ಕರ್ನಾಟಕ

karnataka

ಅತ್ತ ಓಪನ್​​ ಆಗದ ಮೈಷುಗರ್ ಕಾರ್ಖಾನೆ : ಇತ್ತ ಸಂಶೋಧನಾ ಕೇಂದ್ರ ಸ್ಥಳಾಂತರಕ್ಕೆ ಸರ್ಕಾರ ಚಿಂತನೆ

By

Published : Sep 11, 2021, 6:47 PM IST

Updated : Sep 12, 2021, 8:36 AM IST

ಯಾವುದೇ ಕಾರಣಕ್ಕು ಸಂಶೋಧನಾ ಸಂಸ್ಥೆ ಸ್ಥಳಾಂತರಿಸದೆ ಯಥಾಸ್ಥಿತಿ ಮುಂದುವರೆಸಬೇಕು ಎಂದು ಮಂಡ್ಯ ರೈತ ಹಿತರಕ್ಷಣಾ ಸಮಿತಿ, ರೈತ ಮುಖಂಡರು ಆಗ್ರಹಿಸಿದ್ದಾರೆ. ಈ ಕಬ್ಬು ಸಂಶೋಧನಾ ಸಂಸ್ಥೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಲ್ಪನೆಯಂತೆ ಕಳೆದ 15 ವರ್ಷದ ಹಿಂದೆ ಪ್ರಾರಂಭವಾಗಿದೆ. ಕಬ್ಬಿನ ಹಲವಾರು ತಳಿಗಳು, ಇಳುವರಿ ನೀಡುವ ವಿವಿಧ ತಳಿ ಕಬ್ಬನ್ನು ರೈತರಿಗೆ ಪರಿಚಯಿಸಲಾಗಿದೆ..

ಮೈಷುಗರ್ ಕಾರ್ಖಾನೆ
ಮೈಷುಗರ್ ಕಾರ್ಖಾನೆ

ಮಂಡ್ಯ :ಸ್ಥಗಿತಗೊಂಡಿರುವಮಂಡ್ಯ ಮೈಷುಗರ್ ಕಾರ್ಖಾನೆಯನ್ನ ಸರ್ಕಾರ ಮತ್ತೆ ಪುನಾರಂಭಿಸಲು ಮೀನಾಮೇಷ ಎಣಿಸುತ್ತಿದ್ದೆ. ಅದಾಗಲೇ ಮಂಡ್ಯದ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನ ಆಯುಕ್ತರ ಕಚೇರಿಯನ್ನ ಬೇರೆಡೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದೀಗ ಇದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆ ಸ್ಥಬ್ಧಗೊಂಡು ಹಲವು ವರ್ಷಗಳೇ ಕಳೆದಿವೆ. ಮತ್ತೆ ಕಾರ್ಖಾನೆ ಪುನಾರಂಭಿಸುವಂತೆ‌ ರೈತರು, ಜಿಲ್ಲೆಯ ಜನರು ಹೋರಾಟ ಮಾಡುತ್ತಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರ ಮಾತ್ರ ಕಾರ್ಖಾನೆ ಆರಂಭಿಸುವ ಬಗ್ಗೆ ಚಿಂತನೆ ನಡೆಸದೆ ಮೀನಾಮೇಷ ಎಣಿಸುತ್ತಿದೆ.

ಈ ಹೊತ್ತಲ್ಲೇ ಮಂಡ್ಯದಲ್ಲಿರುವ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನಲ್ಲಿರುವ ಸಂಸ್ಥೆಯ ಆಯುಕ್ತರ ಕಚೇರಿಯನ್ನ ಕುಂದಾನಗರಿ ಬೆಳಗಾವಿಗೆ ಸ್ಥಳಾಂತರಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ತೀರ್ಮಾನ ಇದೀಗ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ಕಾರಣಕ್ಕು ಸಂಶೋಧನಾ ಸಂಸ್ಥೆ ಸ್ಥಳಾಂತರಿಸದೆ ಯಥಾಸ್ಥಿತಿ ಮುಂದುವರೆಸಬೇಕು ಎಂದು ಮಂಡ್ಯ ರೈತ ಹಿತರಕ್ಷಣಾ ಸಮಿತಿ, ರೈತ ಮುಖಂಡರು ಆಗ್ರಹಿಸಿದ್ದಾರೆ. ಈ ಕಬ್ಬು ಸಂಶೋಧನಾ ಸಂಸ್ಥೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಲ್ಪನೆಯಂತೆ ಕಳೆದ 15 ವರ್ಷದ ಹಿಂದೆ ಪ್ರಾರಂಭವಾಗಿದೆ. ಕಬ್ಬಿನ ಹಲವಾರು ತಳಿಗಳು, ಇಳುವರಿ ನೀಡುವ ವಿವಿಧ ತಳಿ ಕಬ್ಬನ್ನು ರೈತರಿಗೆ ಪರಿಚಯಿಸಲಾಗಿದೆ.

ಅತ್ತ ಓಪನ್​​ ಆಗದ ಮೈಷುಗರ್ ಕಾರ್ಖಾನೆ : ಇತ್ತ ಸಂಶೋಧನಾ ಕೇಂದ್ರ ಸ್ಥಳಾಂತರಕ್ಕೆ ಸರ್ಕಾರ ಚಿಂತನೆ

ಈ ಕೇಂದ್ರದಿಂದ ಮಂಡ್ಯ ಅಲ್ಲದೇ ಹಳೆ ಮೈಸೂರು ಭಾಗದ ರೈತರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದ್ರೆ, ಇದೀಗ ಸ್ಥಳಾಂತರಿಸಿದ್ರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ. ಬೆಳಗಾವಿಯಲ್ಲಿ ಮತ್ತೊಂದು ಕಚೇರಿ ಬೇಕಿದ್ರೆ ತೆರೆಯಲಿ.

ಕಬ್ಬು ಸಂಶೋಧನಾ ಸಂಸ್ಥೆ ಉಳಿವಿಗಾಗಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿರುವ ರೈತರು, ಸದನದಲ್ಲಿ ಜಿಲ್ಲೆಯ ಶಾಸಕರು ಧ್ವನಿ ಎತ್ತದಿದ್ದರೆ ಅವರಿಗೂ ಜಿಲ್ಲೆಗೆ ಬಂದಾಗ ಘೇರಾವ್ ಹಾಕುತ್ತೇವೆ‌‌ ಎನ್ನುತ್ತಿದ್ದಾರೆ. ಮೈಷುಗರ್ ಕಾರ್ಖಾನೆ ಸ್ಥಗಿತದಿಂದ ಈಗಾಗಲೇ ಕಂಗಾಲಾಗಿರುವ ಜಿಲ್ಲೆಯ ರೈತರಿಗೆ, ಕಬ್ಬು ಸಂಶೋಧನಾ ಸಂಸ್ಥೆ ಸ್ಥಳಾಂತರಗೊಳ್ಳುವ ವಿಚಾರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Last Updated :Sep 12, 2021, 8:36 AM IST

ABOUT THE AUTHOR

...view details