ಕರ್ನಾಟಕ

karnataka

ನಾಳೆಯಿಂದ ಮೊದಲ ಹಂತದ ಲಸಿಕೆ ನೀಡಲು ಸಿದ್ಧತೆ : ಡಿಎಚ್ಒ ಮಂಚೇಗೌಡ

By

Published : Jan 15, 2021, 8:24 PM IST

ನಾಳೆಯಿಂದ ರಾಜ್ಯಾದ್ಯಂತ ಕೊರೊನಾ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದ್ದು, ಜಿಲ್ಲಾಡಳಿತ ಮೊದಲ ಹಂತದಲ್ಲಿ ಕೊವಿಶೀಲ್ಡ್​ ವ್ಯಾಕ್ಸಿನ್​ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಎಚ್ಒ ಮಂಚೇಗೌಡ ಮಾಹಿತಿ ನೀಡಿದರು.

ಡಿಎಚ್ಒ ಮಂಚೇಗೌಡ
DHO Manchegowda

ಮಂಡ್ಯ:ಜಿಲ್ಲೆಗೆ ಕೊರೊನಾ ವಾಕ್ಸಿನ್ ಆಮಿಸಿದ್ದು, ನಾಳೆಯಿಂದ ಮೊದಲ ಹಂತದಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು‌ ಡಿಎಚ್ಒ ಮಂಚೇಗೌಡ ತಿಳಿಸಿದರು.

ಡಿಎಚ್ಒ ಮಂಚೇಗೌಡ ಮಾಹಿತಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಮೊದಲ ಹಂತದಲ್ಲಿ ಬಂದಿರುವ 8 ಸಾವಿರ ಲಸಿಕೆಯನ್ನು 8 ಕೇಂದ್ರಗಳಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಫಾಯಿ ಕರ್ಮಚಾರಿ ಹಾಗೂ ಡಿ ಗ್ರೂಪ್ ನೌಕರರಿಗೆ ವಿತರಣೆ‌ ಮಾಡಲಾಗುವುದು. ಎರಡನೇ ಹಂತದಲ್ಲಿ ವೈದ್ಯರು, ಪೊಲೀಸರು, ಕಂದಾಯ ಸೇರಿದಂತೆ ವಿವಿಧ ಇಲಾಖೆ ನೌಕರರು ಸೇರಿ ವಯಸ್ಸಾದವರಿಗೆ ನೀಡಲಾಗುವುದು ಎಂದು ತಿಳಿಸಿದರು.

ನಾಳೆ 6 ತಾಲೂಕು ಆಸ್ಪತ್ರೆ ಸೇರಿ ಮಿಮ್ಸ್ ಆಸ್ಪತ್ರೆ ಹಾಗೂ ಕೊತ್ತತ್ತಿ ಪಿಹೆಚ್​​ಸಿನಲ್ಲಿ ಮೊದಲ ಹಂತದ ಲಸಿಕೆಗೆ 15,316 ಜನರಿಂದ ಆನ್​ಲೈನ್​​ ನೋಂದಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಶೇ.50ರಷ್ಟು ಲಸಿಕೆ ಜಿಲ್ಲಾ ಆರೋಗ್ಯ ಇಲಾಖೆಗೆ ಬಂದಿದೆ. ನಾಳೆ 8 ಕೇಂದ್ರದಲ್ಲಿ ತಲಾ 100 ಜನರಂತೆ 800 ಜನರಿಗೆ ಲಸಿಕೆ ವಿತರಣೆ ಮಾಡಲಾಗುವುದು. ಜಿಲ್ಲಾ ಆರೋಗ್ಯ ಇಲಾಖೆಯ 4ಡಿ ಫ್ರೀಜರ್​​​ನಲ್ಲಿ ಸಂಗ್ರಹ ಮಾಡಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಸೋಮವಾರದ ನಂತರ 72 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details