ಕರ್ನಾಟಕ

karnataka

ಪರಿಹಾರ ಕೇಳಿದ್ದಕ್ಕಾಗಿ ಅಧಿಕಾರಿಗಳಿಂದ ಧಮ್ಕಿ ಆರೋಪ: ವಿದ್ಯುತ್​ ​ಕಂಬ ಏರಿ ಕುಳಿತ ರೈತ!

By

Published : Dec 12, 2019, 9:32 AM IST

ಬೆಳೆ ಪರಿಹಾರ ಕೇಳಿದ್ದಕ್ಕೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಅಂತಾ ನೊಂದ ರೈತ ಹೈಟೆನ್ಷನ್​​ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕ ಸೋಮನಹಳ್ಳಿಯಲ್ಲಿ ನಡೆದಿದೆ.

farmer attempted suicide in Mandya
ವಿದ್ಯುತ್ ​ಟವರ್​ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಮಂಡ್ಯ:ಬೆಳೆ ಪರಿಹಾರ ಕೇಳಿದ್ದಕ್ಕೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಅಂತಾ ನೊಂದ ರೈತ ಹೈಟೆನ್ಷನ್​​ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕ ಸೋಮನಹಳ್ಳಿಯಲ್ಲಿ ನಡೆದಿದೆ.

ವಿದ್ಯುತ್ ​ಕಂಬ​ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಕುಮಾರ್, ವಿದ್ಯುತ್ ಕಂಬ ಏರಿದ ಆತ್ಮಹತ್ಯೆಗೆ ಯತ್ನಿಸಿದ ರೈತ. ಕುಮಾರ್​ ಸೂಕ್ತ ಬೆಳೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದನಂತೆ. ಆದರೆ ಪರಿಹಾರದ ನೀಡಬೇಕಾದ ಅಧಿಕಾರಿಗಳು ಪೊಲೀಸರಿಂದ ಧಮ್ಕಿ ಹಾಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಬೇಸತ್ತ ಕುಮಾರ್​, ತನ್ನ ಜಮೀನಿನಲ್ಲಿರುವ ವಿದ್ಯುತ್​ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಮಾರ್​ ಮನವೊಲಿಕೆಗೆ ಸ್ಥಳೀಯರು ಎಷ್ಟೇ ಪ್ರಯತ್ನಪಟ್ಟರು ವಿದ್ಯುತ್​ ಕಂಬದಿಂದ ಕೆಳಗಿಳಿದಿಲ್ಲ. ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

Intro:ಮಂಡ್ಯ: ಪರಿಹಾರ ಕೇಳಿದ್ದಕ್ಕೆ ಅಧಿಕಾರಿಗಳು ಬೆದರಿಕೆ ಹಾಕಿದ ಹಿನ್ನಲೆ ನೊಂದ ರೈತ ವಿದ್ಯುತ್ ಕಂಬವೇರಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕ ಸೋಮನಹಳ್ಳಿಯಲ್ಲಿ ನಡೆದಿದೆ.
ರೈತ ಕುಮಾರ್ ವಿದ್ಯುತ್ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದು, ತಮ್ಮ ಜಮೀನಿನ ಮೇಲೆ ಹಾದು ಹೋಗಿರುವ ಹೆವಿ ವಿದ್ಯುತ್ ಮಾರ್ಗದ ಕಂಬಕ್ಕೆ ಹತ್ತಿ ನಿಂತಿದ್ದಾರೆ.
ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದ ರೈತ ಕುಮಾರ್‌ಗೆ ಅಧಿಕಾರಿಗಳು ಸೂಕ್ತ ಪರಿಹಾರ ಕೊಡದೆ ಪೊಲೀಸರಿಂದ ಧಮ್ಕಿ ಹಾಕಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಅಧಿಕಾರಿಗಳ ನಡೆಗೆ ಬೇಸತ್ತು ಆತ್ಮಹತ್ಯೆ ಯತ್ನ ಮಾಡಿದ್ದಾನೆ.
ಕುಮಾರ್ ಮನವೊಲಿಕೆಗೆ ಸ್ಥಳೀಯರ ಯತ್ನ ಮಾಡುತ್ತಿದ್ದು, ಮನವೊಲಿಕೆಗೆ ಬಗ್ಗಿಲ್ಲ. ಇನ್ನೂ ಟವರ್ ಮೇಲೆಯೇ ಇದ್ದು, ಅಧಿಕಾರಿಗಳು ಸ್ಥಳಕ್ಕೆ ಹೋಗುತ್ತಿದ್ದಾರೆ.Body:ಯತೀಶ್ ಬಾಬು, ಮಂಡ್ಯConclusion:

ABOUT THE AUTHOR

...view details