೇ ಏಕೆ ತಮಿಳುನಾಡು ಪರ ತೀರ್ಪು ಹೋಗುತ್ತಿದೆ ಎನ್ನುವುದು ಅರ್ಥ ಆಗದೇ ಇರುವಂತಹ ವಿಚಾರವಾಗಿದೆ. ಈ ಬಗ್ಗೆ ವಾದ ಮಾಡುವುದರಲ್ಲಿ ನಾವು ಹಿನ್ನಡೆ ಆಗ್ತಿದ್ದೀವಾ ಅನ್ನೋದೇ ಒಂದು ದೊಡ್ಡ ಪ್ರಶ್ನೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಸಚಿವ ರಾಜಣ್ಣ ಹೇಳಿಕೆಗೆ ನಾನು ಆಭಾರಿ ಆಗಿದ್ದೇನೆ: ಗೃಹ ಸಚಿವ ಪರಮೇಶ್ವರ್

Last Updated :Nov 3, 2023, 11:00 PM IST

ABOUT THE AUTHOR

...view details